ಸಲ್ಮಾನ್-ಅರಿಜೀತ್ ಸಿಂಗ್ ಶೀತಲ ಸಮರ ಅಂತ್ಯ; ಒಂಭತ್ತು ವರ್ಷಗಳ ಹಿಂದೆ ಏನಾಗಿತ್ತು?

ಬುಧವಾರ ರಾತ್ರಿ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಮನೆ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ಗೆ ಅರಿಜೀತ್ ಸಿಂಗ್ ಭೇಟಿ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರ ಮಧ್ಯೆ ಇದ್ದ ದ್ವೇಷ ಶಮನವಾಗಿದೆ ಎಂದು ಅನೇಕರು ಊಹಿಸಿದ್ದಾರೆ.

ಸಲ್ಮಾನ್-ಅರಿಜೀತ್ ಸಿಂಗ್ ಶೀತಲ ಸಮರ ಅಂತ್ಯ; ಒಂಭತ್ತು ವರ್ಷಗಳ ಹಿಂದೆ ಏನಾಗಿತ್ತು?
ಸಲ್ಮಾನ್ ಖಾನ್-ಅರಿಜೀತ್
Updated By: ರಾಜೇಶ್ ದುಗ್ಗುಮನೆ

Updated on: Oct 05, 2023 | 10:49 AM

ಸಲ್ಮಾನ್ ಖಾನ್ (Salman Khan) ಅವರು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡರೆ, ಅರಿಜೀತ್ ಸಿಂಗ್ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಹಲವು ಸೂಪರ್ ಹಿಟ್ ಹಾಡುಗಳನ್ನು ಅವರು ನೀಡಿದ್ದಾರೆ. ಅವರ ಕಂಠಕ್ಕೆ ಮಾರುಹೋಗದವರೇ ಇಲ್ಲ. ಸಲ್ಮಾನ್ ಹಾಗೂ ಅರಿಜೀತ್ (Arijit Singh) ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ, 9 ವರ್ಷಗಳ ಹಿಂದೆ ಇವರ ಮಧ್ಯೆ ಶೀತಲ ಸಮರ ಶುರುವಾಗಿತ್ತು. ಅದು ಕೊನೆಯಾಗುವ ಸೂಚನೆ ಸಿಕ್ಕಿದೆ. ಅರಿಜೀತ್ ಸಿಂಗ್ ಅವರನ್ನು ಸಲ್ಮಾನ್ ಖಾನ್ ಕ್ಷಮಿಸಿದ್ದಾರೆ ಎನ್ನಲಾಗುತ್ತಿದೆ.

ಬುಧವಾರ (ಅಕ್ಟೋಬರ್ 5) ರಾತ್ರಿ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಮನೆ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ಗೆ ಅರಿಜೀತ್ ಸಿಂಗ್ ಭೇಟಿ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರ ಮಧ್ಯೆ ಇದ್ದ ದ್ವೇಷ ಶಮನವಾಗಿದೆ ಎಂದು ಅನೇಕರು ಊಹಿಸಿದ್ದಾರೆ. ‘ಟೈಗರ್ 3’ ಚಿತ್ರದಲ್ಲಿ ಅರಿಜೀತ್ ಹಾಡು ಇರಬಹುದು ಎಂಬುದು ಕೆಲವರ ಲೆಕ್ಕಾಚಾರ.

