ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್ ಕೊಹ್ಲಿ ದಂಪತಿ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಇತರ ಸೆಲೆಬ್ರಿಟಿಗಳಂತೆ ಅವರು ಮಕ್ಕಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಇದಕ್ಕೆ ಕಾರಣ ಹಲವು. ವಮಿಕಾ ಹಾಗೂ ಅಕಾಯ್ ಇಬ್ಬರ ಫೋಟೋಗಳನ್ನು ಅನುಷ್ಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈಗ ಅಕಾಯ್ ನೋಡೋಕೆ ಯಾವ ರೀತಿ ಇದ್ದಾನೆ ಅನ್ನೋ ವಿಚಾರ ರಿವೀಲ್ ಆಗಿದೆ. ಕಿರುತೆರೆ ನಟ ಆಮಿರ್ ಅಲಿ ಅವರು ಅಕಾಯ್ನ ಫೋಟೋ ನೋಡಿದ್ದಾರಂತೆ. ಅವರು ಸ್ಟಾರ್ ದಂಪತಿಯ ಮಗನ ಬಗ್ಗೆ ಮಾತನಾಡಿದ್ದಾರೆ.
ಆಮಿರ್ ಅಲಿ ಅವರು ವಿರಾಟ್ ಕೊಹ್ಲಿ ಜೊತೆ ಜಾಹೀರಾತೊಂದರಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ವಿರಾಟ್ ಅವರು ಆಮಿರ್ಗೆ ಮಗನ ಫೋಟೋ ತೋರಿಸಿದ್ದಾರೆ. ‘ನಾವು ಜಾಹೀರಾತು ಶೂಟಿಂಗ್ ವೇಳೆ ಕ್ರಿಕೆಟ್ ಬಗ್ಗೆ ಮಾತನಾಡಿದೆ. ಯಾವಾಗ ಕುಟುಂಬದ ಬಗ್ಗೆ ಮಾತನಾಡಿದೆನೋ ಅವರ ಮುಖದಲ್ಲಿ ಬೇರೆಯದೇ ರೀತಿಯ ಸ್ಪಾರ್ಕ್ ಇತ್ತು’ ಎಂದಿದ್ದಾರೆ ಆಮಿರ್. ಈ ಮೂಲಕ ವಿರಾಟ್ ತಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ತೋರಿಸಿದ್ದಾರೆ.
‘ವಿರಾಟ್ ಅವರು ಮಗಳ ಫೋಟೋ ತೋರಿಸಿದರು. ಅನುಷ್ಕಾ ಬಗ್ಗೆ ಮಾತನಾಡಿದರು. ಆಗ ಅವರ ಮುಖದಲ್ಲಿ ಬೇರೆಯದೇ ಚಾರ್ಮ್ ಇತ್ತು. ಅದು ನನಗೆ ಇಷ್ಟ ಆಯಿತು. ನೀವು ಮಾಧ್ಯಮಗಳಿಂದ ಅವರನ್ನು ದೂರವೇ ಇಟ್ಟಿದ್ದು ಒಳ್ಳೆಯದಾಯಿತು ಎಂದು ನಾನು ಅವರಿಗೆ ಹೇಳಿದೆ. ಇದು ಅನುಷ್ಕಾ ಅವರ ನಿರ್ಧಾರ ಎಂದು ವಿರಾಟ್ ತಿಳಿಸಿದರು. ಅಕಾಯ್ ಸಖತ್ ಕ್ಯೂಟ್ ಆಗಿದ್ದಾನೆ. ಆತ ಗುಂಡು ಗುಂಡಾಗಿದ್ದಾನೆ’ ಎಂದಿದ್ದಾರೆ ಆಮಿರ್.
ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಹೋಲಿಸಿದರೆ ಅನುಷ್ಕಾ ಶರ್ಮಾ ಆಸ್ತಿ ತುಂಬಾನೇ ಕಡಿಮೆ; ಇಲ್ಲಿದೆ ವಿವರ
ಅನುಷ್ಕಾ ಶರ್ಮಾ ಹಾಗೂ ವಿರಾಟ್ ದಂಪತಿ ವಮಿಕಾ ಜನಿಸಿದ ಬಳಿಕ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದರು. ಸದ್ಯಕ್ಕಂತೂ ಮಗಳ ಫೋಟೋಗಳನ್ನು ರಿವೀಲ್ ಮಾಡುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ ಅಕಾಯ್ ವಿಚಾರದಲ್ಲೂ ಅವರು ಇದೇ ಪಾಲಿಸಿಯನ್ನು ಅನ್ವಯಿಸಿದ್ದಾರೆ. ಅನುಷ್ಕಾ ಶರ್ಮಾಗೆ ಇಂದು (ಮೇ 1) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.