Ayan Mukerji: ‘ಬ್ರಹ್ಮಾಸ್ತ್ರ 2’ ಚಿತ್ರದ ಪ್ಲ್ಯಾನ್​ನಲ್ಲಿ ಭಾರಿ ಬದಲಾವಣೆ; ಇನ್ನಷ್ಟು ಹಿರಿದಾಗಲಿದೆ ಸೀಕ್ವೆಲ್​ ಬಜೆಟ್​

Brahmastra Box Office Collection: ಈಗಾಗಲೇ ತಿಳಿದಿರುವಂತೆ ‘ಬ್ರಹ್ಮಾಸ್ತ’ ಕಥೆಯನ್ನು ನಿರ್ದೇಶಕ ಅಯಾನ್​ ಮುಖರ್ಜಿ ಅವರು ಮೂರು ಪಾರ್ಟ್​ಗಳಲ್ಲಿ ಹೇಳಲಿದ್ದಾರೆ. ಈಗ ಮೊದಲ ಪಾರ್ಟ್​ ಬಿಡುಗಡೆ ಆಗಿದೆ.

Ayan Mukerji: ‘ಬ್ರಹ್ಮಾಸ್ತ್ರ 2’ ಚಿತ್ರದ ಪ್ಲ್ಯಾನ್​ನಲ್ಲಿ ಭಾರಿ ಬದಲಾವಣೆ; ಇನ್ನಷ್ಟು ಹಿರಿದಾಗಲಿದೆ ಸೀಕ್ವೆಲ್​ ಬಜೆಟ್​
ರಣಬೀರ್ ಕಪೂರ್, ಆಲಿಯಾ ಭಟ್
Edited By:

Updated on: Sep 14, 2022 | 7:30 AM

ರಣಬೀರ್​ ಕಪೂರ್​ (Ranbir Kapoor) ಮತ್ತು ಆಲಿಯಾ ಭಟ್​ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರಕ್ಕೆ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಕಲೆಕ್ಷನ್​ ಆಗಿದೆ. ಬಾಲಿವುಡ್​ ಸಿನಿಮಾಗಳು ಲಾಭವನ್ನೇ ಕಾಣದೇ ಒದ್ದಾಡುತ್ತಿರುವ ಈ ಪರಿಸ್ಥಿತಿಯಲ್ಲಿ ‘ಬ್ರಹ್ಮಾಸ್ತ್ರ’ (Brahmastra) ಚಿತ್ರಕ್ಕೆ ಭಾರಿ ಕಮಾಯಿ ಆಗುತ್ತಿದೆ. ಅಯಾನ್​ ಮುಖರ್ಜಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಮೂರನೇ ದಿನಕ್ಕೆ 225 ಕೋಟಿ ರೂಪಾಯಿ ಕಲೆಕ್ಷನ್​ (Box Office Collection) ಮಾಡಿತು. ನಾಲ್ಕನೇ ದಿನ ಕೂಡ ಒಳ್ಳೆಯ ಕಮಾಯಿ ಆಗಿದೆ. ಇದರ ಪರಿಣಾಮದಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಅಷ್ಟೇ ಅಲ್ಲದೇ, ಈ ಚಿತ್ರದ ಸೀಕ್ವೆಲ್ ಬಗ್ಗೆ ಒಂದು ಬಿಗ್​ ನ್ಯೂಸ್​ ಕೇಳಿಬರುತ್ತಿದೆ. ‘ಕೆಜಿಎಫ್​ 2’ ರೀತಿಯಲ್ಲಿ ‘ಬ್ರಹ್ಮಾಸ್ತ್ರ 2’ ಚಿತ್ರವನ್ನು ಕೂಡ ದೊಡ್ಡ ಕ್ಯಾನ್ವಾಸ್​ನಲ್ಲಿ ಕಟ್ಟಿಕೊಡಲು ಅಯಾನ್​ ಮುಖರ್ಜಿ ಪ್ಲ್ಯಾನ್​ ಮಾಡುತ್ತಿದ್ದಾರೆ.​

ಆರಂಭದಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರದ ಬಗ್ಗೆ ಒಂದು ವರ್ಗದ ಪ್ರೇಕ್ಷಕರು ಅನುಮಾನ ಇಟ್ಟುಕೊಂಡಿದ್ದರು. ಕಳಪೆ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ಟ್ರೇಲರ್​ ಅನ್ನು ಕಟುವಾಗಿ ಟೀಕಿಸಲಾಗಿತ್ತು. ಸಂದರ್ಶನವೊಂದರಲ್ಲಿ ಗೋಮಾಂಸ ಇಷ್ಟ ಎಂದು ರಣಬೀರ್​ ಕಪೂರ್ ಹೇಳಿಕೆ ನೀಡಿದ್ದರಿಂದ ಕೆಲವರು ಈ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಒತ್ತಾಯಿಸಲು ​ಆರಂಭಿಸಿದರು. ಏನೇ ಮಾಡಿದರೂ ಕೂಡ ಚಿತ್ರದ ಕಲೆಕ್ಷನ್​ಗೆ ತೊಂದರೆ ಆಗಿಲ್ಲ. ಜನರಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ಬಂದಂತೆ ಆಗಿದೆ.

