ಬಾಲಿವುಡ್ನಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಮತ್ತು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮಯಾಂಕ್ ದೀಕ್ಷಿತ್ (Mayank Dixit) ಅವರ ಮೇಲೆ ಹಲ್ಲೆ ಮಾಡಲಾಗಿದೆ. ಭಾನುವಾರ (ಜುಲೈ 2) ರಾತ್ರಿ ಈ ಘಟನೆ ನಡೆದಿದೆ ಎಂಬುದು ತಿಳಿದುಬಂದಿದೆ. 6 ಜನರ ಗುಂಪು ಮಯಾಂಕ್ ದೀಕ್ಷಿತ್ ಮೇಲೆ ಹಲ್ಲೆ (Assault) ಮಾಡಿದೆ. ಆರೋಪಿಗಳು ಈಗ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಲ್ಮಾನ್ ಖಾನ್ (Salman Khan) ನಟನೆಯ ‘ಯುವರಾಜ್’ ಸಿನಿಮಾಗೆ ಮಯಾಂಕ್ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಅವರ ಮೇಲೆ 6 ಮಂದಿಗೆ ಯಾವ ದ್ವೇಷ ಇತ್ತು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ದೆಹಲಿಯ ಲಕ್ಷ್ಮೀ ನಗರ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಕಾರು ನಿಲ್ಲಿಸುವ ವಿಚಾರಕ್ಕೆ ಮಯಾಂಕ್ ದೀಕ್ಷಿತ್ ಮತ್ತು 6 ಜನರ ನಡುವೆ ಜಗಳು ಶುರುವಾಯಿತು. ಅದು ವಿಕೋಪಕ್ಕೆ ತಿರುಗಿದಾಗ ಮಯಾಂಕ್ ಮೇಲೆ ಹಲ್ಲೆ ನಡೆಯಿತು. ಈ ಜಗಳದಲ್ಲಿ ಮಯಾಂಕ್ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ರಸ್ತೆ ಬದಿ ಸೊಪ್ಪು ಮಾರುತ್ತಿದ್ದ ವೃದ್ಧೆ ಮೇಲೆ ಮಚ್ಚಿನಿಂದ ಹಲ್ಲೆ; ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ
ಮಯಾಂಕ್ ದೀಕ್ಷಿತ್ ಮೇಲೆ ಹಲ್ಲೆ ಮಾಡಿದ ಆ 6 ಮಂದಿ ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನೆ ನಡೆದ ಸ್ಥಳದ ಅಕ್ಕಪಕ್ಕದ ಏರಿಯಾಗಳ ಸಿಸಿಟಿವಿ ದೃಶ್ಯಗಳನ್ನು ದೆಹಲಿ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಲ್ಲೆ ಕುರಿತಂತೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಘಟನೆಯ ಬಗ್ಗೆ ಮಯಾಂಕ್ ದೀಕ್ಷಿತ್ ಅವರು ಇನ್ನೂ ತಮ್ಮ ಹೇಳಿಕೆ ನೀಡುವುದು ಬಾಕಿ ಇದೆ. ಅವರ ತಲೆ ಮತ್ತು ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Goldy Brar: ‘ಸಲ್ಮಾನ್ ಖಾನ್ನನ್ನು ಖಂಡಿತಾ ಕೊಲ್ಲುತ್ತೇನೆ’: ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ
ಆಸ್ಪತ್ರೆಯ ಬೆಡ್ನಲ್ಲಿ ಮಯಾಂಕ್ ದೀಕ್ಷಿತ್ ಅವರು ಮಲಗಿರುವ ಫೋಟೋಗಳು ವೈರಲ್ ಆಗಿವೆ. ಅವರ ಕಣ್ಣಿನ ಭಾಗ ನೀಲಿ ಆಗಿದೆ. ಕುತ್ತಿಗೆಗೆ ಬ್ಯಾಂಡೇಜ್ ಹಾಕಲಾಗಿದೆ. ಮಯಾಂಕ್ ಕೆಲಸ ಮಾಡುವುದು ಮುಂಬೈನಲ್ಲಿ ಆದರೂ ಮೂಲತಃ ಅವರು ದೆಹಲಿಯವರು. ದೆಹಲಿಯಲ್ಲಿ ಜರ್ನಲಿಸಂ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಮುಂಬೈಗೆ ಬಂದು ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಅವರು ಫೇಮಸ್ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.