ಸಲ್ಮಾನ್ ಖಾನ್ ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಅರಿಜೀತ್ ಸಿಂಗ್ ಅವರು ಸಲ್ಮಾನ್ ಖಾನ್ ಮನೆಗೆ ಭೇಟಿ ನೀಡಿದ್ದಾರೆ. ಏನು ನಡೆಯುತ್ತಿದೆ’ ಎಂದು ಅವರು ವಿಡಿಯೋಗೆ ಕ್ಯಾಪ್ಶನ್ ನೀಡಿದ್ದಾರೆ. ಸಲ್ಮಾನ್ ಖಾನ್, ನಿರ್ದೇಶಕ ವಿಷ್ಣುವರ್ಧನ್ ಹಾಗೂ ನಿರ್ಮಾಪಕ ಕರಣ್ ಜೋಹರ್ ಹೊಸ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಲಿದ್ದಾರೆ. ಈ ಚಿತ್ರಕ್ಕೆ ಅರಿಜೀತ್ ಸಿಂಗ್ ಸಂಗೀತ ಸಂಯೋಜನೆ ಇರಲಿದೆಯೇ ಎನ್ನುವ ಕುತೂಹಲವೂ ಮೂಡಿದೆ.

ಅಂದಹಾಗೆ, ಇಬ್ಬರ ಮಧ್ಯೆ ವೈಮನಸ್ಸು  ಮೂಡಿದ್ದು 2014ರಲ್ಲಿ. ಸಲ್ಮಾನ್ ಖಾನ್ ಅವರು ಕಾರ್ಯಕ್ರಮ ಒಂದನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ಅವಾರ್ಡ್ ಸ್ವೀಕರಿಸಲು ಅರಿಜೀತ್ ಸಿಂಗ್ ಅವರು ವೇದಿಕೆ ಏರಿದರು. ಅರಿಜೀತ್ ಎಲ್ಲಿಯೋ ಹೋದರು ಸಿಂಪಲ್ ಡ್ರೆಸ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂದು ಕೂಡ ಅವರು ಹಾಗೆಯೇ ಬಂದರು. ‘ನೀವೇನಾ ವಿನ್ನರ್’ ಎಂದು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದರು. ಇದಕ್ಕೆ ಅರಿಜೀತ್ ಅವರು ಕೊಂಕಿನ ಉತ್ತರ ನೀಡಿದ್ದರು. ಇದಾದ ಬಳಿಕ ಸಲ್ಮಾನ್ ಖಾನ್ ನಟನೆಯ ‘ಸುಲ್ತಾನ್’, ‘ಕಿಕ್’, ‘ಸುಲ್ತಾನ್’, ಭಜರಂಗಿ ಭಾಯಿಜಾನ್’ ಸಿನಿಮಾಗಳಲ್ಲಿ ಅರಿಜೀತ್ ಹಾಡಿದ್ದ ಹಾಡನ್ನು ಯೂಟ್ಯೂಬ್​ನಿಂದ ತೆಗೆದು ಹಾಕಲಾಯಿತು.

ಇದನ್ನೂ ಓದಿ: Viral Video: ನೆರಳು ಬೆಳಕಿನಲ್ಲಿ ಅರಳಿದ ಅರಿಜೀತ್​ ಸಿಂಗ್​​; 30 ಮಿಲಿಯನ್​ ಜನರು ನೋಡಿದ ಈ ಕಲಾಕೃತಿ

2016ರಲ್ಲಿ ಅರಿಜೀತ್ ಅವರು ಓಪನ್ ಆಗಿ ಪತ್ರ ಬರೆದರು. ‘ಸಲ್ಮಾನ್ ಬಳಿ ಕ್ಷಮೆ ಕೇಳಲು ಸಾಕಷ್ಟು ಪ್ರಯತ್ನಿಸಿದ್ದೇನೆ. ನನ್ನ ಹಾಡುಗಳನ್ನು ಮರಳಿ ತರುವಂತೆ ಕೋರಿದ್ದೇನೆ. ಮೇಲ್​ ಹಾಗೂ ಮೊಬೈಲ್ ಸಂದೇಶದ ಮೂಲಕ ಕ್ಷಮೆ ಕೇಳಿದ್ದೇನೆ. ಆದರೆ, ಉತ್ತರ ಬರಲಿಲ್ಲ’ ಎಂದಿದ್ದರು ಅರಿಜೀತ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:04 am, Thu, 5 October 23