ಅರ್ಬಾಜ್ ಖಾನ್ ಮೂರನೇ ಮದುವೆ ಯಾವಾಗ? ಉತ್ತರಿಸಿದ ನಟ
Arbaaz Khan: ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಇತ್ತೀಚೆಗಷ್ಟೆ ಎರಡನೇ ಮದುವೆ ಆಗಿದ್ದಾರೆ. ಈ ಹಿಂದೆ ಅವರು ಮಲೈಕಾ ಅರೋರಾ ಅನ್ನು ವಿವಾಹವಾಗಿದ್ದರು. ಇದೀಗ ಅವರು ಮೂರನೇ ಮದುವೆ ಬಗ್ಗೆ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಸಹೋದರ ಹಾಗೂ ನಟ ಅರ್ಬಾಜ್ ಖಾನ್ ತಮ್ಮ ವೈಯಕ್ತಿಕ ಜೀವನದ ವಿಚಾರದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷ, ಅವರು ಮೇಕಪ್ ಕಲಾವಿದ ಶುರಾ ಖಾನ್ ಅವರನ್ನು ವಿವಾಹವಾದರು. ಅವರ ವಯಸ್ಸಿನ ಅಂತರದಿಂದಾಗಿ, ಈ ಜೋಡಿ ಹೆಚ್ಚಾಗಿ ಟ್ರೋಲ್‌ಗಳಿಗೆ ಗುರಿಯಾಗುತ್ತಿದೆ. ಈಗ, ಅರ್ಬಾಜ್ ಇನ್‌ಸ್ಟಾಗ್ರಾಮ್‌ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್ ಮೂಲಕ ಅಭಿಮಾನಿಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ಹಿಂಬಾಲಕರು ಅರ್ಬಾಜ್ ಅವರ ಮೂರನೇ ಮದುವೆಯ ಬಗ್ಗೆ ನೇರವಾಗಿ ಕೇಳಿದ್ದಾರೆ. ಅದಕ್ಕೆ ಅರ್ಬಾಜ್ ಕೂಡ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.
ಅರ್ಬಾಜ್ ಖಾನ್ 1997 ರಲ್ಲಿ ನಟಿ ಮಲೈಕಾ ಅರೋರಾ ಅವರನ್ನು ವಿವಾಹವಾದರು. 2017ರಲ್ಲಿ ಇವರಿಬ್ಬರು ಬೇರ್ಪಟ್ಟರು. ಇಬ್ಬರಿಗೂ ಅರ್ಹಾನ್ ಎಂಬ ಮಗನಿದ್ದಾನೆ. ಅರ್ಬಾಜ್ ಎರಡನೇ ಮದುವೆ ಬಳಿಕವೂ ಮಲೈಕಾ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಈಗ ಅವರಿಗೆ ಮೂರನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.
