ಸಲ್ಮಾನ್ ಖಾನ್ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಸ್ವಲ್ಪ ಹೆಚ್ಚು-ಕಡಿಮೆ ಆದರೂ ಅವರ ಅಭಿಮಾನಿಗಳು ಇದನ್ನು ಸಹಿಸಿಕೊಳ್ಳುವುದಿಲ್ಲ. ಸಲ್ಮಾನ್ ಖಾನ್ಗೆ ಎಷ್ಟು ಕೋಪ ಇದೆಯೋ ಅದಕ್ಕಿಂತ ಹೆಚ್ಚಿನ ಕೋಪ ಸಲ್ಲು ಫ್ಯಾನ್ಸ್ಗೆ ಇದೆ. ಈಗ ‘ಬೇಬಿ ಜಾನ್’ ಸಿನಿಮಾ ರಿಲೀಸ್ ಬಳಿಕ ನಡೆದ ಒಂದು ಬೆಳವಣಿಗೆ ಸಲ್ಮಾನ್ ಖಾನ್ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಎಂಬ ಬಗ್ಗೆ ಇಲ್ಲಿದೆ ವಿವರ.
ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ನಟನೆಯ ‘ಬೇಬಿ ಜಾನ್’ ಇಂದು (ಡಿಸೆಂಬರ್ 25) ರಿಲೀಸ್ ಆಗಿದೆ. ಕ್ರಿಸ್ಮಸ್ ಪ್ರಯುಕ್ತ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನಿರ್ಮಾಪಕ ಅಟ್ಲೀ ಹಾಗೂ ನಟ ವರುಣ್ ಧವನ್ ಖಚಿತಪಡಿಸಿದ್ದಾರೆ. ಟ್ರೇಲರ್ ಲಾಂಚ್ನಲ್ಲಿ ಈ ಮಾಹಿತಿ ರಿವೀಲ್ ಆಗಿತ್ತು. ಆದರೆ, ಈಗ ಚಿತ್ರದ ದೃಶ್ಯಗಳು ಲೀಕ್ ಆಗಿವೆ.
ಸಲ್ಮಾನ್ ಅವರು ‘ಬೇಬಿ ಜಾನ್’ ಸಿನಿಮಾದಲ್ಲಿ ‘ಏಜೆಂಟ್ ಭಾಯಿ ಜಾನ್’ ಆಗಿ ಕಾಣಿಸಿಕೊಂಡಿದ್ದಾರೆ. ವರುಣ್ ಧವನ್ ಜೊತೆ ಸಲ್ಲು ಕೂಡ ಆ್ಯಕ್ಷನ್ ಮೆರೆದಿದ್ದಾರೆ. ಈ ದೃಶ್ಯಗಳು ಲೀಕ್ ಆಗಿರುವ ವಿಚಾರ ಫ್ಯಾನ್ಸ್ ಕೋಪಕ್ಕೆ ಕಾರಣ ಆಗಿದೆ. ಇದನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡುವಂತೆ ಅನೇಕರು ಕೋರಿದ್ದಾರೆ. ಸರ್ಪ್ರೈಸ್ನ ಹಾಳು ಮಾಡಿದ್ದಕ್ಕೆ ಅನೇಕರು ಬೇಸರಗೊಂಡಿದ್ದಾರೆ.
ಸಲ್ಮಾನ್ ಖಾನ್ ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಉದಾಹರಣೆ ಇದೆ. ಅವರು ಅತಿಥಿ ಪಾತ್ರ ಮಾಡಿದ ಕಾರಣಕ್ಕೂ ಸಿನಿಮಾಗಳು ಹಿಟ್ ಆದ ಉದಾಹರಣೆ ಇದೆ. ಈ ಕಾರಣದಿಂದಲೇ ‘ಬೇಬಿ ಜಾನ್’ ಚಿತ್ರಕ್ಕೆ ಮೈಲೇಜ್ ಸಿಕ್ಕಿತ್ತು. ಆದರೆ, ಪ್ರಮುಖ ದೃಶ್ಯವೇ ಲೀಕ್ ಆಗಿದ್ದಕ್ಕೆ ಕೆಲವರು ಬೇಸರಗೊಂಡಿದ್ದಾರೆ. ಮುಂದೇನು ಎನ್ನುವ ಪ್ರಶ್ನೆ ತಂಡದವರಿಗೂ ಮೂಡಿದೆ.
ಇದನ್ನೂ ಓದಿ: ಬಾಬಾ ಸಿದ್ದಿಕಿಗೂ ಮುನ್ನ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಶೂಟರ್ಸ್
ಸಲ್ಮಾನ್ ಖಾನ್ ಅವರು ಗೆಳೆತನಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರು ‘ಬೇಬಿ ಜಾನ್’ ಸಿನಿಮಾದಲ್ಲಿ ಉಚಿತವಾಗಿ ಅತಿಥಿ ಪಾತ್ರ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಟ್ಲಿ ಹಾಗೂ ಸಲ್ಮಾನ್ ಖಾನ್ ಅವರು ಒಟ್ಟಾಗಿ ಸಿನಿಮಾ ಮಾಡುವವರಿದ್ದಾರೆ. ಈ ಕಾರಣದಿಂದಲೂ ಸಲ್ಲು ಉಚಿತವಾಗಿ ನಟಿಸಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.