ಕ್ರಿಕೆಟರ್​ ಆಗುವ ಕನಸು ಕಂಡ ಬಡ ಹುಡುಗಿಗೆ ಅರ್ಜುನ್​ ಕಪೂರ್​ ಸಹಾಯ; ಭೇಷ್​ ಎಂದ ನೆಟ್ಟಿಗರು

|

Updated on: Apr 11, 2023 | 4:17 PM

ಸಚಿನ್​ ತೆಂಡುಲ್ಕರ್​ ರೀತಿ ಪ್ರಸಿದ್ಧ ಕ್ರಿಕೆಟರ್​ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್​ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ.

ಕ್ರಿಕೆಟರ್​ ಆಗುವ ಕನಸು ಕಂಡ ಬಡ ಹುಡುಗಿಗೆ ಅರ್ಜುನ್​ ಕಪೂರ್​ ಸಹಾಯ; ಭೇಷ್​ ಎಂದ ನೆಟ್ಟಿಗರು
ತನಿಶಾ, ಅರ್ಜುನ್ ಕಪೂರ್
Follow us on

ನಟ ಅರ್ಜುನ್​ ಕಪೂರ್​ (Arjun Kapoor) ಅವರದ್ದು ಫಿಲ್ಮಿ ಕುಟುಂಬ. ಅವರ ತಂದೆ ಬೋನಿ ಕಪೂರ್​ ಬಾಲಿವುಡ್​ನಲ್ಲಿ ಪ್ರಭಾವಿ ನಿರ್ಮಾಪಕ. ಹಾಗಿದ್ದರೂ ಕೂಡ ಅರ್ಜುನ್​ ಕಪೂರ್​ ಅವರು ಹಿಂದಿ ಚಿತ್ರರಂಗದಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಈ ನಡುವೆ ಅವರು ಮಲೈಕಾ ಅರೋರಾ ಜೊತೆಗಿನ ರಿಲೇಷನ್​ಶಿಪ್​ ಕಾರಣದಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಆದರೆ ಈಗ ಜನಮೆಚ್ಚುವಂತಹ ಒಂದು ಕಾರ್ಯವನ್ನು ಅರ್ಜುನ್ ಕಪೂರ್​ ಮಾಡಿದ್ದಾರೆ. ಕ್ರಿಕೆಟರ್​ ಆಗಬೇಕು ಎಂದು ಕನಸು ಕಂಡಿರುವ ಅನಿಶಾ ರಾವತ್​ (Anisha Rout) ಎಂಬ ಬಡ ಹುಡುಗಿಗೆ ಸಹಾಯ ಮಾಡಲು ಅರ್ಜುನ್​ ಕಪೂರ್​ ಮುಂದೆ ಬಂದಿದ್ದಾರೆ. ಅನಿಶಾಗೆ ಈಗ 11 ವರ್ಷ ವಯಸ್ಸು. ಆಕೆಗೆ 18ರ ಪ್ರಾಯ ಆಗುವ ತನಕ ಕ್ರಿಕೆಟ್​ ತರಬೇತಿಗೆ ಬೇಕಾಗುವ ಎಲ್ಲ ಸಾಮಾಗ್ರಿಗಳನ್ನು ಅರ್ಜುನ್​ ಕಪೂರ್ ಪೂರೈಸಲಿದ್ದಾರೆ.

ಕ್ರಿಕೆಟ್​ನಲ್ಲಿ ಮೊದಲಿನಿಂದಲೂ ಪುರುಷರ ಪ್ರಾಬಲ್ಯ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕೂಡ ಈ ಕ್ರೀಡೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯ ಬಹಳ ಇದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟರ್​ ಆಗಬೇಕು ಎಂದು ಕನಸು ಕಂಡಿರುವ ಲಕ್ಷಾಂತರ ಹುಡುಗಿಯರು ಇದ್ದಾರೆ. ಆದರೆ ಎಲ್ಲರಿಗೂ ಸೂಕ್ತ ತರಬೇತಿ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಅರ್ಜುನ್​ ಕಪೂರ್​ ಅವರು ಅನಿಶಾ ರಾವತ್​ಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

ಇದನ್ನೂ ಓದಿ: ವೀಕೆಂಡ್ ಮೋಜು ಮಸ್ತಿಯಲ್ಲಿ ಮಲೈಕಾ ಅರೋರಾ-ಅರ್ಜುನ್​ ಕಪೂರ್​; ವೈರಲ್ ಆಯ್ತು ಫೋಟೋ

