ಅರ್ಮಾನ್ ಮಲಿಕ್ ವಿವಾಹ; ಪ್ರಿಯತಮೆ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ

|

Updated on: Jan 02, 2025 | 5:33 PM

ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ಹಲವು ಸೂಪರ್​ ಹಿಟ್​ ಗೀತೆಗಳಿಗೆ ಧ್ವನಿ ಆಗಿರುವ ಸಿಂಗರ್ ಅರ್ಮಾನ್ ಮಲಿಕ್ ಅವರ ಮದುವೆ ನೆರವೇರಿದೆ. ಗರ್ಲ್​ಫ್ರೆಂಡ್​ ಆಶ್ನಾ ಶ್ರಾಫ್ ಜೊತೆ ಅವರ ವಿವಾಹ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸೆಲೆಬ್ರಿಟಿ ವಿವಾಹದ ಫೋಟೋಗಳು ವೈರಲ್ ಆಗಿದ್ದು, ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಅರ್ಮಾನ್ ಮಲಿಕ್ ವಿವಾಹ; ಪ್ರಿಯತಮೆ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಖ್ಯಾತ ಗಾಯಕ
Aashna Shroff, Armaan Malik
Follow us on

ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಅವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಇಂದು (ಜನವರಿ 2) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಮಾನ್ ಮಲಿಕ್ ಅವರು ಪ್ರಿಯತಮೆ ಆಶ್ನಾ ಶ್ರಾಫ್ ಜೊತೆ ಮದುವೆ ಆಗಿದ್ದಾರೆ. ಮದುವೆಯ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿದ್ದಾರೆ. ಅರ್ಮಾನ್ ಮಲಿಕ್ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ.

ಅರ್ಮಾನ್ ಮಲಿಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ತಮ್ಮ ಫ್ಯಾನ್ಸ್ ಜೊತೆ ಅವರು ಸಂಪರ್ಕದಲ್ಲಿ ಇರುತ್ತಾರೆ. ಆದರೆ ವೈಯಕ್ತಿಕ ಜೀವನದ ವಿಚಾರಗಳನ್ನು ಸಾಧ್ಯವಾದಷ್ಟು ಗೌಪ್ಯವಾಗಿ ಇಡುತ್ತಾರೆ. ಈಗ ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರ ಮದುವೆ ನಡೆದಿದೆ. ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅರ್ಮಾನ್ ಮಲಿಕ್ ಅವರು ಶುಭ ಸುದ್ದಿ ನೀಡಿದ್ದಾರೆ.

ಹಲವು ವರ್ಷಗಳಿಂದ ಅರ್ಮಾನ್ ಮಲಿಕ್ ಹಾಗೂ ಆಶ್ನಾ ಶ್ರಾಫ್ ಪ್ರೀತಿಸುತ್ತಿದ್ದರು. ಈಗ ಅವರು ಸತಿ-ಪತಿ ಆಗಿದ್ದಾರೆ. ಮದುವೆ ಫೋಟೋಗಳನ್ನು ಹಂಚಿಕೊಂಡು ‘ನೀನೇ ನನ್ನ ಮನೆ’ ಎಂದು ಅರ್ಮಾನ್ ಮಲಿಕ್ ಅವರು ಕ್ಯಾಪ್ಷನ್ ನೀಡಿದ್ದಾರೆ. 2023ರಲ್ಲಿ ಅರ್ಮಾನ್ ಮಲಿಕ್ ಮತ್ತು ಆಶ್ನಾ ಶ್ರಾಫ್ ನಿಶ್ಚಿತಾರ್ಥ ಆಗಿತ್ತು. ಫ್ಯಾಷನ್​ ಜಗತ್ತಿನಲ್ಲಿ ಆಶ್ನಾ ಶ್ರಾಫ್ ಸಕ್ರಿಯರಾಗಿದ್ದಾರೆ. ಯೂಟ್ಯೂಬರ್​ ಆಗಿಯೂ ಅವರು ಫೇಮಸ್​ ಆಗಿದ್ದಾರೆ.

ಇದನ್ನೂ ಓದಿ: ಸಡಗರದಿಂದ ನಡೆಯಿತು ಕೀರ್ತಿ ಸುರೇಶ್ ಮದುವೆ; ಪತಿ ಆಂಟೊನಿ ವಯಸ್ಸು ಎಷ್ಟು?

ಭಾರತೀಯ ಚಿತ್ರರಂಗದಲ್ಲಿ ಅರ್ಮಾನ್ ಮಲಿಕ್ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಹಿಂದಿ, ಕನ್ನಡ, ತೆಲುಗು, ಪಂಜಾಬಿ, ತಮಿಳು, ಮರಾಠಿ ಮಂತಾದ ಭಾಷೆಯ ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಅರ್ಮಾನ್ ಮಲಿಕ್ ಹಾಡಿನ ಗೀತೆಗಳು ಸೂಪರ್​ ಹಿಟ್ ಆಗಿವೆ. ‘ಮುಂಗಾರು ಮಳೆ 2’ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’, ‘ಚಕ್ರವರ್ತಿ’ ಸಿನಿಮಾದ ‘ಒಂದು ಮಳೆ ಬಿಲ್ಲು ಒಂದು ಮಳೆ ಮೋಡ..’, ‘ಐ ಲವ್​ ಯೂ’ ಸಿನಿಮಾದ ‘ಮಾತನಾಡಿ ಮಾಯವಾದೆ..’, ‘ಬನಾರಸ್​’ ಸಿನಿಮಾದ ‘ಮಾಯ ಗಂಗೆ..’ ಸೇರಿದಂತೆ ಅನೇಕ ಸೂಪರ್​ ಹಿಟ್​ ಹಾಡುಗಳು ಅರ್ಮಾನ್ ಮಲಿಕ್ ಅವರ ಕಂಠದಲ್ಲಿ ಮೂಡಿಬಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:32 pm, Thu, 2 January 25