ಆರ್ಯನ್​ ಮತ್ತೊಂದು ಮುಖ ಬಯಲು; ವೈರಲ್​ ಆಯ್ತು ಹಳೇ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Oct 04, 2021 | 2:55 PM

ಆರ್ಯನ್​ ಸೆಲೆಬ್ರಿಟಿ ಮಗ ಆಗಿರಬಹುದು. ಆದರೆ, ಅವರಿಗೆ ಎಲ್ಲರಿಗೂ ಸಹಾಯ ಮಾಡಬೇಕು ಎನ್ನುವ ಮನಸ್ಸಿದೆ. ಆರ್ಯನ್​ ಅವರು ಮಲೈಕಾ ಅರೋರಾ ಸೇರಿ ಇತರರ ಜತೆ ಮುಂಬೈನ ರೆಸ್ಟೋರೆಂಟ್​ ಒಂದಕ್ಕೆ ತೆರಳಿದ್ದರು.

ಆರ್ಯನ್​ ಮತ್ತೊಂದು ಮುಖ ಬಯಲು; ವೈರಲ್​ ಆಯ್ತು ಹಳೇ ವಿಡಿಯೋ
ಆರ್ಯನ್
Follow us on

ನಟ ಶಾರುಖ್​ ಖಾನ್​ ಅವರ ಮಗ ಆರ್ಯನ್​ ಖಾನ್​ಗೆ ಸಂಕಷ್ಟ ಹೆಚ್ಚುತ್ತಿದೆ. ಕೇವಲ 23ನೇ ವಯಸ್ಸಿಗೆ ಅವರು ಡ್ರಗ್ಸ್​ ಕೇಸ್​ನಲ್ಲಿ ಎನ್​ಸಿಬಿ ಬಲೆಗೆ ಬಿದ್ದಿದ್ದಾರೆ. ಇದರಿಂದ ಅವರ ಕರಿಯರ್​ಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಿರುವಾಗಲೇ ಆರ್ಯನ್​ ಅವರ ಮತ್ತೊಂದು ಮುಖ ಅನಾವರಣ ಆಗಿದೆ. ಹಳೆಯ ವಿಡಿಯೋ ಒಂದು ಈಗ ವೈರಲ್​ ಆಗಿದೆ.

ಆರ್ಯನ್​ ಸೆಲೆಬ್ರಿಟಿ ಮಗ ಆಗಿರಬಹುದು. ಆದರೆ, ಅವರಿಗೆ ಎಲ್ಲರಿಗೂ ಸಹಾಯ ಮಾಡಬೇಕು ಎನ್ನುವ ಮನಸ್ಸಿದೆ. ಆರ್ಯನ್​ ಅವರು ಮಲೈಕಾ ಅರೋರಾ ಸೇರಿ ಇತರರ ಜತೆ ಮುಂಬೈನ ರೆಸ್ಟೋರೆಂಟ್​ ಒಂದಕ್ಕೆ ತೆರಳಿದ್ದರು. ಅಲ್ಲಿಂದ ಅವರು ಹೊರ ಬರುತ್ತಿದ್ದಂತೆ ಸಣ್ಣ ಮಕ್ಕಳು ಭಿಕ್ಷೆ ಎತ್ತುತ್ತಿರುವುದು ಕಂಡು ಬಂದಿದೆ. ಈ ವೇಳೆ​ ಅವರಿಗೆ ಆರ್ಯನ್ ಸಹಾಯ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್​ ಆಗುತ್ತಿದೆ.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದಿದೆ. ಅಲ್ಲಿಂದ ಅವರನ್ನು ಎನ್​ಸಿಬಿ ಕಚೇರಿಗೆ ಕರೆದುಕೊಂಡು ಬರಲಾಯಿತು. ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ಈಗ ಅವರನ್ನು ಅರೆಸ್ಟ್​ ಮಾಡಲಾಗಿದೆ.  ಇದರಿಂದ ಶಾರುಖ್ ವಿಚಲಿತರಾಗಿದ್ದಾರೆ.

ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್​ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್​ನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.
ಆರ್ಯನ್​ ಖಾನ್​ಗೆ ನಟನಾಗುವ ಆಸಕ್ತಿ ಇಲ್ಲವಂತೆ. ಅದನ್ನು ಈ ಹಿಂದೆ ಶಾರುಖ್​ ಹೇಳಿಕೊಂಡಿದ್ದರು. ಹಾಗಂತ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದುಕೊಳ್ಳುತ್ತಾರೆ ಎಂದರ್ಥವಲ್ಲ. ನಿರ್ದೇಶನದಲ್ಲಿ ತೊಡಗಿಕೊಳ್ಳುವ ಆಸಕ್ತಿ ಅವರಿಗೆ ಇದೆ. ಲಂಡನ್​ನ ‘ಸೆವೆನ್​ ಓಕ್ಸ್​ ಹೈಸ್ಕೂಲ್​’ನಲ್ಲಿ ಆರ್ಯನ್​ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್​ ಆರ್ಟ್ಸ್​, ಸಿನಿಮ್ಯಾಟಿಕ್​ ಆರ್ಟ್ಸ್​, ಫಿಲ್ಮ್​ ಮತ್ತು ಟೆಲಿವಿಷನ್​ ಪ್ರೊಡಕ್ಷನ್​ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ.

ಇದನ್ನೂ ಓದಿ: ಆರ್ಯನ್​ ಖಾನ್​ಗೆ ಜಾಮೀನು ಅಥವಾ ಜೈಲು? ಮತ್ತೆ ಕೋರ್ಟ್​ ಮುಂದೆ ಬರಲಿರುವ ಶಾರುಖ್​ ಪುತ್ರ

‘ನಾನು​ 4ವರ್ಷಗಳಿಂದ ಡ್ರಗ್ಸ್​ ಸೇವಿಸುತ್ತಿದ್ದೇನೆ, ಅಪ್ಪ-ಅಮ್ಮಂಗೂ ಗೊತ್ತು‘; ಎನ್​ಸಿಬಿ ಎದುರು ಅಳುತ್ತ ಸತ್ಯ ಒಪ್ಪಿಕೊಂಡ ಶಾರುಖ್​ ಪುತ್ರ ಆರ್ಯನ್​ !