Anushka Sharma: ಒಪ್ಪಿಗೆ ಇಲ್ಲದೆ ಫೋಟೋ ಪೋಸ್ಟ್ ಮಾಡಿದ ಪ್ರತಿಷ್ಠಿತ ಬ್ರ್ಯಾಂಡ್ಗೆ ಕ್ಲಾಸ್ ತೆಗೆದುಕೊಂಡ ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ ಅವರಿಗೂ ಪೂಮಾ ಸಂಸ್ಥೆ ಮಧ್ಯೆ ಯಾವುದೇ ಒಪ್ಪಂದ ಆಗಿಲ್ಲ. ಹೀಗಿದ್ದರೂ ಕೂಡ ಪೂಮಾ ಸಂಸ್ಥೆ ಪ್ರಮೋಷನ್ಗೆ ಅನುಷ್ಕಾ ಶರ್ಮಾ ಅವರ ಫೋಟೋ ಬಳಕೆ ಮಾಡಿಕೊಂಡಿದೆ.
ಬಾಲಿವುಡ್ನಲ್ಲಿ ಅನುಷ್ಕಾ ಶರ್ಮಾ (Anushka Sharma) ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಅವರು ಅನೇಕ ಬ್ರ್ಯಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮದೇ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. ಈ ಮೊದಲು ಅವರು ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಈಗ ಅದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಮ್ಮ ಸಹೋದರನಿಗೆ ವಹಿಸಿದ್ದಾರೆ. ಈ ಮಧ್ಯೆ ಅನುಷ್ಕಾ ಶರ್ಮಾ ಅವರು ಪೂಮಾ ಸಂಸ್ಥೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಮ್ಮ ಒಪ್ಪಿಗೆ ಇಲ್ಲದೆ ಪೂಮಾ (Puma) ಸಂಸ್ಥೆ ಫೋಟೋ ಬಳಸಿದ್ದೇ ಇದಕ್ಕೆ ಕಾರಣ.
ಕ್ರಿಕೆಟರ್ ಹಾಗೂ ಅನುಷ್ಕಾ ಶರ್ಮಾ ಅವರ ಪತಿ ವಿರಾಟ್ ಕೊಹ್ಲಿ ಪೂಮಾ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರು ಪೂಮಾ ಸಂಸ್ಥೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಪ್ರಮೋಷನ್ ಮಾಡುತ್ತಲೇ ಇರುತ್ತಾರೆ. ಆದರೆ, ಅನುಷ್ಕಾ ಶರ್ಮಾ ಅವರಿಗೂ ಪೂಮಾ ಸಂಸ್ಥೆ ಮಧ್ಯೆ ಯಾವುದೇ ಒಪ್ಪಂದ ಆಗಿಲ್ಲ. ಹೀಗಿದ್ದರೂ ಕೂಡ ಪೂಮಾ ಸಂಸ್ಥೆ ಪ್ರಮೋಷನ್ಗೆ ಅನುಷ್ಕಾ ಶರ್ಮಾ ಅವರ ಫೋಟೋ ಬಳಕೆ ಮಾಡಿಕೊಂಡಿದೆ.
ಪೂಮಾ ಸಂಸ್ಥೆಯ ಪೋಸ್ಟ್ನ ಸ್ಕ್ರೀನ್ಶಾಟ್ ತೆಗೆದುಕೊಂಡಿರುವ ಅನುಷ್ಕಾ ಶರ್ಮಾ, ‘ಹೇ ಪೂಮಾ ಇಂಡಿಯಾ, ನೀವು ಪ್ರಮೋಷನ್ಗೋಸ್ಕರ ನನ್ನ ಫೋಟೋ ಬಳಕೆ ಮಾಡುತ್ತೀರಿ ಎಂದರೆ ಅದಕ್ಕೆ ಒಪ್ಪಿಗೆ ಪಡೆಯಬೇಕು. ಏಕೆಂದರೆ ನಾನು ನಿಮ್ಮ ಸಂಸ್ಥೆಯ ರಾಯಭಾರಿ ಅಲ್ಲ. ಈ ಫೋಟೋನ ತೆಗೆಯಿರಿ’ ಎಂದು ಅನುಷ್ಕಾ ಆಗ್ರಹಿಸಿದ್ದಾರೆ.
ಕೆಲವರು ಇದು ಪ್ರಚಾರದ ಗಿಮಿಕ್ ಎಂದಿದ್ದಾರೆ. ‘ಅನುಷ್ಕಾ ಶರ್ಮಾ ಕೂಡ ಶೀಘ್ರವೇ ಪೂಮಾ ಸಂಸ್ಥೆಯ ರಾಯಭಾರಿ ಆಗಲಿದ್ದಾರೆ. ಅದಕ್ಕಾಗಿ ಇಷ್ಟೆಲ್ಲ ಗಿಮಿಕ್ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅನುಷ್ಕಾ ಶರ್ಮಾ ಅವರ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ. ‘ಪತಿ ರಾಯಭಾರಿ ಆಗಿರುವ ಸಂಸ್ಥೆಯ ವಿರುದ್ಧವೇ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ. ಇದು ಧೈರ್ಯದ ನಡೆ’ ಎಂದು ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಆಟ ಆಡುವಾಗ ಕಿರುಚಾಡಿದ ಅನುಷ್ಕಾ ಶರ್ಮಾ; ಪುತ್ರಿ ವಮಿಕಾ ರಿಯಾಕ್ಷನ್ ಹೇಗಿತ್ತು?
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಎರಡು ವರ್ಷಗಳ ಹಿಂದೆ ಮಗು ಜನಿಸಿದೆ. ಇದಕ್ಕೆ ವಮಿಕಾ ಎಂದು ಹೆಸರು ಇಡಲಾಗಿದೆ. ಮದುವೆ ನಂತರದಲ್ಲಿ ಅನುಷ್ಕಾ ಶರ್ಮಾ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲ. ಸದ್ಯ ಮಗುವಿನ ಆರೈಕೆಯಲ್ಲಿ ಅನುಷ್ಕಾ ಬ್ಯುಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Tue, 20 December 22