ಸಲ್ಮಾನ್ ಖಾನ್, ಬಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರು. ಅವರು ಬಾಲಿವುಡ್ನಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿದವರು. ಅವರು ಚಿತ್ರರಂಗಕ್ಕೆ 1988ರಲ್ಲಿ ಕಾಲಿಟ್ಟರು. ‘ಬೀವಿ ಹೋ ತೋ ಐಸಿ’ ಚಿತ್ರದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಅವರಿಗೆ ಇತ್ತೀಚೆಗೆ ಯಶಸ್ಸು ಸಿಕ್ಕಿಲ್ಲ. ಅವರ ಒಟ್ಟೂ ಆಸ್ತಿ ಬಗ್ಗೆ ಇಲ್ಲಿದೆ ವಿವರ.
ಸಲ್ಮಾನ್ ಖಾನ್ ಅವರ ಆಸ್ತಿ 2900 ಕೋಟಿ ರೂಪಾಯಿ. ಸಲ್ಮಾನ್ ಖಾನ್ ಬಳಿ ಹಲವು ದುಬಾರಿ ಪ್ರಾಪರ್ಟಿಗಳು ಇವೆ. ಅವರು ಸಮುದ್ರ ತೀರದತ್ತ ಮುಖ ಮಾಡಿದ ಗ್ಯಾಲಕ್ಸಿ ಅಪಾರ್ಟ್ಮೆಂಟ್ನಲ್ಲಿ ಟ್ರಿಪ್ಲೆಕ್ಸ್ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಇದು ಸಲ್ಮಾನ್ ಖಾನ್ ಅವರ ದುಬಾರಿ ಮನೆಗಳಲ್ಲಿ ಒಂದು. ಇದರ ಬೆಲೆ 100 ಕೋಟಿ ರೂಪಾಯಿ. ಮುಂಬೈನ ಹೊರಭಾಗದಲ್ಲಿ ಇವರು 150 ಎಕರೆ ಫಾರ್ಮ್ಹೌಸ್ ಹೊಂದಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಇಲ್ಲಿಯೇ ಉಳಿದುಕೊಂಡಿದ್ದರು.
ಸಲ್ಮಾನ್ ಖಾನ್ ಅವರು ಕೇವಲ ಭಾರತ ಮಾತ್ರವಲ್ಲ ದುಬೈನಲ್ಲಿ ಜಾಗ ಹೊಂದಿದ್ದಾರೆ. ದುಬೈ ರಿಯಲ್ ಎಸ್ಟೇಟ್ನಲ್ಲಿ ಕಾಲಿಟ್ಟ ಕೆಲವೇ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅವರು ಕೂಡ ಒಬ್ಬರು. ದುಬೈನ ಡೌನ್ಟೌನ್ನಲ್ಲಿ ಅವರು ಫ್ಲ್ಯಾಟ್ ಹೊಂದಿದ್ದಾರೆ. 51ನೇ ವರ್ಷದ ಬರ್ತ್ಡೇ ಸಂದರ್ಭದಲ್ಲಿ ಇವರು ಗೊರಾಯಿಯಲ್ಲಿ ಬೀಚ್ ಹೌಸ್ ಖರೀದಿ ಮಾಡಿದ್ದರು. ಇದರ ಬೆಲೆ 100 ಕೋಟಿ ರೂಪಾಯಿ ಎನ್ನಲಾಗಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..
ಇಷ್ಟಕ್ಕೆ ನಿಂತಿಲ್ಲ. ಸಲ್ಮಾನ್ ಖಾನ್ ಅವರು ಖಾಸಗಿ ಯಾಚ್ ಹೊಂದಿದ್ದಾರೆ. ಇದರ ಬೆಲೆ 3 ಕೋಟಿ ರೂಪಾಯಿ. ಸಲ್ಮಾನ್ ಖಾನ್ ಅವರು 2012ರಲ್ಲಿ ಬೀಯಿಂಗ್ ಹ್ಯೂಮನ್ ಹೆಸರಿನ ಬ್ರ್ಯಾಂಡ್ ಆರಂಭಿಸಿದರು. ಈ ಕಂಪನಿಯ ಮೌಲ್ಯ 235 ಕೋಟಿ ರೂಪಾಯಿ. ಈ ಬ್ರ್ಯಾಂಡ್ ಅಡಿಯಲ್ಲಿ ಬಟ್ಟೆ, ಜ್ಯುವೆಲರಿ, ವಾಚ್ಗಳು ಇವೆ.
ಸಲ್ಮಾನ್ ಖಾನ್ ಅವರು ‘ಸಲ್ಮಾನ್ ಖಾನ್ ಫಿಲ್ಮ್ಸ್’ ಹೊಂದಿದ್ದಾರೆ. ಇದರ ಅಡಿಯಲ್ಲಿ ಅವರು ಸಿನಿಮಾ ನಿರ್ಮಾಣ ಹಾಗೂ ಹಂಚಿಕೆ ಮಾಡುತ್ತಾರೆ. ‘ರೇಸ್ 3’, ‘ಭಾರತ್’, ‘ದಬಾಂಗ್ 3’ ಚಿತ್ರಗಳನ್ನು ಈ ನಿರ್ಮಾಣ ಸಂಸ್ಥೆಯ ಮೂಲಕ ಅವರು ತಯಾರಿಸಿದ್ದಾರೆ. ಹಲವು ಉದ್ಯಮಗಳ ಮೇಲೆ ಸಲ್ಮಾನ್ ಖಾನ್ ಅವರು ಹೂಡಿಕೆ ಮಾಡಿದ್ದಾರೆ.
ಸಲ್ಮಾನ್ ಖಾನ್ ಬಳಿ ದುಬಾರಿ ಕಾರುಗಳು ಇವೆ. ಆದರೆ ಇವರು ಹೆಚ್ಚಾಗಿ ಬಳಕೆ ಮಾಡೋದು ಲ್ಯಾಂಡ್ ಕ್ರ್ಯೂಸರ್. ಇದು ಬುಲೆಟ್ ಪ್ರೂಫ್ ಕಾರು. ಇದರ ಬೆಲೆ 2.26 ಕೋಟಿ ರೂಪಾಯಿ. ಇದಲ್ಲದೆ ಇನ್ನೂ ಹಲವು ದುಬಾರಿ ವಾಹನಗಳು ಅವರ ಬಳಿ ಇವೆ. ಆದರೆ, ಅವುಗಳನ್ನು ಅವರು ಹೊರಗೆ ತಂದಿದ್ದು ಕಡಿಮೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕಡೆಯಿಂದ ಅವರಿಗೆ ಬೆದರಿಕೆ ಇದೆ. ಇದಾದಾಗಿನಿಂದಲೂ ಅವರು ಲ್ಯಾಂಡ್ ಕ್ರ್ಯೂಸರ್ನಲ್ಲಿ ಓಡಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