ಇದನ್ನೂ ಓದಿ
ಮಲೈಕಾ ಅರೋರಾ ಪ್ರೆಗ್ನೆಂಟ್ ಎಂದು ಸುದ್ದಿ ಹಬ್ಬಿಸಿದವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಅರ್ಜುನ್ ಕಪೂರ್
‘ಭವಿಷ್ಯವನ್ನು ಒಟ್ಟಿಗೆ ಕಳೆಯುವ ಆಸೆ ಇದೆ’; ಅರ್ಜುನ್ ಕಪೂರ್ ಬಗ್ಗೆ ಮಲೈಕಾ ಮಾತು
20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​
12 ವರ್ಷ ಹಿರಿಯ ಮಹಿಳೆ ಜತೆಗಿನ ಪ್ರೀತಿ ಬಗ್ಗೆ ಬಾಯಿ ಬಿಟ್ಟ ಅರ್ಜುನ್​ ಕಪೂರ್​; ಬೇರೆ ಕಾರಣಕ್ಕೆ ತಂದೆ ಬೋನಿ ಕಪೂರ್​ ಕಣ್ಣೀರು

ಸಚಿನ್​ ತೆಂಡುಲ್ಕರ್​ ರೀತಿ ಪ್ರಸಿದ್ಧ ಕ್ರಿಕೆಟರ್​ ಆಗಬೇಕು ಎಂಬುದು ಅನಿಶಾ ಆಸೆ. ಅದಕ್ಕಾಗಿ ಪ್ರತಿ ದಿನ 80 ಕಿಲೋ ಮೀಟರ್​ ಪ್ರಯಾಣ ಮಾಡಿ ಆಕೆ ತರಬೇತಿ ಪಡೆಯುತ್ತಿದ್ದಾಳೆ. ಅವಳ ಕನಸನ್ನು ನನಸು ಮಾಡಲು ಆಕೆಯ ತಂದೆ ಕೂಡ ಸಕಲ ಸಹಕಾರ ನೀಡುತ್ತಿದ್ದಾರೆ. ಆದರೆ ಬೇಕಾಗಿರುವ ಸಾಮಾಗ್ರಿಗಳನ್ನು ಒದಗಿಸಲು ಅವರಿಗೆ ಕಷ್ಟ ಆಗುತ್ತಿದೆ. ಈಗ ಅರ್ಜುನ್​ ಕಪೂರ್​ ಸಹಾಯ ಹಸ್ತ ಚಾಚಿರುವುದರಿಂದ ಅನಿಶಾ ಕನಸಿಗೆ ರೆಕ್ಕ ಬಂದಂತೆ ಆಗಿದೆ.

ಇದನ್ನೂ ಓದಿ: 20 ಕೋಟಿ ಕೊಟ್ಟು ಪ್ರೇಯಸಿ ಮಲೈಕಾ ಅರೋರಾ ಮನೆ ಸಮೀಪವೇ ಸ್ಕೈ ವಿಲ್ಲಾ ಖರೀದಿಸಿದ ಅರ್ಜುನ್​ ಕಪೂರ್​

ಕೂಲ್​ ಕ್ಯಾಪ್ಟನ್​ ಎಂಎಸ್​ ಧೋನಿ ಅವರ ಜೀವನವನ್ನು ಆಧರಿಸಿ ‘ಎಂಎಸ್​ ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ ಮೂಡಿಬಂದಿತ್ತು. ಆ ಸಿನಿಮಾವನ್ನು ನೋಡಿದ ಬಳಿಕ ಅನಿಶಾಗೆ ಕ್ರಿಕೆಟ್​ ಆಡುವ ಬಯಕೆ ಉಂಟಾಯಿತು. 10ನೇ ವಯಸ್ಸಿನಲ್ಲಿ ಆಕೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಪರವಾಗಿ ಅಂಡರ್​-15 ಮಹಿಳಾ ತಂಡದಲ್ಲಿ ಕ್ರಿಕೆಟ್​ ಆಡಿದ್ದಾಳೆ. ಮೂರು ಹಾಫ್​ ಸೆಂಚುರಿ ಬಾರಿಸಿದ್ದಾಳೆ. ಪ್ರಸ್ತುತ ಎಂಐಜಿ ಕ್ಲಬ್​ ಪರವಾಗಿ ಓಪನಿಂಗ್​ ಬ್ಯಾಟರ್​ ಆಗಿ ಆಡುತ್ತಿದ್ದಾಳೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:17 pm, Tue, 11 April 23