Aryan Khan: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್; ಮುಂದಿನ ವಿಚಾರಣೆ ಯಾವಾಗ?

| Updated By: shivaprasad.hs

Updated on: Oct 26, 2021 | 6:19 PM

Aryan Khan Case: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ.

Aryan Khan: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್; ಮುಂದಿನ ವಿಚಾರಣೆ ಯಾವಾಗ?
ಆರ್ಯನ್ ಖಾನ್
Follow us on

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯನ್ನು ಮುಂಬೈ ಹೈಕೋರ್ಟ್ ಮುಂದೂಡಿದೆ. ನಾಳೆ (ಅಕ್ಟೋಬರ್ 27) ಮಧ್ಯಾಹ್ನ 2.30ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ. ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದರು. ಆರ್ಯನ್ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೊಹಟಗಿ ವಾದ ಮಂಡಿಸಿದರು. ಆರ್ಯನ್ ಪರ ಮೊದಲು ವಾದ ಮಂಡಿಸಿದ್ದ ಸತೀಶ್ ಮಾನೆಶಿಂಧೆ ಕೂಡ ಹಾಜರಿದ್ದರು. ಎನ್​ಸಿಬಿ ಪರ ವಕೀಲ ಅನಿಲ್ ಸಿಂಗ್ ವಾದ ಮಂಡಿಸಿದರು.

ಮುಕುಲ್ ರೋಹಟಗಿ ಆರ್ಯನ್ ಪರ ಪ್ರಸ್ತಾಪಿಸಿದ ಅಂಶಗಳೇನು?
23 ವರ್ಷದ ಆರ್ಯನ್ ಡ್ರಗ್ಸ್ ಸೇವನೆ ಮಾಡಿರಲಿಲ್ಲ. ವಿಶೇಷ ಅತಿಥಿಯಾಗಿ ಅವರನ್ನು ಪಾರ್ಟಿಗೆ ಕರೆಯಲಾಗಿತ್ತು. ಆರ್ಯನ್​ನನ್ನು ಪಾರ್ಟಿಗೆ ಆಹ್ವಾನಿಸಿದ್ದು ಪ್ರತೀಕ್​ ಗಾಬಾ.  ಎನ್​​ಸಿಬಿ ದಾಳಿ ವೇಳೆ ಆರ್ಯನ್ ಖಾನ್ ಬಳಿ ಏನೂ ಸಿಕ್ಕಿಲ್ಲ. ಡ್ರಗ್ಸ್ ಸೇವಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಬಂಧಿಸುವುದಕ್ಕೆ ಯಾವುದೇ ಕಾರಣ ಕೂಡ ಇರಲಿಲ್ಲ. ಈವರೆಗೆ ಆರ್ಯನ್ ಖಾನ್‌ಗೆ ಡ್ರಗ್ಸ್‌ ಟೆಸ್ಟ್‌ ಮಾಡಿಲ್ಲ. ಆರ್ಯನ್ ಖಾನ್‌ ಬಂಧನ ಕಾನೂನುಬಾಹಿರ ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದರು.

ಬಂಧಿತರು ಯುವಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಿ. ಆರ್ಯನ್ ಖಾನ್‌ರನ್ನು ಮತ್ತೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆರ್ಯನ್ ಖಾನ್ ಯಾವುದೇ ಫೈನಾನ್ಸ್‌ ಮಾಡಿಲ್ಲ. ವಿಶೇಷವಾಗಿ ಡ್ರಗ್ಸ್‌ ಪಾರ್ಟಿ ಕೇಸ್‌ನಲ್ಲಿ ಫೈನಾನ್ಸ್‌ ಮಾಡಿಲ್ಲ. ಸೆಕ್ಷನ್ 27A ಆರ್ಯನ್ ಖಾನ್‌ಗೆ ಅನ್ವಯಿಸುವುದಿಲ್ಲ. ಅಫೀಮು ಉತ್ಪಾದನೆಗೆ ಆರ್ಯನ್ ಹಣಕಾಸು ಒದಗಿಸಿಲ್ಲ. ಡ್ರಗ್ಸ್‌ ಕಳ್ಳಸಾಗಣೆಗಾಗಿ ಆರ್ಯನ್ ಯಾರಿಗೂ ಹಣ ನೀಡಿಲ್ಲ ಎಂದು ರೋಹಟಗಿ ವಾದ ಮಂಡಿಸಿದ್ದಾರೆ.

