ಸೆಪ್ಟೆಂಬರ್ 23ರಂದು ಭಾರತದಾದ್ಯಂತ ‘ರಾಷ್ಟ್ರೀಯ ಸಿನಿಮಾ ದಿನಾಚರಣೆ’ (National Cinema Day) ಆಚರಿಸಲಾಗಿದೆ. ಈ ವಿಶೇಷ ದಿನದಂದು ಮಲ್ಟಿಪ್ಲೆಕ್ಸ್ಗಳು ಪ್ರೇಕ್ಷಕರಿಗೆ ಸಖತ್ ಆಫರ್ ನೀಡಿದ್ದವು. ಕೇವಲ 75 ರೂಪಾಯಿಗೆ ಸಿನಿಮಾ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಈ ಕಾರಣದಿಂದ ಬಹುತೇಕ ಮಲ್ಟಿಪ್ಲೆಕ್ಸ್ಗಳು (Multiplex) ತುಂಬಿ ತುಳುಕಿದ್ದವು. ‘ಬ್ರಹ್ಮಾಸ್ತ್ರ’ (Brahmastra Movie) ಸಿನಿಮಾಗೆ ಈ ಆಫರ್ ವರದಾನವಾಗಿದೆ. ಶುಕ್ರವಾರ (ಸೆಪ್ಟೆಂಬರ್ 23) ಈ ಚಿತ್ರ ಬರೋಬ್ಬರಿ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರಿಂದ ಚಿತ್ರತಂಡ ಸಖತ್ ಖುಷಿಪಟ್ಟಿದೆ.
ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ತೆರೆಗೆ ಬಂತು. ಈ ಚಿತ್ರ ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್ ಮಾಡಿತು. ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಶುರುವಾದ ಕಾರಣ ಜನರು ಮುಗಿಬಿದ್ದು ಚಿತ್ರ ವೀಕ್ಷಿಸಿದ್ದಾರೆ. ಹೀಗಾಗಿ ಸಿನಿಮಾ ಒಳ್ಳೆಯ ಕಮಾಯಿ ಮಾಡುತ್ತಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 400 ಕೋಟಿ ರೂಪಾಯಿ ಸಮೀಪಿಸಿದೆ.
‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 22ರಂದು ಕೇವಲ 3 ಕೋಟಿ ಗಳಿಕೆ ಮಾಡಿತ್ತು. 75 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದ್ದರಿಂದ ಸೆಪ್ಟೆಂಬರ್ 23ರಂದು ಸಿನಿಮಾ ಕಲೆಕ್ಷನ್ ಜಾಸ್ತಿ ಆಗಿದೆ. ಅಂದರೆ, ಶೇ. 240 ಕಲೆಕ್ಷನ್ ಹೆಚ್ಚಿದೆ. ಇಂದು (ಸೆಪ್ಟೆಂಬರ್ 24), ನಾಳೆ (ಸೆಪ್ಟೆಂಬರ್ 25) ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುವ ನಿರೀಕ್ಷೆ ಇದೆ.
ಹಾಲಿವುಡ್ನ ‘ಅವತಾರ್ 2’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅದಕ್ಕೂ ಮೊದಲು ‘ಅವತಾರ್’ ಸಿನಿಮಾ ರೀ-ರಿಲೀಸ್ ಆಗಿದೆ. ಈ ಚಿತ್ರ ಕೂಡ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದೇ ದಿನ ‘ಗುರು ಶಿಷ್ಯರು’ ರಿಲೀಸ್ ಆಯಿತು. ಕಳೆದ ವಾರ ಧನಂಜಯ ನಟನೆಯ ‘ಮಾನ್ಸೂನ್ ರಾಗ’ ಮೆಚ್ಚುಗೆ ಪಡೆದುಕೊಂಡಿತು. ಈ ಎರಡೂ ಚಿತ್ರಗಳು ಒಳ್ಳೆಯ ರೆಸ್ಪಾನ್ಸ್ ಪಡೆದವು. ಈ ಚಿತ್ರ ಕೂಡ ಸೆಪ್ಟೆಂಬರ್ 23ರಂದು ಒಳ್ಳೆಯ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಮಿತಿ ಮೀರಿದ ಬಜೆಟ್; ‘ಬ್ರಹ್ಮಾಸ್ತ್ರ’ ಚಿತ್ರಕ್ಕಾಗಿ ಸಂಭಾವನೆಯನ್ನೇ ಪಡೆದಿಲ್ಲ ರಣಬೀರ್ ಕಪೂರ್
ಸಿನಿಮಾ ನೋಡೋಕೆ ಪ್ರೇಕ್ಷಕರು ಥಿಯೇಟರ್ಗೆ ಬರುವುದಿಲ್ಲ ಎಂಬ ಆರೋಪ ಇದೆ. ಆದರೆ, ರಾಷ್ಟ್ರೀಯ ಸಿನಿಮಾ ದಿನ ಈ ವಿಚಾರವನ್ನು ಸುಳ್ಳು ಮಾಡಿದೆ. ಟಿಕೆಟ್ ದರ ಹೆಚ್ಚಿರುವುದರಿಂದಲೇ ಪ್ರೇಕ್ಷಕರು ಥಿಯೇಟರ್ಗೆ ಹೆಚ್ಚಾಗಿ ಬರುತ್ತಿಲ್ಲ ಎಂಬ ವಾದ ಇತ್ತು. ಅದು ಮತ್ತೆ ಸಾಬೀತಾಗಿದೆ.
Published On - 5:22 pm, Sat, 24 September 22