ಆಲಿಯಾ ಭಟ್ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದಾದ ಕೆಲವೇ ದಿನಗಳಲ್ಲಿ ‘ಬಿಪಾಶಾ ಬಸು'(Bipasha Basu) ಕೂಡ ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದರು. ಈ ವರ್ಷದ ಆಗಸ್ಟ್ನಲ್ಲಿ ಬಿಪಾಶಾ ಬಸು ಅವರು ಪತಿ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಪ್ರೆಗ್ನೆಂಟ್ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಶನಿವಾರ (ನವೆಂಬರ್12 ) ಬಿಪಾಶಾ ಬಸು ಅವರು ಮಗಳಿಗೆ ಜನ್ಮ ನೀಡಿದ್ದು, ಅದೇ ದಿನವೇ ಮಗಳ ಪಾದಗಳ ಫೋಟೋವನ್ನ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಮಗಳಿಗೆ ‘ದೇವಿ ಬಸು ಸಿಂಗ್ ಗ್ರೋವರ್‘ ಎಂದು ನಾಮಕರಣ ಮಾಡಿರುವುದಾಗಿ ಹೇಳಿದ್ದಾರೆ.
ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ 2015ರ ‘ಅಲೋನ್‘ ಸಿನಿಮಾದ ಸೆಟ್ನಿಂದ ಇಬ್ಬರು ಪ್ರೀತಿಸುತ್ತಿದ್ದರು. 2016 ರ ಏಪ್ರಿಲ್ 30ರಂದು ಇಬ್ಬರು ಮದುವೆಯಾಗಿದ್ದರು, . ಇದಾದ 6 ವರ್ಷಗಳ ಬಳಿಕ ಅವರು ತಾಯಿಯಾಗಿದ್ದಾರೆ. ಇತ್ತೀಚೆಗೆ ಬಿಪಾಶಾ ಬಸು ಒಂದು ಸಂದರ್ಶನಲ್ಲಿ ಮಾತನಾಡುವಾಗ ಪ್ರೆಗ್ನೆಂಟ್ ಸಮಯದಲ್ಲಿ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದರು,‘ಸರಿಯಾಗಿ ಊಟ ಸೇರುತ್ತಿರಲಿಲ್ಲ, ಇದರಿಂದಾಗಿ ನಾನು ನನ್ನ ತೂಕವನ್ನ ಕಳೆದುಕೊಂಡೆ‘ ಎಂದಿದ್ದಾರೆ.
ಬಿಪಾಶಾ ಬಸು ದೇವಿ ಭಕ್ತೆಯಾಗಿದ್ದು ಮಗುವಿಗೆ ಕೂಡ ಅದೇ ಹೆಸರನ್ನು ಇಟ್ಟಿದ್ದಾರೆ. ಮಗಳ ಪಾದಗಳ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು, ‘ನಿಮ್ಮ ಆಸೆಯಂತೆಯೇ ಹೆಣ್ಣು ಮಗು ಆಗಿದೆ, ದೇವಿ ನಿಮಗೆ ಒಳ್ಳೆಯದು ಮಾಡಲಿ ಎಂದು ಕಾಮೆಂಟ್ಗಳ ಮೂಲಕ ಶುಭ ಕೋರುತ್ತಿದ್ದಾರೆ.
ಇದನ್ನೂ ಓದಿ:Bipasha Basu: ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡ ಬಿಪಾಶಾ ಬಸು; ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ
ಬಿಪಾಶಾ ಬಸು 2001ರಲ್ಲಿ ‘ಅಜನಬಿ‘ ಸಿನಿಮಾದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟರು, ಇದಾದ ಬಳಿಕ ರಾಜ್, ಫಿರ್ ಹೇರಾ ಪೇರಿ, ಓಂ ಶಾಂತಿ ಓಂ, ರೇಸ್,ಅಲಗ್ ಮುಂತಾದ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ, ಬಿಪಾಶಾ ಬಸು ಕೊನೆಯದಾಗಿ 2020 ರಲ್ಲಿ ಡೇಂಜರಸ್ ವೆಬ್ ಸೀರೀಸ್ನಲ್ಲಿ ನಟಿಸಿದ್ದಾರೆ. ಅದಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸದೇ ದೂರ ಉಳಿದಿದ್ದರು.
ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