‘ನಾನು 4ವರ್ಷಗಳಿಂದ ಡ್ರಗ್ಸ್ ಸೇವಿಸುತ್ತಿದ್ದೇನೆ, ಅಪ್ಪ-ಅಮ್ಮಂಗೂ ಗೊತ್ತು‘; ಎನ್ಸಿಬಿ ಎದುರು ಅಳುತ್ತ ಸತ್ಯ ಒಪ್ಪಿಕೊಂಡ ಶಾರುಖ್ ಪುತ್ರ ಆರ್ಯನ್ !
Aryan Khan: ಡ್ರಗ್ಸ್ ಪಾರ್ಟಿಯಲ್ಲಿ ಎನ್ಸಿಬಿ ಬಂಧಿಸಿದವರನ್ನು ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಎಂದು ಗುರುತಿಸಲಾಗಿದೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಡ್ರಗ್ಸ್ ಪಾರ್ಟಿ (Drugs Party)ಯಲ್ಲಿ ಪಾಲ್ಗೊಂಡು ಇದೀಗ ಎನ್ಸಿಬಿ (NCB) ಬಳಿ ಸಿಕ್ಕಿಬಿದ್ದಿದ್ದಾರೆ. ಆರ್ಯನ್ರನ್ನು ಪೊಲೀಸರು ಬಂಧಿಸಿದಾಗ, ಅವರ ಲೆನ್ಸ್ ಬಾಕ್ಸ್ ಮತ್ತು ಶೂಗಳಲ್ಲಿ ಮಾದಕ ದ್ರವ್ಯ ಸಿಕ್ಕಿದ್ದಾಗಿ ಎನ್ಸಿಬಿ ಮಾಹಿತಿ ನೀಡಿತ್ತು. ಇದೀಗ ಇನ್ನೊಂದು ಅಚ್ಚರಿಯ ವಿಚಾರ ಎನ್ಸಿಬಿ ಮೂಲಗಳಿಂದ ಹೊರಬಿದ್ದಿದೆ. ‘ನಾನು ಕಳೆದ ನಾಲ್ಕು ವರ್ಷಗಳಿಂದಲೂ ಡ್ರಗ್ಸ್ ಸೇವಿಸುತ್ತಿದ್ದೇನೆ. ಬರೀ ಭಾರತದಲ್ಲಿ ಅಷ್ಟೇ ಅಲ್ಲ, ನಾನು ಯುಕೆ, ದುಬೈ ಸೇರಿ ಇನ್ನಿತರ ದೇಶಗಳಲ್ಲಿ ವಾಸವಾಗಿದ್ದಲೂ ಅಲ್ಲಿಯೂ ಡ್ರಗ್ಸ್ ತೆಗೆದುಕೊಂಡಿದ್ದೇನೆ. ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿರುವುದು ನನ್ನ ಅಪ್ಪ ಶಾರುಖ್ಖಾನ್ ಮತ್ತು ಅಮ್ಮ ಗೌರಿಗೂ ಗೊತ್ತಿದೆ’ ಎಂದು ಆರ್ಯನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎನ್ಸಿಬಿ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಅಷ್ಟೇ ಅಲ್ಲ, ಆರ್ಯನ್ ಎನ್ಸಿಬಿ ಅಧಿಕಾರಿಗಳ ವೇಳೆ ಇವೆಲ್ಲವನ್ನೂ ಹೇಳಿಕೊಂಡು ಅತ್ತಿದ್ದಾರೆ ಎಂದೂ ಹೇಳಲಾಗಿದೆ.
ಶನಿವಾರ ಮುಂಬೈನ ಕರಾವಳಿ ತೀರದಲ್ಲಿ ಐಷಾರಾಮಿ ಹಡಗೊಂದರಲ್ಲಿ ನಡೆದಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್ಸಿಬಿ, ಶಾರುಖ್ಖಾನ್ ಪುತ್ರ ಆರ್ಯನ್ ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದೆ. ಬಂಧಿತರನ್ನು ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚಂಟ್ ಕಳೆದ 15 ವರ್ಷಗಳಿಂದಲೂ ಸ್ನೇಹಿತರು. ಅರ್ಬಾಜ್ ಸಹ ಡ್ರಗ್ಸ್ ಅಡಿಕ್ಟ್ ಎಂಬುದನ್ನು ಎನ್ಸಿಬಿ ಹೇಳಿದೆ. ಇನ್ನು ಆರ್ಯನ್ ಖಾನ್ ತನ್ನ ತಂದೆ ಶಾರುಖ್ ಖಾನ್ ಮತ್ತು ತಾಯಿ ಗೌರಿಯೊಂದಿಗೆ ಫೋನ್ನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಹೆಚ್ಚಿಗೆ ಸಮಯ ಕೊಡಲಿಲ್ಲ. ಎರಡನೇ ನಿಮಿಷ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಮಗನ ಡ್ರಗ್ಸ್ ಚಟದ ಬಗ್ಗೆ ತಂದೆ-ತಾಯಿಗೆ ಗೊತ್ತಿತ್ತು ಎಂದೂ ಹೇಳಿದೆ.
ಇಂದು ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚಂಟ್ರನ್ನು ಮತ್ತೆ ಎನ್ಸಿಬಿ ನ್ಯಾಯಾಲಯದ ಎದುರು ಹಾಜರುಪಡಿಸಲಿದೆ. ಶನಿವಾರ ಕೋರ್ಟ್ಗೆ ಹಾಜರುಪಡಿಸಿದಾಗ ಇಂದಿನವರೆಗೆ ಅಂದರೆ ಅಕ್ಟೋಬರ್ 4ರವರೆಗೆ ಅವರನ್ನು ಎನ್ಸಿಬಿ ವಶಕ್ಕೆ ನೀಡಲಾಗಿತ್ತು. ಇಂದು ಜಾಮೀನು ಸಿಗಲಿದೆಯೋ ಅಥವಾ ಇನ್ನಷ್ಟು ದಿನಗಳ ಕಾಲ ಎನ್ಸಿಬಿ ಕಸ್ಟಡಿಯಲ್ಲಿ ಇರಬೇಕಾಗಿಬರಬಹುದೋ ಎಂಬುದನ್ನು ನೋಡಬೇಕು.
ಇದನ್ನೂ ಓದಿ: ಆರ್ಯನ್ ಖಾನ್ಗೆ ಜಾಮೀನು ಅಥವಾ ಜೈಲು? ಮತ್ತೆ ಕೋರ್ಟ್ ಮುಂದೆ ಬರಲಿರುವ ಶಾರುಖ್ ಪುತ್ರ
ಶಾರುಖ್ ಪುತ್ರ ಆರ್ಯನ್ ಖಾನ್ ಅರೆಸ್ಟ್ ಆದಾಗ ಅಕ್ಷಯ್ ಕುಮಾರ್ ಮಗ ಆರವ್ ಏನು ಮಾಡ್ತಿದ್ರು? ಎಲ್ಲಿದ್ರು?
Published On - 12:09 pm, Mon, 4 October 21