ಎನ್​ ಸಿಬಿ ಅಧಿಕಾರಿಗಳು ಪೊಲೀಸರಂತೆ ವರ್ತಿಸಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದೇವೆ. ಬೇರೆಯವರ ಶೂನಲ್ಲಿ ಡ್ರಗ್ಸ್ ಸಿಕ್ಕಿದರೆ ನನ್ನನ್ನು ಏಕೆ ಬಂಧಿಸಲಾಯ್ತು. ಬೇರೆಯವರ ಬಳಿ ಸಿಕ್ಕರೆ ಅದಕ್ಕೆ ನಾನು ಜವಾಬ್ದಾರನಲ್ಲ. ನನ್ನ ವಿರುದ್ಧ ಪಿತೂರಿ ಆರೋಪ ಹೊರಿಸಲಾಗಿದೆ. ಕೆಲವು ವಾಟ್ಸ್ ಅಪ್ ಚಾಟ್ಸ್ ನನ್ನ ಮೊಬೈಲ್ ನಿಂದ ತೆಗೆಯಲಾಗಿದೆ. ಯಾವುದೇ ಸಂಭಾಷಣೆಗಳು ಕ್ರೂಸ್ ಪಾರ್ಟಿಗೆ ಸಂಬಂಧಿಸಿದ್ದಲ್ಲ. ಸದ್ಯ ದ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಸಂಭಾಷಣೆ ನಡೆಸಿಲ್ಲ. ಹಾಗಾದರೆ ಈ ಪ್ರಕರಣದಲ್ಲಿ ಪಿತೂರಿ ಹೇಗೆ ಆಗುತ್ತದೆ. ಡ್ರಗ್ಸ್ ಸೇವನೆ,ಮಾರಾಟ ಅಥವಾ ಖರೀದಿಯಲ್ಲಿ ನಾನು ಭಾಗಿಯಾಗಿಲ್ಲ ಎಂದು ರೋಹಟಗಿ ವಾದಿಸಿದ್ದಾರೆ.

ಸಾಕ್ಷಿ ಸಲ್ಲಿಸಿರುವ ಅಫಿಡವಿಟ್ ಗೂ ನನಗೂ ಸಂಬಂಧವಿಲ್ಲ. ಸಾಕ್ಷಿ ನಂ1, ಸಾಕ್ಷಿ ನಂ 2 ಜತೆ ನನಗೆ ಸಂಬಂಧವಿಲ್ಲ. ಸಾಕ್ಷಿ ಸಲ್ಲಿಸಿರುವ ಅಫಿಡವಿಟ್ ರಾಜಕೀಯ ಪ್ರೇರಿತ ಎಂದಿದ್ದಾರೆ. ಇಲ್ಲ ಸಲ್ಲದ ವಿವಾದಗಳಿಗೆ ನನ್ನನ್ನು ಎಳೆದು ತರುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳಾಗಲಿ,ಸಾಕ್ಷಿಗಳಾಗಲಿ ನನ್ನ ಜತೆ ಸಂಪರ್ಕದಲ್ಲಿ ಇಲ್ಲ. 2018-19ರಲ್ಲಿ ಮಾಡಿರುವ ಚಾಟ್ಸ್ ಈಗ ಮುನ್ನಲೆಗೆ ತರಲಾಗಿದೆ. ಈ ಪ್ರಕರಣಕ್ಕೂ ಚಾಟ್ಸ್ ಗಳಿಗೂ ಸಂಬಂಧವಿಲ್ಲ ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದ್ದಾರೆ.