‘ಆಸ್ಕ್ ಮಿ ಎನಿಥಿಂಗ್’ ಸೆಷನ್‌ನಲ್ಲಿ, ಮಹಿಳಾ ಅಭಿಮಾನಿಯೊಬ್ಬರು ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ . ‘ನನಗೆ ನಿಮ್ಮ ಅಣ್ಣನ ಹೆಂಡತಿಯಾಗಬೇಕು. ಇದರ ಬಗ್ಗೆ ನೀವೇನು ಹೇಳುತ್ತೀರಿ’ ಎಂದು ಅರ್ಬಾಜ್‌ಗೆ ಬಳಕೆದಾರರು ಪ್ರಶ್ನಿಸಿದ್ದಾರೆ. ಅದಕ್ಕೆ ಅರ್ಬಾಜ್, ‘ನಾನು ಏನು ಹೇಳಲಿ? ಮುನ್ನಾಭಾಯ್ ಮುಂದುವರಿಸಿ’ ಎಂದಿರುವ ಅವರು ನಗುತ್ತಿರುವ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:58ನೇ ವಯಸ್ಸಿನಲ್ಲೂ ಹೇಗಿದೆ ನೋಡಿ ಸಲ್ಮಾನ್ ಖಾನ್ ಫಿಟ್ನೆಸ್; ಇಲ್ಲಿದೆ ಫೋಟೋ
ಇನ್ನೊಬ್ಬ ಬಳಕೆದಾರರು ಅರ್ಬಾಜ್ ಅವರ ಮೂರನೇ ಮದುವೆಯ ಬಗ್ಗೆ ಕೇಳಿದರು. ‘ಮುಂದಿನ ಮದುವೆ’ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರ್ಬಾಜ್, ನಗುತ್ತಿರುವ ಮತ್ತು ಕೈ ಮುಗಿಯುತ್ತಿರವ ಎಮೋಜಿಯೊಂದಿಗೆ ‘ಬಾಸ್, ಹೋ ಗಯಾ ಭಾಯಿ’ (ಈಗ ಸಾಕು ಸಹೋದರ) ಎಂದು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು ಅರ್ಬಾಜ್ ಅವರ ಪತ್ನಿಯ ಅಡುಗೆ ಬಗ್ಗೆ ಪ್ರಶ್ನಿಸಿದ್ದಾರೆ. ‘ಶುರಾ ಅವರವನ್ನು ಯಾವ ಅಡುಗೆಯನ್ನಯ ಅತ್ಯುತ್ತಮವಾಗಿ ಮಾಡುತ್ತಾರೆ?’ ಎಂದು ಕೇಳಲಾಗಿದೆ. ‘ತುಂಬಾ ಚೆನ್ನಾಗಿ ಮಟನ್ ಬಿರಿಯಾನಿ ಮಾಡುತ್ತಾಳೆ’ ಎಂದು ಉತ್ತರಿಸಿದ್ದಾರೆ. ಈ ಪ್ರಶ್ನೋತ್ತರ ಅವಧಿಯಲ್ಲಿ ಅರ್ಬಾಜ್ ತಮ್ಮ ನೆಚ್ಚಿನ ವ್ಯಕ್ತಿಯ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಈ ಬಾರಿ ಅವರು ತಮ್ಮ ತಂದೆ ಸಲೀಂ ಖಾನ್ ಅವರ ಹೆಸರನ್ನು ತೆಗೆದುಕೊಂಡರು.
ಅರ್ಬಾಜ್ ಮತ್ತು ಶುರಾ ‘ಪಟ್ನಾ ಶುಕ್ಲಾ’ ಚಿತ್ರದ ಸೆಟ್‌ನಲ್ಲಿ ಭೇಟಿಯಾದರು. ಶುರಾ ಅವರೊಂದಿಗಿನ ತನ್ನ ಮೊದಲ ಭೇಟಿಯ ಬಗ್ಗೆ ಮಾತನಾಡುತ್ತಾ, ಅರ್ಬಾಜ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ‘ಚಿತ್ರದ ಶೂಟಿಂಗ್ ಸಮಯದಲ್ಲಿ ನಾವು ಹೆಚ್ಚು ಮಾತನಾಡಲಿಲ್ಲ. ಆದರೆ ಶೂಟಿಂಗ್ ಪಾರ್ಟಿಯಲ್ಲಿ ನಾವು ಪರಸ್ಪರ ಮಾತನಾಡಿದ್ದೇವೆ. ನಂತರ ಸಂಪರ್ಕ ಬೆಳೆಯಿತು. ನಮ್ಮಲ್ಲಿ ಬಹಳಷ್ಟು ಸಾಮ್ಯತೆ ಇದೆ. ಒಬ್ಬರನ್ನೊಬ್ಬರು ಭೇಟಿಯಾಗಿ ಮಾತನಾಡುತ್ತಾ ನಮ್ಮ ನಡುವೆ ಪ್ರೀತಿಯ ಭಾವನೆ ಮೂಡಿತು’ ಎಂದಿದ್ದರು ಅವರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