AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್ ಜೊತೆ ಐಕಾನಿಕ್​ ಹಾಡಿಗೆ ಹೆಜ್ಜೆ ಹಾಕಿದ ಬಾಕ್ಸರ್​ ನಿಖತ್​ ಜರೀನ್

ಬಾಕ್ಸರ್​ ನಿಖತ್​ ಜರೀನ್​ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರೊಂದಿಗೆ ಅವರ ಸಾಂಪ್ರಾದಾಯಿಕ ಗೀತೆ ‘ಸಾಥಿಯಾ ತುನೆ ಕ್ಯಾ ಕಿಯಾ' ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ.

ಸಲ್ಮಾನ್​ ಖಾನ್ ಜೊತೆ ಐಕಾನಿಕ್​ ಹಾಡಿಗೆ ಹೆಜ್ಜೆ ಹಾಕಿದ ಬಾಕ್ಸರ್​ ನಿಖತ್​ ಜರೀನ್
ನಿಖತ್​ ಜರೀನ್, ಸಲ್ಮಾನ್​ ಖಾನ್
TV9 Web
| Edited By: |

Updated on:Nov 09, 2022 | 11:04 AM

Share

ಬಾಕ್ಸರ್​ ‘ನಿಖತ್​ ಜರೀನ್’ ಅವರು ಸಲ್ಮಾನ್​ ಖಾನ್(salman khan)​ ಅವರೊಂದಿಗೆ ಅವರ ‘ಲವ್’ ಚಿತ್ರದ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಈ ವಿಡಿಯೋವನ್ನ ಬಾಕ್ಸರ್​ ತನ್ನ ಟ್ವಿಟ್ಟರ್​ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದು ‘ ಡ್ರೀಮ್ ಕಮ್​ ಟ್ರೂ’ (dream come true) ಹೀಗೆಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಸಲ್ಮಾನ್​ ಖಾನ್​ ಕಪ್ಪು ಪ್ಯಾಂಟ್​ನೊಂದಿಗೆ ಬಿಳಿ ಶರ್ಟ್​ನಲ್ಲಿ ಕಾಣಿಸಿಕೊಂಡರೆ, ನಿಖತ್​ ನೀಲಿ ಅಥ್ಲೀಸರ್​ನಲ್ಲಿ ಕಾಣುತ್ತಾರೆ. ಈ ವಿಡಿಯೋದ ಜೊತೆಗೆ ‘ಫೈನಲಿ ಇಂತೇಜರ್​ ಖತಮ್​ ಹುವಾ'(finally intezar khatam hua) ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಕಾಮೆಂಟ್ಗ್ಗಳು ಹರಿದು ಬರುತ್ತಿದೆ. ಅಭಿಮಾನಿಯೊಬ್ಬರು ‘ನನಗೆ ಗೊತ್ತಿಲ್ಲ, ಈ ಹಾಡಿನಲ್ಲಿ ಭಾಯ್ ನೃತ್ಯವನ್ನ ನೋಡಿ ಭಾವುಕನಾದೆ ಲವ್​ ಯು ಭಾಯ್​ ಹಾಗೂ ನಿಖತ್​ ನಿಮಗೆ ಧನ್ಯವಾದಗಳು’ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ‘ನಿಮಗೆ ಅಭಿನಂದನೆಗಳು ಅಂತಿಮವಾಗಿ ನೀವು ಅವರನ್ನು ಭೇಟಿಯಾಗಿದ್ದೀರಿ, ದೇವರು ನಿಮಗೆ ಆಶೀರ್ವದಿಸಲಿ’ ಎಂದಿದ್ದಾರೆ.

ಇದನ್ನೂ ಓದಿ:

ನಿಖತ್​ ಜರೀನ್​ ಅವರು ಮೇ ತಿಂಗಳಿನಲ್ಲಿ ನಡೆದಿದ್ದ ವಿಶ್ವ ಮಹಿಳಾ ಬಾಕ್ಸಿಂಗ್​ ಚಾಂಪಿಯನ್​ಶಿಪ್​ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನ ಗೆದ್ದುಕೊಟ್ಟಿದ್ದಾರೆ. ನಿಖತ್​ ಪದಕ ಗೆದ್ದ ನಂತರ ಸಲ್ಮಾನ್ ಖಾನ್​ ಟ್ವಿಟ್ಟರ್​ನಲ್ಲಿ ವಿಶ್​ ಮಾಡಿದ್ದಾರೆ,‘ಚಿನ್ನದ ನಿಖತ್​ಗೆ ಅಭಿನಂದನೆಗಳು’ ಎಂದು ಬರೆದಿದ್ದರು, ಇದನ್ನು ನೋಡಿದ ನಿಖತ್​ ತುಂಬಾ ಖುಷಿಯಾಗಿ ನನ್ನ ಖುಷಿಯನ್ನು ದುಪ್ಪಟ್ಟುಗೊಳಿಸಿದ್ದಕ್ಕಾಗಿ ಧನ್ಯವಾದಗಳು, ಈ ಕ್ಷಣ ಶಾಶ್ವತವಾಗಿ ನನ್ನ ಹೃದಯಲ್ಲಿ ಇರುತ್ತದೆ ಎಂದಿದ್ದರು.

ಸಲ್ಮಾನ್​ ಖಾನ್​ ಅವರ ಮುಂದಿನ ಸಿನಿಮಾ ‘ಕಿಸಿ ಕಾ ಭಾಯ್​ ಕಿಸಿ ಕಾ ಜಾನ್’​ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶೆಹನಾಜ್​ ಗಿಲ್​ ಮತ್ತು ರಾಘವ್​ ಜುಯಲ್​ ನಟಿಸಿದ್ದಾರೆ, ‘ಟೈಗರ್​-3′ ಸಿನಿಮಾದಲ್ಲಿ ಕತ್ರಿನಾ ಕೈಫ್​ ಜೋಡಿಯಾಗಲಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್​ ಮಾಡಿ

Published On - 10:59 am, Wed, 9 November 22

Follow Us
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