Anushka Sharma: ‘ಮಗಳ ಬಟ್ಟೆ ಹಾಕಿ ಬಂದಿರಾ?’; ಅನುಷ್ಕಾ ಶರ್ಮಾ ಉಡುಗೆಗೆ ಟ್ರೋಲ್ ಕಾಟ
ಅನುಷ್ಕಾ ಶರ್ಮಾ ಅವರು ಜನವರಿ 24ರ ರಾತ್ರಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಹಳದಿ ಬಣ್ಣದ ಟಾಪ್ ಹಾಗೂ ಜೀನ್ಸ್ ಧರಿಸಿ ಅವರು ಪೋಸ್ ನೀಡಿದ್ದಾರೆ.
ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡುವಾಗ ಆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಟ್ರೋಲ್ಗಳಿಗೆ ಆಹಾರವಾಗಬೇಕಾಗುತ್ತದೆ. ಈಗ ಅನುಷ್ಕಾ ಶರ್ಮಾ (Anushka Sharma) ಕೂಡ ಟ್ರೋಲ್ ಆಗಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಡ್ರೆಸ್. ಸ್ವಲ್ಪ ಸಣ್ಣ ಬಟ್ಟೆ ಧರಿಸಿದ ಕಾರಣಕ್ಕೆ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿದೆ. ಈ ಬಗ್ಗೆ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.
ಅನುಷ್ಕಾ ಶರ್ಮಾ ಅವರು ಜನವರಿ 24ರ ರಾತ್ರಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಹಳದಿ ಬಣ್ಣದ ಟಾಪ್ ಹಾಗೂ ಜೀನ್ಸ್ ಧರಿಸಿ ಅವರು ಪೋಸ್ ನೀಡಿದ್ದಾರೆ. ಅವರ ಹಳದಿ ಬಣ್ಣದ ಡ್ರೆಸ್ ಪೂರ್ತಿ ದೇಹವನ್ನು ಮುಚ್ಚಿಲ್ಲ. ಇದು ಟ್ರೋಲ್ ಮಾಡುವವರ ಕಣ್ಣಿಗೆ ಬಿದ್ದಿದೆ. ಸಿಕ್ಕಿದ್ದೇ ಚಾನ್ಸ್ ಎಂದು ಅವರ ಫೋಟೋಗೆ ಬಗೆಬಗೆಯಲ್ಲಿ ಕಮೆಂಟ್ ಹಾಕಲಾಗುತ್ತಿದೆ.
‘ಅನುಷ್ಕಾ ಶರ್ಮಾ ಅವರು ಅರ್ಜೆಂಟ್ನಲ್ಲಿ ಮಗಳ ಬಟ್ಟೆ ಹಾಕಿ ಬಂದಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಇದು ನಿಮ್ಮ ಡ್ರೆಸ್ಸಾ ಅಥವಾ ಮಗಳ ಡ್ರೆಸ್ಸಾ?’ ಎಂದು ಪ್ರಶ್ನೆ ಮಾಡಿದ್ದಾರೆ. ‘ಮದುವೆ ಆಗಿ ಮಗು ಜನಿಸಿದರೂ ನಿಮಗೆ ಹೇಗೆ ಬಟ್ಟೆ ಹಾಕಿಕೊಳ್ಳಬೇಕು ಎಂಬುದು ತಿಳಿದಿಲ್ಲ’ ಎಂದು ಕೆಲವರು ಟೀಕೆ ಮಾಡಿದ್ದಾರೆ. ಅನುಷ್ಕಾ ಶರ್ಮಾ ಅಭಿಮಾನಿಗಳು ನಟಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಬಟ್ಟೆ ಎಂಬುದು ಅವರವರ ಆಯ್ಕೆ. ಅದನ್ನು ಟೀಕೆ ಮಾಡುವ ಹಕ್ಕು ಯಾರಿಗೂ ಇಲ್ಲ’ ಎಂದು ಅನುಷ್ಕಾ ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಅವರು ಟ್ರೋಲ್ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಈ ವಿಚಾರದಲ್ಲಿ ಅವರು ಸೈಲೆಂಟ್ ಆಗಿದ್ದೇ ಹೆಚ್ಚು. ಕೆಲವೇ ಕೆಲವು ಸಂದರ್ಭಗಳಲ್ಲಿ ಅವರು ಈ ವಿಚಾರದಲ್ಲಿ ತಿರುಗೇಟು ನೀಡಿದ್ದರು.
View this post on Instagram
ಇದನ್ನೂ ಓದಿ: ಬಾಂಬೆ ಹೈಕೋರ್ಟ್ ಮೊರೆಹೋದ ಅನುಷ್ಕಾ ಶರ್ಮಾ; ತೆರಿಗೆ ಇಲಾಖೆ ವಿರುದ್ಧ ನಟಿ ಗರಂ
2018ರಲ್ಲಿ ತೆರೆಗೆ ಬಂದ ‘ಜೀರೋ’ ಚಿತ್ರದ ಬಳಿಕ ಅನುಷ್ಕಾ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಸದ್ಯ, ‘ಚಕ್ದಾ ಎಕ್ಸ್ಪ್ರೆಸ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಕ್ರೀಡಾಧಾರಿತ ಸಿನಿಮಾ ಇದಾಗಿದ್ದು, ಅನುಷ್ಕಾ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