‘ನೀವೇ ಚಾಂಪಿಯನ್​’: ವಿನೇಶ್​ ಫೋಗಟ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಬಾಲಿವುಡ್​

ಒಲಿಂಪಿಕ್ಸ್​ನಲ್ಲಿ ವಿನೇಶ್​ ಫೋಗಟ್​ ಅನರ್ಹಗೊಂಡ ಸುದ್ದಿ ತಿಳಿದು ಎಲ್ಲರಿಗೂ ಶಾಕ್​ ಆಗಿದೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ವಿನೇಶ್​ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ. ಕರೀನಾ ಕಪೂರ್​ ಖಾನ್​, ಆಲಿಯಾ ಭಟ್​, ಫರ್ಹಾನ್​ ಅಖ್ತರ್​, ತಾಪ್ಸಿ ಪನ್ನು, ರಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಹಲವರು ವಿನೇಶ್​ ಫೋಗಟ್​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ನೀವೇ ಚಾಂಪಿಯನ್​’: ವಿನೇಶ್​ ಫೋಗಟ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಬಾಲಿವುಡ್​
ವಿನೇಶ್​ ಫೋಗಟ್​

Updated on: Aug 07, 2024 | 8:56 PM

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ವಿನೇಶ್​ ಫೋಗಟ್​ ಬಂಗಾರದ ಪದಕ ಗೆಲ್ಲುತ್ತಾರೆ ಎಂದು ಕಾದಿದ್ದ ಎಲ್ಲರಿಗೂ ತೀವ್ರ ನಿರಾಸೆ ಆಗಿದೆ. ದೇಹದ ತೂಕ 50 ಕೆಜಿಗಿಂತಲೂ ಹೆಚ್ಚಿರುವ ಕಾರಣದಿಂದ ಕೊನೇ ಹಂತದಲ್ಲಿ ವಿನೇಶ್​ ಫೋಗಟ್​ ಅವರು ಅನರ್ಹಗೊಂಡರು. ಈ ಸುದ್ದಿ ಕೇಳಿ ಇಡೀ ಭಾರತಕ್ಕೆ ಆಘಾತ ಆಗಿದೆ. ಈ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ವಿನೇಶ್​ ಫೋಗಟ್​ ಪರವಾಗಿ ಪೋಸ್ಟ್ ಮಾಡಿದ್ದಾರೆ. ಆಲಿಯಾ ಭಟ್​, ಫರ್ಹಾನ್​ ಅಖ್ತರ್​, ತಾಪ್ಸಿ ಪನ್ನು, ಕರೀನಾ ಕಪೂರ್​ ಖಾನ್​ ಸೇರಿದಂತೆ ಹಲವರು ವಿನೇಶ್​ ಫೋಗಟ್​​ ಅವರಿಗೆ ಧೈರ್ಯ ತುಂಬಿದ್ದಾರೆ. ‘ನಮ್ಮ ಪಾಲಿಗೆ ನೀವೇ ಚಾಂಪಿಯನ್​’ ಎಂದು ಎಲ್ಲರೂ ಹೇಳುತ್ತಿದ್ದಾರೆ.

‘ವಿನೇಶ್ ಫೋಗಟ್​ ಅವರೇ, ನೀವು ಇಡೀ ದೇಶಕ್ಕೆ ಸ್ಫೂರ್ತಿ. ಇತಿಹಾಸ ಸೃಷ್ಟಿಸಲು ನೀವು ತೋರಿದ ಧೈರ್ಯ ಹಾಗೂ ನಿಮ್ಮ ಪರಿಶ್ರಮವನ್ನು ಯಾರೂ ಸಹ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಇಂದು ನಿಮ್ಮಂತೆಯೇ ನಮಗೂ ಸಹ ಆಘಾತ ಆಗಿದೆ. ಆದರೆ, ಮಹಿಳೆಯಾಗಿ ನೀವು ಬಂಗಾರದಂತೆ, ಕಬ್ಬಿಣದಂತೆ, ಉಕ್ಕಿನಂತೆ. ಅದನ್ನು ನಿಮ್ಮಿಂದ ಯಾರೂ ಕಸಿದುಕೊಳ್ಳಲು ಆಗುವುದಿಲ್ಲ. ನೀವೇ ಚಾಂಪಿಯನ್​. ನಿಮ್ಮಂತೆ ಬೇರೆ ಯಾರೂ ಇಲ್ಲ’ ಎಂದು ಆಲಿಯಾ ಭಟ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಿಮಗೆ ಎಷ್ಟು ನೋವಾಗಿದೆ ಎಂಬುದನ್ನು ನಾವು ಕಲ್ಪನೆ ಮಾಡಿಕೊಳ್ಳಬಹುದು. ಆದರೆ ಆ ನೋವನ್ನು ಸಂಪೂರ್ಣ ಅರ್ಥಮಾಡಿಕೊಳ್ಳಲು ಆಗಲ್ಲ. ಆಟ ಈ ರೀತಿ ಕೊನೆಯಾಯ್ತು ಅಂತ ತಿಳಿದು ತುಂಬಾ ನೋವಾಗಿದೆ. ಆದರೆ, ನಮಗೆಲ್ಲ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂಬುದನ್ನು ತಿಳಿಯಿರಿ. ಕೋಟ್ಯಂತರ ಜನರಿಗೆ ನೀವೇ ಚಾಂಪಿಯನ್​, ನೀವೇ ಸ್ಫೂರ್ತಿ. ತಲೆ ಎತ್ತಿ ನಡೆಯಿರಿ’ ಎಂದು ಫರ್ಹಾನ್​ ಅಖ್ತರ್​ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿನೇಶ್ ಫೋಗಟ್ ಅನರ್ಹ: ಇದು ದೇಶಕ್ಕೆ ನಷ್ಟ ಎಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರ ಕರಣ್ ಭೂಷಣ್

‘ಇದು ತುಂಬಾ ನೋವಿನ ಸಂಗತಿ. ಆದರೆ ವಿನೇಶ್ ಘೋಗಟ್​ ಅವರು ಬಂಗಾರದ ಪದಕಕ್ಕಿಂತಲೂ ಹೆಚ್ಚಿನದ್ದು ಸಾಧಿಸಿದ್ದಾರೆ’ ಎಂದು ನಟಿ ತಾಪ್ಸಿ ಪನ್ನು ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಫಾತಿಮಾ ಸಹಾ ಶೇಖ್​, ರಕುಲ್​ ಪ್ರೀತ್​ ಸಿಂಗ್​, ಅನನ್ಯಾ ಪಾಂಡೆ ಸೇರಿದಂತೆ ಅನೇಕ ನಟಿಯರು ವಿನೇಶ್​ ಫೋಗಟ್​ ಪರವಾಗಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇಡೀ ದೇಶವೇ ವಿನೇಶ್​ ಫೋಗಟ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದೆ. ಆದರೆ ಫೈನಲ್​ನಲ್ಲಿ ಹಣಾಹಣಿ ನಡೆಸಲು ಸಾಧ್ಯವಾಗಿಲ್ಲ ಎಂಬುದು ಎಲ್ಲರಿಗೂ ನೋವುಂಟು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us