2022ರ ವರ್ಷದಲ್ಲಿ ಬಾಲಿವುಡ್ ಸಿನಿಮಾಗಳು ಗೆದ್ದಿದ್ದು ತುಂಬ ಕಡಿಮೆ. ಸಾಲು ಸಾಲು ಸೋಲಿನ ನಡುವೆ ಗೆದ್ದ ಚಿತ್ರಗಳ ಸಂಖ್ಯೆ ತುಂಬ ವಿರಳ. ಪ್ರೇಕ್ಷಕರು ಕೃಪೆ ತೋರಿದ್ದರಿಂದ ಈಗ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ನೂರಾರು ಕೋಟಿ ರೂಪಾಯಿ ಕಲೆಕ್ಷನ್ (Box Office Collection) ಮಾಡಿದೆ. ಆದರೆ ಈ ಗಳಿಕೆ ಬಗ್ಗೆ ಕೆಲವರಿಗೆ ಅನುಮಾನ ಇದೆ. ಇನ್ನು, ಚಿತ್ರದ ಬಜೆಟ್ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಸಿನಿಮಾದ ಬಜೆಟ್ ಬರೋಬ್ಬರಿ 650 ಕೋಟಿ ರೂಪಾಯಿ ಆಗಿರುವಾಗ ಈ ಚಿತ್ರವನ್ನು ಹಿಟ್ ಎಂದು ಕರೆಯಲು ಹೇಗೆ ಸಾಧ್ಯ ಎಂದು ಕಂಗನಾ ರಣಾವತ್ ಪ್ರಶ್ನಿಸಿದ್ದಾರೆ. ಅದಕ್ಕೆ ರಣಬೀರ್ ಕಪೂರ್ (Ranbir Kapoor) ತಿರುಗೇಟು ನೀಡಿದ್ದಾರೆ.
‘ಬ್ರಹ್ಮಾಸ್ತ್ರ’ ಕಥೆ ಮೂರು ಪಾರ್ಟ್ಗಳಲ್ಲಿ ಬರುತ್ತಿದೆ. ಈಗ ಬಿಡುಗಡೆ ಆಗಿರುವುದು ಮೊದಲ ಪಾರ್ಟ್ ಮಾತ್ರ. ಏನೇ ಬಜೆಟ್ ಹಾಕಿದ್ದರೂ ಕೂಡ ಅದು ಮೂರೂ ಪಾರ್ಟ್ಗೆ ಹಂಚಿಕೆ ಆಗಲಿದೆ. ಮೊದಲ ಪಾರ್ಟ್ ಸಲುವಾಗಿ ನಿರ್ಮಿಸಿದ ಸೆಟ್ಗಳು, ಖರೀದಿಸಿದ ಪ್ರಾಪರ್ಟಿಗಳು, ಸಿದ್ಧಪಡಿಸಿರುವ ವಿಎಫ್ಎಕ್ಸ್ ದೃಶ್ಯಗಳು ಇನ್ನುಳಿದ ಪಾರ್ಟ್ಗಳಿಗೂ ಬಳಕೆ ಆಗಲಿವೆ. ಇದರಿಂದ ಚಿತ್ರತಂಡಕ್ಕೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂಬುದು ರಣಬೀರ್ ಕಪೂರ್ ಅವರ ಮಾತು.
ಅಯಾನ್ ಮುಖರ್ಜಿ ಅವರು ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಕಳಪೆ ಗ್ರಾಫಿಕ್ಸ್ ಇದೆ ಎಂಬ ಆರೋಪದ ನಡುವೆಯೂ ಈ ಸಿನಿಮಾ ಉತ್ತಮ ಕೆಲಕ್ಷನ್ ಮಾಡಿದೆ. ಕಥೆ ಚೆನ್ನಾಗಿಲ್ಲ ಎಂಬ ನೆಗೆಟಿವ್ ವಿಮರ್ಶೆ ಸಿಕ್ಕ ಹೊರತಾಗಿಯೂ ಜನರು ಈ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ‘ಬ್ರಹ್ಮಾಸ್ತ್ರ’ ಸಿನಿಮಾ ಸೂಪರ್ ಹಿಟ್ ಆಗಿದೆ.
ಈ ವರ್ಷ ಏಪ್ರಿಲ್ ತಿಂಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ನೆರವೇರಿತು. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಅವರು ಹಸೆಮಣೆ ಏರಿದರು. ಅವರಿಬ್ಬರು ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಸಿನಿಮಾ ‘ಬ್ರಹ್ಮಾಸ್ತ್ರ’. ಈ ಕ್ಯೂಟ್ ಜೋಡಿಯನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.
‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ನಾಗಾರ್ಜುನ ಮುಂತಾದವರು ನಟಿಸಿದ್ದಾರೆ. ಶಾರುಖ್ ಖಾನ್ ಅವರ ಅತಿಥಿ ಪಾತ್ರದಿಂದಾಗಿ ಚಿತ್ರದ ಮೆರುಗು ಹೆಚ್ಚಿದೆ. ವಿದೇಶದಲ್ಲೂ ಈ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದೆಲ್ಲದರ ನಡುವೆ ‘ಬ್ರಹ್ಮಾಸ್ತ್ರ’ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರ ಸುಳ್ಳು ಎಂದು ಒಂದಷ್ಟು ಮಂದಿ ವಾದಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.