ಬಾಲಿವುಡ್ ನಿರ್ಮಾಪಕರಿಗೆ ಶುರುವಾಗಿದೆ ಚಿಂತೆ; ಚಿತ್ರರಂಗಕ್ಕೂ ಬರಲಿದೆ ಕಾಸ್ಟ್ ಕಟಿಂಗ್?

| Updated By: ರಾಜೇಶ್ ದುಗ್ಗುಮನೆ

Updated on: May 03, 2024 | 11:13 AM

ಸೆಲೆಬ್ರಿಟಿಗಳು ಪ್ರತಿ ಸಂದರ್ಶನಕ್ಕೆ ಹೊಸ ಹೊಸ ಬಟ್ಟೆ ತೊಡುತ್ತಾರೆ. ಇದಕ್ಕೆ ಅವರು ಚಾರ್ಜ್ ಮಾಡೋದು 1 ಲಕ್ಷ ರೂ.. ಇದಕ್ಕೆಲ್ಲ ನಿರ್ಮಾಪಕರೇ ಹಣ ಪಾವತಿ ಮಾಡಬೇಕು. ಇದು ಸದ್ಯ ಹಿಂದಿ ಚಿತ್ರರಂಗದಲ್ಲಿ ನಡೆಯುತ್ತಿರುವ ಸಂಪ್ರದಾಯ. ಇದರಿಂದ ನಿರ್ಮಾಪಕರು ಬೇರೆ ರೀತಿಯಲ್ಲಿ ಯೋಚಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  

ಬಾಲಿವುಡ್ ನಿರ್ಮಾಪಕರಿಗೆ ಶುರುವಾಗಿದೆ ಚಿಂತೆ; ಚಿತ್ರರಂಗಕ್ಕೂ ಬರಲಿದೆ ಕಾಸ್ಟ್ ಕಟಿಂಗ್?
ಬಾಲಿವುಡ್ ನಿರ್ಮಾಪಕರಿಗೆ ಶುರುವಾಗಿದೆ ಚಿಂತೆ
Follow us on

ಇತ್ತೀಚೆಗೆ ಬಾಲಿವುಡ್​ನಲ್ಲಿ (Bollywood) ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ. ಕೊವಿಡ್ ಕಾಣಿಸಿಕೊಂಡ ಬಳಿಕ ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿರಲಿಲ್ಲ. ಇದರಿಂದ ನಿರ್ಮಾಪಕರು ಫ್ರಸ್ಟ್ರೇಟ್ ಆಗಿದ್ದರು. ಅನೇಕ ನಿರ್ಮಾಪಕರು ನೇರವಾಗಿ ಒಟಿಟಿಯತ್ತ ಮುಖ ಮಾಡಿದರು. ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಅವರಂಥ ಹೀರೋಗಳು ನಟಿಸಿದ ಹೊರತಾಗಿಯೂ ಸಿನಿಮಾ ಗೆಲುವು ಕಾಣಲಿಲ್ಲ. 2023 ಎಲ್ಲವನ್ನೂ ಬದಲಾಯಿಸಿತು. ಶಾರುಖ್ ಖಾನ್ ನಟನೆಯ ‘ಪಠಾಣ್’, ‘ಜವಾನ್’ 1000 ಕೋಟಿ ರೂಪಾಯಿ ಕ್ಲಬ್ ಸೇರಿದವು. ಆದರೆ, 2024ರಲ್ಲಿ ಯಾವುದೇ ದೊಡ್ಡ ಜಾದೂ ಆಗಿಲ್ಲ. ಮತ್ತೆ ಸಿನಿಮಾಗಳು ಹೀನಾಯ ಸೋಲು ಕಾಣಲು ಆರಂಭಿಸಿವೆ. ಈಗ ನಿರ್ಮಾಪಕರು ಕಾಸ್ಟ್ ಕಟಿಂಗ್​ಗೆ ಮುಂದಾಗಬಹುದು ಎನ್ನುವ ಮಾತು ಕೇಳಿ ಬಂದಿದೆ.

‘ಮೈದಾನ್’, ‘ಬಡೇ ಮಿಯಾ ಚೋಟೆ ಮಿಯಾ’ ದಂಥ ಹಿಂದಿ ಸಿನಿಮಾಗಳು ಇತ್ತೀಚೆಗೆ ರಿಲೀಸ್ ಆಗಿವೆ. ಆದರೆ, ಈ ಸಿನಿಮಾಗಳು ಗಳಿಸಿದ್ದು ಚಿಲ್ಲರೆ ಹಣ. ಅಜಯ್ ದೇವಗನ್ ಅವರು ‘ಮೈದಾನ್’ ಚಿತ್ರಕ್ಕಾಗಿ ದೊಡ್ಡ ಮೊತ್ತದ ಚಾರ್ಜ್ ಮಾಡಿದ್ದರು. ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾಗಾಗಿ ನಿರ್ಮಾಪಕ ಜಾಕಿ ಭಗ್ನಾನಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದರು. ನಾನಾ ಕಡೆಗಳಲ್ಲಿ ತೆರಳಿ ಪ್ರಮೋಷನ್ ಕೂಡ ಮಾಡಲಾಯಿತು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ನಿರ್ಮಾಪಕರು ಈ ಬಗ್ಗೆ ಆಲೋಚಿಸುವಂತೆ ಆಗಿದೆ.

