‘ಯಶ್ ಮಾತ್ರವಲ್ಲ, ಬಿಟ್ರೆ ಪ್ರಭಾಸ್​ ಹೆಸರನ್ನು ಎಳೆದು ತರ್ತಾರೆ’; ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಹೀಗೆ ಹೇಳಿದ್ದೇಕೆ?

‘ಬ್ರಹ್ಮಾಸ್ತ್ರ’ ಮೊದಲ ಪಾರ್ಟ್​ನಲ್ಲಿ ಶಿವನ ಪಾತ್ರ ಹೈಲೈಟ್ ಆಗಿತ್ತು. ಶಿವ ಅಸ್ತ್ರ ಸಾಕಷ್ಟು ಗಮನಸೆಳೆದಿತ್ತು. ಈಗ ಎರಡನೇ ಪಾರ್ಟ್​​ನಲ್ಲಿ ದೇವ್ ಪಾತ್ರ ಹೈಲೈಟ್ ಆಗಲಿದೆ. ಈ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ.

‘ಯಶ್ ಮಾತ್ರವಲ್ಲ, ಬಿಟ್ರೆ ಪ್ರಭಾಸ್​ ಹೆಸರನ್ನು ಎಳೆದು ತರ್ತಾರೆ’; ‘ಬ್ರಹ್ಮಾಸ್ತ್ರ’ ಡೈರೆಕ್ಟರ್ ಹೀಗೆ ಹೇಳಿದ್ದೇಕೆ?
ಯಶ್​-ಪ್ರಭಾಸ್
Edited By:

Updated on: Nov 08, 2022 | 5:59 PM

‘ಬ್ರಹ್ಮಾಸ್ತ್ರ’ ಸಿನಿಮಾ (Brahmastra Movie) ಸೂಪರ್ ಹಿಟ್ ಆಗಿದೆ. ಈ ಚಿತ್ರದ ಟ್ರೇಲರ್ ವೀಕ್ಷಿಸಿದವರು ಟ್ರೋಲ್ ಮಾಡಿದ ರೀತಿ ನೋಡಿದ್ದರೆ ಈ ಸಿನಿಮಾ ಫ್ಲಾಪ್​ ಆಗಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಿಲ್ಲ. ಈ ಚಿತ್ರ ಸೂಪರ್ ಹಿಟ್ ಆಗಿದೆ. ಜನರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡರು. ಈಗ ಒಟಿಟಿಯಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಹೀಗಿರುವಾಗಲೇ ‘ಬ್ರಹ್ಮಾಸ್ತ್ರ 2’ ಬಗ್ಗೆ ಚರ್ಚೆ ಜೋರಾಗಿದೆ. ‘ಬ್ರಹ್ಮಾಸ್ತ್ರ’ ಸೀಕ್ವೆಲ್​ನಲ್ಲಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ಯಶ್ (Yash) ಮೊದಲಾದವರ ಹೆಸರನ್ನು ಎಳೆದು ತರಲಾಗಿತ್ತು. ಈ ವಿಚಾರವಾಗಿ ‘ಬ್ರಹ್ಮಾಸ್ತ್ರ’ ನಿರ್ದೇಶಕ ಅಯಾನ್ ಮುಖರ್ಜಿ ಅವರು ಮಾತನಾಡಿದ್ದಾರೆ.

‘ಬ್ರಹ್ಮಾಸ್ತ್ರ’ ಮೊದಲ ಪಾರ್ಟ್​ನಲ್ಲಿ ಶಿವನ ಪಾತ್ರ ಹೈಲೈಟ್ ಆಗಿತ್ತು. ಶಿವ ಅಸ್ತ್ರ ಸಾಕಷ್ಟು ಗಮನಸೆಳೆದಿತ್ತು. ಈಗ ಎರಡನೇ ಪಾರ್ಟ್​​ನಲ್ಲಿ ದೇವ್ ಪಾತ್ರ ಹೈಲೈಟ್ ಆಗಲಿದೆ. ಈ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಅಷ್ಟೇ ಅಲ್ಲ, ಹಲವರ ಹೆಸರನ್ನು ಎಳೆದು ತರಲಾಗಿದೆ.

ದೇವ್ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ನಂತರ ರಣವೀರ್ ಸಿಂಗ್ ಹೆಸರನ್ನು ಎಳೆದು ತಂದರು. ಈಗ ಯಶ್ ಹೆಸರು ಕೇಳಿಬರುತ್ತಿದೆ. ಯಶ್ ಹಾಗೂ ಕರಣ್ ಜೋಹರ್ ಮಧ್ಯೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಕ್ಕೆ ಅಯಾನ್ ಮುಖರ್ಜಿ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ
Gandhada Gudi Trailer: ಒಂದೇ ದಿನದಲ್ಲಿ 1 ಕೋಟಿ ಬಾರಿ ವೀಕ್ಷಣೆ ಕಂಡ ‘ಗಂಧದ ಗುಡಿ’ ಟ್ರೇಲರ್
Gandhada Gudi: ರಮ್ಯಾ ಕೈ ಸೇರಿತು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ ಆಮಂತ್ರಣ ಪತ್ರಿಕೆ
Gandhada Gudi: ‘ಗಂಧದ ಗುಡಿ’ ಟ್ರೇಲರ್ ರಿಲೀಸ್ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಹೇಳಿದ್ದು ಒಂದೇ ಮಾತು..
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ

‘ಅವರು ಮೊದಲು ಹೃತಿಕ್ ಎಂದರು. ನಂತರ ರಣವೀರ್ ಸಿಂಗ್ ಎಂದರು. ಈಗ ಯಶ್ ಎನ್ನುತ್ತಿದ್ದಾರೆ. ಬಿಟ್ರೆ ಅವರು ಪ್ರಭಾಸ್ ಅವರ ಹೆಸರನ್ನೂ ಹೇಳುತ್ತಾರೆ. ಎಲ್ಲರಿಗೂ ದೇವ್ ಪಾತ್ರದ ಮೇಲೆ ಕುತೂಹಲ ಮೂಡಿದೆ. ಆದರೆ, ನಾವು ದೇವ್ ಪಾತ್ರಕ್ಕೆ ಯಾರನ್ನೂ ಅಂತಿಮ ಮಾಡಿಲ್ಲ. ಶೀಘ್ರವೇ ಈ ಪ್ರಕ್ರಿಯೆ ನಡೆಯಲಿದೆ’ ಎಂದಿದ್ದಾರೆ ಅಯಾನ್. ಈ ಮೂಲಕ ಎಲ್ಲಾ ವದಂತಿಗೆ ಅವರು ಬ್ರೇಕ್ ಹಾಕಿದ್ದಾರೆ.

ಇದನ್ನೂ ಓದಿ: ಹಿಂದಿ ಬಿಗ್ ಬಜೆಟ್​ ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಯಶ್? ರಾಕಿಂಗ್ ಸ್ಟಾರ್ ನೀಡಿದ ಕಾರಣ ಏನು?

ಯಶ್ ಅವರ ಮುಂದಿನ ಚಿತ್ರ ಯಾವುದು ಎಂಬುದಕ್ಕೆ ಇಲ್ಲಿವರೆಗೆ ಅಧಿಕೃತ ಘೋಷಣೆ ಆಗಿಲ್ಲ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ‘ಬ್ರಹ್ಮಾಸ್ತ್ರ 2’ಗೆ ಯಶ್ ಅವರನ್ನು ಅಯಾನ್ ಅಪ್ರೋಚ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.