
ಸಂದೀಪ್ ರೆಡ್ಡಿ ವಂಗಾ ಮತ್ತು ದೀಪಿಕಾ ಪಡುಕೋಣೆ (Deepika Padukone) ನಡುವಿನ ಸಂಘರ್ಷ ಈಗ ಭಾರಿ ಚರ್ಚೆಯಲ್ಲಿದೆ. ಆದರೆ ನಟಿಯರ ಬೇಡಿಕೆಗಳ ಕುರಿತು ಗಲಾಟೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಪ್ರಭಾಸ್ ನಟನೆಯ ‘ಬಾಹುಬಲಿ’ ಸಿನಿಮಾದ ಸಮಯದಲ್ಲೂ ಇಂತಹುದೇ ಘಟನೆ ನಡೆದಿತ್ತು. ಆಗ ದಿವಂಗತ ನಟಿ ಶ್ರೀದೇವಿ ಹಾಗೂ ನಿರ್ದೇಶಕ ಎಸ್.ಎಸ್. ರಾಜಮೌಳಿ ನಡುವೆ ಬಹುದೊಡ್ಡ ವಿವಾದ ಸೃಷ್ಟಿಯಾಗಿತ್ತು.
ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದಿಂದ ದೀಪಿಕಾ ಹೊರಬಿದ್ದ ನಂತರ ಈ ವಿವಾದ ಆರಂಭವಾಯಿತು. ದೀಪಿಕಾ ಪಡುಕೋಣೆ ಹೆಚ್ಚಿನ ಸಂಭಾವನೆ ಕೇಳಿದರು. ಸಿನಿಮಾದ ಲಾಭದಲ್ಲಿ ಪಾಲು ಕೇಳಿದರು. ಹಾಗೂ ಮಗುವಿಗಾಗಿ ಶಿಫ್ಟ್ ಸಮಯದ ವಿನಾಯಿತಿ ಕೇಳಿದರು ಎಂದು ನಿರ್ಮಾಪಕ ಪ್ರಣಯ್ ವಂಗಾ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ದೀಪಿಕಾ ಅವರು ವಂಗಾ ಸಹೋದರರನ್ನು ಟೀಕಿಸುವ ಪೋಸ್ಟ್ ಲೈಕ್ ಮಾಡಿದ್ದರು.
ಇದಕ್ಕೂ ಮುನ್ನ ‘ಬಾಹುಬಲಿ’ ಚಿತ್ರದ ಶಿವಗಾಮಿ ಪಾತ್ರಕ್ಕೆ ಶ್ರೀದೇವಿ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಶ್ರೀದೇವಿ ಬಿಸಿನೆಸ್ ಕ್ಲಾಸ್ ಟಿಕೆಟ್ ಹಾಗೂ ಐಷಾರಾಮಿ ಹೋಟೆಲ್ ಕೊಠಡಿ ಕೇಳಿದ್ದಾರೆ ಎಂದು ರಾಜಮೌಳಿ ಆರೋಪಿಸಿದ್ದರು. ಅಲ್ಲದೆ ಶ್ರೀದೇವಿ ಸಿನಿಮಾದ ಲಾಭದಲ್ಲಿ ಶೇಕಡಾವಾರು ಪಾಲು ಕೇಳಿದ್ದಾರೆ ಎಂದಿದ್ದರು. ಶ್ರೀದೇವಿಗಾಗಿ ಅಷ್ಟು ವೆಚ್ಚ ಮಾಡುವುದು ವ್ಯರ್ಥ ಎಂದು ರಾಜಮೌಳಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.
Rajamouli demeaned Sri for supposedly negotiating her pay terms..How did Rajamouli escape the backlash? Sridevi didn’t pursue the role, he pursued her for the role. And then these two guys had the audacity to mock her. She responded so gracefully.
by
u/just-slaying in
BollyBlindsNGossip
ರಾಜಮೌಳಿ ಹೇಳಿಕೆಯಿಂದ ಶ್ರೀದೇವಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ರಾಜಮೌಳಿ ಮಾತುಗಳಿಂದ ತಮಗೆ ತುಂಬಾ ಬೇಸರವಾಗಿದೆ ಎಂದು ಶ್ರೀದೇವಿ ಹೇಳಿದ್ದರು. ತಾವು ಐದು ದಶಕಗಳಿಂದ ಚಿತ್ರರಂಗದಲ್ಲಿದ್ದು ಇಂತಹ ಬೇಡಿಕೆ ಇಟ್ಟಿಲ್ಲ ಎಂದಿದ್ದರು. ಈ ಆರೋಪಗಳು ಸಂಪೂರ್ಣ ಸುಳ್ಳು ಎಂದು ಶ್ರೀದೇವಿ ಸ್ಪಷ್ಟನೆ ನೀಡಿದ್ದರು. ನಂತರ ರಾಜಮೌಳಿ ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಿ ವಿವಾದಕ್ಕೆ ಅಂತ್ಯ ಹಾಡಿದ್ದರು.
ಇದನ್ನೂ ಓದಿ: ‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು
ಕೆಲ ವರ್ಷಗಳ ನಂತರ ಶ್ರೀದೇವಿ ಪತಿ ಬೋನಿ ಕಪೂರ್ ಈ ವಿವಾದದ ಅಸಲಿ ಸತ್ಯ ಬಿಚ್ಚಿಟ್ಟಿದ್ದರು. ನಿರ್ಮಾಪಕ ಶೋಬು ಯರ್ಲಗಡ್ಡ ಅವರು ರಾಜಮೌಳಿಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ನಂತರ ಗೊತ್ತಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:19 pm, Thu, 27 August 26