ಅಮೇರಿಕಾ ಹಾಗೂ ಹಲವು ದೇಶಗಳಲ್ಲಿ ಗಾಂಜಾ ಸೇವನೆ ಕಾನೂನು ಬದ್ಧವಾಗಿದೆ. ಅಚಿತ್ (A17) ಕ್ರೂಸ್ ನಲ್ಲಿ ಇರಲಿಲ್ಲ. ಆತನ ನಿವಾಸದಲ್ಲಿ ಅಚಿತ್ ನನ್ನು ಬಂಧಿಸಲಾಗಿದೆ. ಆರ್ಯನ್ ಜತೆ ಅಚಿತ್ ಗೆ ಸಂಬಂಧವೇ ಇಲ್ಲ ಎಂದ ರೋಹ್ಟಗಿ ಇದೇ ವೇಳೆ,  ರಾಗಿಣಿ ದ್ವಿವೇದಿ VS ಕರ್ನಾಟಕ ಪೊಲೀಸ್ ಕೇಸ್ ಪ್ರಸ್ತಾಪಿಸಿದ್ದಾರೆ. ರಾಗಿಣಿ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಪ್ರಕರಣದಲ್ಲಿ ರಾಗಿಣಿ ಬಳಿ ಡ್ರಗ್ಸ್ ಸಿಕ್ಕಿರಲಿಲ್ಲ. ಆದರೆ ಪಿತೂರಿ ಆರೋಪದ ಮೇಲೆ‌ ಬಂಧಿಸಲಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ. ಅರ್ಬಾಜ್ ಮರ್ಜೆಂಟ್ ಬಳಿ ಡ್ರಗ್ಸ್ ಸಿಕ್ಕ ವಿಷಯ ಪ್ರಸ್ತಾಪಿಸಿದ ರೋಹ್ಟಗಿ, ಅರ್ಬಾಜ್ ನನ್ನ ಸೇವಕನಲ್ಲ. ಆತನ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ. ಆತನ ಶೂ ನಲ್ಲಿ ಸಿಕ್ಕ ಡ್ರಗ್ಸ್ ಗೆ ನಾನು ಜವಾಬ್ದಾರನಲ್ಲ ಎಂದು ವಾದಿಸಿದ್ದಾರೆ. ಇದೇ ವೇಳೆ, ತಾನು ಅಧಿಕಾರಿಗಳನ್ನು, ಅವರ ತನಿಖೆಯ ಕುರಿತೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ತನಗದರ ಕುರಿತು ಯಾವ ಸಂಬಂಧವೂ ಇಲ್ಲ. ಜಾಮೀನ ಉದ್ದೇಶಕ್ಕಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಮುಕುಲ್ ರೋಹಟಗಿ ವಾದ ಮುಕ್ತಾಯ ಮಾಡಿದ್ದಾರೆ.

ಇದನ್ನೂ ಓದಿ:

Aryan Khan: ಗಾಂಜಾ ಕುರಿತ ಆರ್ಯನ್- ಅನನ್ಯಾ ವಾಟ್ಸಾಪ್ ಚಾಟ್ ಬಹಿರಂಗ; ಕೊಕೇನ್ ಬಗ್ಗೆಯೂ ಮಾತನಾಡಿದ್ದ ಆರ್ಯನ್

‘ಕಾಜೊಲ್ ಬಹಳ ಜೋರು, ವಿಪರೀತ ಮಾತನಾಡುತ್ತಾರೆ; ಮತ್ತೊಮ್ಮೆ ಭೇಟಿಯಾಗುವುದು ಬೇಡ’ ಎಂದು ಯೋಚಿಸಿದ್ದ ಅಜಯ್ ದೇವಗನ್

Published On - 6:13 pm, Tue, 26 October 21