ಬಾಲಿವುಡ್ ಸ್ಟಾರ್​​ಗಳು ಸಿನಿಮಾಗೆ ಸಂಭಾವನೆ ಪಡೆಯೋದರ ಜೊತೆಗೆ ಪ್ರಚಾರಕ್ಕೆ ಹೆಚ್ಚುವರಿಯಾಗಿ ಹಣ ಪಡೆಯುತ್ತಾರಂತೆ. ಇಷ್ಟಕ್ಕ ನಿಂತಿಲ್ಲ, ತಾವು ಕರೆದುಕೊಂಡು ಬರೋ ಸ್ಟಾಫ್​ಗಳ ವೆಚ್ಛವನ್ನು ಬರಿಸುವಂತೆ ನಿರ್ಮಾಪಕರಿಗೆ ಹೇಳುತ್ತಾರೆ. ವ್ಯಾನಿಟಿ ವ್ಯಾನ್​ಗೆ ಹೀರೋಗಳು ಬೇಡಿಕೆ ಇಡುತ್ತಾರೆ. ಬೇರೆ ದಾರಿ ಕಾಣದ ನಿರ್ಮಾಪಕರು ಇದಕ್ಕೆ ಓಕೆ ಎನ್ನುತ್ತಾರೆ. ಸಿನಿಮಾಗೆ ನೂರಾರು ಕೋಟಿ ಖರ್ಚು ಮಾಡುವುದರ ಜೊತೆಗೆ ನಿರ್ಮಾಪಕರು ಇದಕ್ಕೂ ಹಣ ಖರ್ಚು ಮಾಡಬೇಕಿದೆ.

ಪ್ರತಿ ಸಂದರ್ಶನಕ್ಕೆ ಸೆಲೆಬ್ರಿಟಿಗಳು ಹೊಸ ಹೊಸ ಬಟ್ಟೆ ತೊಡುತ್ತಾರೆ. ಇದಕ್ಕೆ ಅವರು ಚಾರ್ಜ್ ಮಾಡೋದು 1 ಲಕ್ಷ ರೂಪಾಯಿ ಅಂತೆ. ಇದಕ್ಕೆಲ್ಲ ನಿರ್ಮಾಪಕರೇ ಹಣ ಪಾವತಿ ಮಾಡಬೇಕು. ಇದು ಸದ್ಯ ಹಿಂದಿ ಚಿತ್ರರಂಗದಲ್ಲಿ ನಡೆಯುತ್ತಿರುವ ಕಥೆ. ಇದರಿಂದ ನಿರ್ಮಾಪಕರು ಬೇರೆ ರೀತಿಯಲ್ಲಿ ಯೋಚಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಬಾಲಿವುಡ್​ಗೆ ಹೋಗಿ ಏಕಾಏಕಿ ಗ್ಲಾಮರ್​ ಅವತಾರ ತಾಳಿದ ನಟಿ ಕೀರ್ತಿ ಸುರೇಶ್​

ಬಾಲಿವುಡ್​ನಲ್ಲಿ ಸಿನಿಮಾಗಳನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ಒತ್ತು ನೀಡಲಾಗುತ್ತದೆ. ಇದರಿಂದ ಸಹಜವಾಗಿಯೇ ಹೆಚ್ಚಿನ ಹಣ ಖರ್ಚು ಮಾಡಬೇಕು. ಆದರೆ, ದಕ್ಷಿಣದಲ್ಲಿ ಆ ರೀತಿ ಇಲ್ಲ. ಉದಾಹರಣೆಗೆ ‘ಪ್ರೇಮಲು’, ‘ಮಂಜುಮ್ಮೇಲ್ ಬಾಯ್ಸ್’, ‘ಕಾಂತಾರ’ ಸಿನಿಮಾಗಳು ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಸಿನಿಮಾಗಳು. ಇವು ದೊಡ್ಡ ಮಟ್ಟದ ಬಿಸ್ನೆಸ್ ಮಾಡಿವೆ. ಈ ರೀತಿಯಲ್ಲೇ ಬಾಲಿವುಡ್ ಕೂಡ ಕಾರ್ಯ ನಿರ್ವಹಿಸಬೇಕಿದೆ. ಬಾಲಿವುಡ್​ಗೆ ಕಾಸ್ಟ್ ಕಟಿಂಗ್ ತರೋ ಅವಶ್ಯಕತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಪಕರು ಚಿಂತಿಸೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.