ಮತ್ತೆ ಬಾಂಬೆ ಹೈಕೋರ್ಟ್ ಮೊರೆ ಹೋದ ಶಾರುಖ್​​ ಖಾನ್ ಮಗ​; ಕಾರಣ ಏನು?

| Updated By: ರಾಜೇಶ್ ದುಗ್ಗುಮನೆ

Updated on: Dec 10, 2021 | 9:23 PM

ಆರ್ಯನ್​ ಖಾನ್​ಗೆ ಸಾಕಷ್ಟು ಷರತ್ತುಗಳನ್ನು ಹಾಕಿ ಜಾಮೀನು ನೀಡಲಾಗಿತ್ತು. ಇದನ್ನು ಅವರು ಪಾಲಿಸಲೇಬೇಕು. ಎನ್​ಸಿಬಿ ಕಚೇರಿಗೆ ಪ್ರತಿ ಶುಕ್ರವಾರ ತೆರಳಿ ಸಹಿ ಹಾಕುವುದು ಕೂಡ ಈ ಷರತ್ತಿನಲ್ಲಿದೆ.

ಮತ್ತೆ ಬಾಂಬೆ ಹೈಕೋರ್ಟ್ ಮೊರೆ ಹೋದ ಶಾರುಖ್​​ ಖಾನ್ ಮಗ​; ಕಾರಣ ಏನು?
ಆರ್ಯನ್​ ಖಾನ್​, ಶಾರುಖ್​ ಖಾನ್​
Follow us on

ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದ ಆರ್ಯನ್​ ಖಾನ್​ ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಆರ್ಯನ್​ ಅವರನ್ನು ಐಷಾರಾಮಿ ಹಡಗಿನಲ್ಲೇ ಅರೆಸ್ಟ್​ ಮಾಡಿದ್ದರು. ಈಗ ಈ ಪ್ರಕರಣದಲ್ಲಿ ಅವರು ಸಣ್ಣ ರಿಲೀಫ್​ ಪಡೆದುಕೊಂಡಿದ್ದಾರೆ. ಆದರೆ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ. ಇದು ಆರ್ಯನ್​ಗೆ ಕಿರಿಕಿರಿ ಉಂಟು ಮಾಡುತ್ತಿದೆ. ಹೀಗಾಗಿ, ಅವರು ಮತ್ತೆ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

ಆರ್ಯನ್​ ಖಾನ್​ಗೆ ಸಾಕಷ್ಟು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿತ್ತು. ಇದನ್ನು ಅವರು ಪಾಲಿಸಲೇಬೇಕು. ಎನ್​ಸಿಬಿ ಕಚೇರಿಗೆ ಪ್ರತಿ ಶುಕ್ರವಾರ ತೆರಳಿ ಸಹಿ ಹಾಕುವುದು ಕೂಡ ಈ ಷರತ್ತಿನಲ್ಲಿದೆ. ಜಾಮೀನು ಪಡೆದ ಆರೋಪಿ ಊರು ಬಿಡಬಹುದು. ಸಹಿ ವಿಧಿಸಿ ಹೋದರೆ ಅವರು ನಗರದಲ್ಲಿಯೇ ಇದ್ದಾರೆ ಎಂಬುದು ಗೊತ್ತಾಗುತ್ತದೆ. ಈ ಕಾರಣಕ್ಕೆ ಪ್ರತಿ ಶುಕ್ರವಾರ ಎನ್​ಸಿಬಿ ಕಚೇರಿಗೆ ತೆರಳುವಂತೆ ಆರ್ಯನ್​ ಖಾನ್​ಗೆ ಸೂಚಿಸಲಾಗಿತ್ತು. ಇದನ್ನು ಶಾರುಖ್​ ಮಗ ಪಾಲಿಸುತ್ತಿದ್ದಾರೆ.

ಪ್ರತಿ ಶುಕ್ರವಾರ ಆರ್ಯನ್​ ಖಾನ್​ ಮುಂಬೈನ ಎನ್​ಸಿಬಿ ಕಚೇರಿಗೆ ತೆರಳುತ್ತಿದ್ದಾರೆ. ಅಲ್ಲಿ ಸಹಿ ಹಾಕಿ ಮರಳುತ್ತಿದ್ದಾರೆ. ಆದರೆ, ಇಲ್ಲೊಂದು ಸಮಸ್ಯೆ ಎದುರಾಗಿದೆ. ಅವರು ಅಲ್ಲಿ ತೆರಳುವಾಗ ಮಾಧ್ಯಮಗಳು, ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಇದು ಅವರಿಗೆ ತೊಂದರೆ ಉಂಟು ಮಾಡುತ್ತಿದೆ. ಹೀಗಾಗಿ, ಜಾಮೀನು ಆದೇಶದಲ್ಲಿ ಬದಲಾವಣೆ ಮಾಡುವಂತೆ ಅವರು ಬಾಂಬೆ ಹೈಕೋರ್ಟ್​ ಮೆಟ್ಟಿಲು ಹತ್ತಿದ್ದಾರೆ. ಈ ಅರ್ಜಿ ಶೀಘ್ರವೇ ವಿಚಾರಣೆಗೆ ಬರಲಿದೆ.

ಆರ್ಯನ್ ಮತ್ತು ಇತರ ಆರೋಪಿಗಳಿಂದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಮರ್ಚಂಟ್ ಮತ್ತು ಧಮೇಚಾ ಅವರಿಂದ ಅಲ್ಪಪ್ರಮಾಣದ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ. ಆದರೆ ಎನ್​ಸಿಬಿ ಮಾತ್ರ ಎಲ್ಲ ಆರೋಪಿಗಳ ಬಳಿ ವಾಣಿಜ್ಯ ಗುಣಮಟ್ಟದ ಡ್ರಗ್ಸ್​ ಪತ್ತೆಯಾಗಿತ್ತು. ಇವೆಲ್ಲವನ್ನೂ ಸಂಚಿನ ಭಾಗವಾಗಿ ಪರಿಗಣಿಸಬೇಕು ಎಂದು ಹೇಳಿತ್ತು. ಎನ್​ಡಿಪಿಎಸ್ ಕಾಯ್ದೆಯ ಅನ್ವಯ ಇದನ್ನು ಸಂಚು ಎಂದು ಪರಿಗಣಿಸಬೇಕು ಎಂದು ವಾದಿಸಿತ್ತು. ಮೂವರು ಆರೋಪಿಗಳು ಅಪರಾಧಕ್ಕಾಗಿ ಸಂಚು ರೂಪಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರರ ಜೊತೆಗೆ ಇದೇ ವಿಷಯವಾಗಿ ಚರ್ಚಿಸಿದ್ದರು ಎಂದು ನಿರೂಪಿಸುವ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಇದನ್ನೂ ಓದಿ: Aryan Khan: ಆರ್ಯನ್​ ಖಾನ್​ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್​ ಪುತ್ರ​