ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್; ನಟಿಗೆ ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಕ್ಕಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್; ನಟಿಗೆ ಶುಭಾಶಯ ತಿಳಿಸಿದ ಸೆಲೆಬ್ರಿಟಿಗಳು
ಸೋನಂ
Edited By:

Updated on: Aug 20, 2022 | 9:16 PM

ನಟಿ ಸೋನಂ ಕಪೂರ್ (Sonam Kapoor) ಹಾಗೂ ಉದ್ಯಮಿ ಆನಂದ್ ಅಹೂಜಾ ದಂಪತಿಗೆ ಗಂಡು ಮಗು ಜನಿಸಿದೆ. ಈ ಮೂಲಕ ಕಪೂರ್ ಹಾಗೂ ಅಹೂಜಾ ಕುಟುಂಬದಲ್ಲಿ ಸಂತಸ ಮೂಡಿದೆ. ಈ ಖುಷಿ ಸುದ್ದಿಯನ್ನು ಸೋನಂ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಕತ್ರಿನಾ ಕೈಫ್ (Katrina Kaif), ಕೃತಿ ಸನೋನ್ ಸೇರಿ ಅನೇಕ ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಬಾಲಿವುಡ್​ನ ಖ್ಯಾತ ನಟ ಅನಿಲ್​ ಕಪೂರ್ ಮಗಳು ಸೋನಂ​ ಕಪೂರ್. ಈ ಕಾರಣಕ್ಕೆ ಅವರಿಗೆ ಚಿತ್ರರಂಗದಲ್ಲಿ ಸುಲಭವಾಗಿ ಎಂಟ್ರಿ ಸಿಕ್ಕಿತ್ತು. 2007ರಲ್ಲಿ ತೆರೆಗೆ ಬಂದ ‘ಸಾವರಿಯಾ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸೋನಂ ಕಪೂರ್. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ, ಅವರಿಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಪ್ರೇಕ್ಷಕರು ಅವರ ನಟನೆಯನ್ನು ಅಷ್ಟು ಇಷ್ಟಪಡಲಿಲ್ಲ. ಈಗ ಅವರು ತಾಯಿ ಆಗಿದ್ದಾರೆ.

ಇದನ್ನೂ ಓದಿ
ಗರ್ಭಿಣಿ ಸೋನಂ ಕಪೂರ್​ ಮನೆಯಲ್ಲಿ ಕಳ್ಳತನ; ನಟಿಯ ಕುಟುಂಬದವರು ಕಳೆದುಕೊಂಡಿದ್ದೆಷ್ಟು?
ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!
ಹಿಜಾಬ್​ ವಿಚಾರಕ್ಕೆ ತಲೆ ಹಾಕಿದ ಸೋನಂ ಕಪೂರ್​; ಇನ್ನೊಂದು ಧರ್ಮವನ್ನು ಪ್ರಶ್ನಿಸಿ ಟೀಕೆಗೆ ಗುರಿಯಾದ ನಟಿ

2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ​ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ​ ಕಡೆಯಿಂದ ಗುಡ್ ನ್ಯೂಸ್​ ಸಿಕ್ಕಿದೆ. ‘ನಿಮ್ಮ ಮೂವರಿಗೆ ನನ್ನ ಪ್ರೀತಿ’ ಎಂದು ಕತ್ರಿನಾ ಹೇಳಿದ್ದಾರೆ. ಶಿಲ್ಪಾ ಶೆಟ್ಟಿ, ಕೃತಿ, ಜಾಕ್ವೆಲಿನ್ ಮೊದಲಾದವರು ಕಂಗ್ರಾಜ್ಯುಲೇಷನ್ ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಸೋನಂ ಕಪೂರ್ ಅವರು ಬೇಬಿ ಬಂಪ್ ಫೋಟೋ ಹಂಚಿಕೊಂಡು ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಅಧಿಕೃತ ಮಾಡಿದ್ದರು. ಪ್ರೆಗ್ನೆನ್ಸಿ​ ಫೋಟೋ ಹಂಚಿಕೊಂಡು ಸೋನಂ ಹಾಗೂ ಆನಂದ್ ಸಂಭ್ರಮಿಸಿದ್ದರು.

ಸೋನಂ ಕಪೂರ್ ತಂದೆ ಅನಿಲ್ ಕಪೂರ್ ಅವರು ತಾತನಾದ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

Published On - 9:13 pm, Sat, 20 August 22