ತಮ್ಮ ಸಂಗೀತದ ಮೂಲಕವೇ ಎಷ್ಟೋ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ ಎ.ಆರ್. ರೆಹಮಾನ್. ಅವರಿಗೆ ಇರುವ ಬೇಡಿಕೆ ದೊಡ್ಡದು. ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಅವರಿಗೆ ಖ್ಯಾತಿ ಇದೆ. ಆಸ್ಕರ್ ಪ್ರಶಸ್ತಿ ಪಡೆದಿರುವ ಅವರು ಸಾವಿರಾರು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ ಎ.ಆರ್. ರೆಹಮಾನ್ ಅವರು ದುಬಾರಿ ಸಂಭಾವನೆ ಪಡೆಯುತ್ತಾರೆ. ವರದಿಗಳ ಪ್ರಕಾರ, ಒಂದು ಹಾಡಿಗೆ ಧ್ವನಿ ನೀಡಲು ಅವರು ಪಡೆಯುವ ಸಂಭಾವನೆ 3 ಕೋಟಿ ರೂಪಾಯಿ! ಸ್ಟಾರ್ ಸಿಂಗರ್ಸ್ ಎನಿಸಿಕೊಂಡ ಸೋನು ನಿಗಮ್, ಶ್ರೇಯಾ ಘೋಷಾಲ್ ಮುಂತಾದವರ ಸಂಭಾವನೆಗಿಂತಲೂ ಇದು 15 ಪಟ್ಟು ಅಧಿಕ ಮೊತ್ತ.
ಎ.ಆರ್. ರೆಹಮಾನ್ ಅವರು ಪೂರ್ಣಾವಧಿ ಸಿಂಗರ್ ಅಲ್ಲ. ಅಂದರೆ, ಅವರ ಮುಖ್ಯ ಕಸುಬು ಹಾಡುಗಾರಿಕೆ ಅಲ್ಲ. ಸಂಗೀತ ನಿರ್ದೇಶಕನಾಗಿ ಅವರು ಬ್ಯುಸಿ ಆಗಿದ್ದಾರೆ. ಹಾಗಿದ್ದರೂ ಕೂಡ ಅಲ್ಲೊಂದು ಇಲ್ಲೊಂದು ಹಾಡುಗಳಿಗೆ ಮಾತ್ರ ಅವರು ಧ್ವನಿ ನೀಡುತ್ತಾರೆ. ಅವರಿಂದ ಒಂದು ಹಾಡು ಹಾಡಿಸಬೇಕು ಎಂದರೆ ನಿರ್ಮಾಪಕರು 3 ಕೋಟಿ ರೂಪಾಯಿ ನೀಡಬೇಕು.
ಅಷ್ಟಕ್ಕೂ ಎ.ಆರ್. ರೆಹಮಾನ್ ಅವರು ಇಷ್ಟು ದೊಡ್ಡ ಮೊತ್ತವನ್ನು ಚಾರ್ಜ್ ಮಾಡಲು ಕಾರಣ ಕೂಡ ಇದೆ. ತಮ್ಮ ಬಳಿ ಯಾರೂ ಕೂಡ ಬಂದು ಹಾಡಲು ಒತ್ತಾಯ ಮಾಡಬಾರದು ಎಂಬುದು ಎ.ಆರ್. ರೆಹಮಾನ್ ಅವರ ಉದ್ದೇಶ. ಯಾಕೆಂದರೆ, ಅವರು ಗಾಯನಕ್ಕಿಂತಲೂ ಸಂಗೀತ ನಿರ್ದೇಶನಕ್ಕೆ ಹೆಚ್ಚು ಸಮಯ ನೀಡಬೇಕು. ಆದ್ದರಿಂದ ಗಾಯನಕ್ಕಾಗಿ ತಮ್ಮನ್ನು ಯಾರೂ ಕರೆಯಬಾರದು ಎಂದು 3 ಕೋಟಿ ರೂಪಾಯಿ ಸಂಭಾವನೆಯನ್ನು ಎ.ಆರ್. ರೆಹಮಾನ್ ನಿಗದಿ ಮಾಡಿಕೊಂಡಿದ್ದಾರೆ. ಹಾಗಿದ್ದರೂ ಕೂಡ ಕೆಲವು ನಿರ್ಮಾಪಕರು ಈ ದುಬಾರಿ ಸಂಬಳ ನೀಡಿ ಎ.ಆರ್. ರೆಹಮಾನ್ ಅವರಿಂದಲೇ ಹಾಡಿಸುತ್ತಾರೆ.
ಇದನ್ನೂ ಓದಿ: ‘ಅಪ್ಪು ಸಿನಿಮಾಗೆ ರೆಹಮಾನ್ ಮ್ಯೂಸಿಕ್ ಮಾಡ್ತಾರೆ ಎಂದುಕೊಂಡಿದ್ದೆ’; ಹಳೆಯ ಘಟನೆ ನೆನೆದ ಗುರುಕಿರಣ್
ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಗಾಯಕರಾಗಿ ಗುರುತಿಸಿಕೊಂಡಿರುವ ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ಸೋನು ನಿಗಮ್ ಅವರು ಪ್ರತಿ ಹಾಡಿಗೆ ಹಲವು ಲಕ್ಷ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ. ಪ್ರತಿ ಹಾಡಿಗೆ ಶ್ರೇಯಾ ಘೋಷಾಲ್ ಅವರು 25 ಲಕ್ಷ ರೂಪಾಯಿ ಪಡೆಯುತ್ತಾರೆ. ಸುನಿಧಿ ಚೌಹಾಣ್ ಅವರು 18ರಿಂದ 20 ಲಕ್ಷ ರೂಪಾಯಿ ಪಡೆಯುತ್ತಾರೆ. ಅರಿಜಿತ್ ಸಿಂಗ್ ಕೂಡ ಇಷ್ಟೇ ಪ್ರಮಾಣದ ಸಂಬಳ ಡಿಮ್ಯಾಂಡ್ ಮಾಡುತ್ತಾರೆ. ಸೋನು ನಿಗಮ್ ಅವರು ಒಂದು ಹಾಡಿಗೆ 15ರಿಂದ 18 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.