ಈಗಾಗಲೇ ತಿಳಿದಿರುವಂತೆ ‘ಬ್ರಹ್ಮಾಸ್ತ’ ಚಿತ್ರದ ಕಥೆಯನ್ನು ನಿರ್ದೇಶಕ ಅಯಾನ್​ ಮುಖರ್ಜಿ ಅವರು ಮೂರು ಪಾರ್ಟ್​ಗಳಲ್ಲಿ ಹೇಳಲಿದ್ದಾರೆ. ಈಗ ಮೊದಲ ಪಾರ್ಟ್​ ಬಿಡುಗಡೆ ಆಗಿದೆ. ಅದಕ್ಕೆ ಭರ್ಜರಿ ಕಲೆಕ್ಷನ್​ ಆಗುತ್ತಿರುವುದರಿಂದ ಎರಡನೇ ಪಾರ್ಟ್​ ಅನ್ನು ಇನ್ನಷ್ಟು ಅದ್ದೂರಿಯಾಗಿ ಕಟ್ಟಿಕೊಡಲು ಅಯಾನ್​ ಮುಖರ್ಜಿ ನಿರ್ಧರಿಸಿದ್ದಾರೆ. ‘ಕೆಜಿಎಫ್​’ ಗೆದ್ದ ಬಳಿಕ ‘ಕೆಜಿಎಫ್​ 2’ ಸಿನಿಮಾವನ್ನು ಇನ್ನಷ್ಟು ಅದ್ದೂರಿಯಾಗಿ ನಿರ್ಮಿಸಲಾಯಿತು. ಅದೇ ಮಾದರಿಯಲ್ಲಿ ‘ಬ್ರಹ್ಮಾಸ್ತ್ರ 2’ ಚಿತ್ರದ ಬಜೆಟ್​ ಹೆಚ್ಚಿಸಲು ಅಯಾನ್​ ಮುಖರ್ಜಿ ಪ್ಲ್ಯಾನ್​ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೇಳಿಬಂದಿದೆ. ಸೆಟ್​, ಗ್ರಾಫಿಕ್ಸ್​ ಎಲ್ಲವೂ ಉತ್ಕೃಷ್ಟವಾಗಿ ಇರಲಿವೆಯಂತೆ.

ಇದನ್ನೂ ಓದಿ
ಬೈಕಾಟ್ ಟ್ರೆಂಡ್​ಗೆ ಸೆಡ್ಡು ಹೊಡೆದ ‘ಬ್ರಹ್ಮಾಸ್ತ್ರ’; ಬಾಕ್ಸ್ ಆಫೀಸ್ ಉಡೀಸ್​ ಮಾಡಿದ ರಣಬೀರ್​-ಆಲಿಯಾ ಚಿತ್ರ
‘ಇದು ಎಕ್ಸ್​​ಟ್ರಾ ಬಜೆಟ್​​ನ ನಾಗಿಣಿ ಧಾರಾವಾಹಿ’; ‘ಬ್ರಹ್ಮಾಸ್ತ್ರ’ ಸಿನಿಮಾ ನೋಡಿದವರು ಹೀಗಂದ್ರು
KRK ಬಂಧನಕ್ಕೆ ‘ಬ್ರಹ್ಮಾಸ್ತ್ರ’ ಟೀಮ್​ ಕಾರಣ ಎಂದು ಆರೋಪಿಸಿದ ನೆಟ್ಟಿಗರು; ಏನಿದು ಹುನ್ನಾರ?
ಸೆ.9ಕ್ಕೆ ‘ಲಕ್ಕಿ ಮ್ಯಾನ್​’ ವರ್ಸಸ್​ ‘ಬ್ರಹ್ಮಾಸ್ತ್ರ’: ಬುಕ್​ ಮೈ ಶೋನಲ್ಲಿ ಹೇಗಿದೆ ಬಲಾಬಲ?

ರಣಬೀರ್​ ಕಪೂರ್​ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಈ ವರ್ಷ ಅವರು ನಟಿಸಿದ್ದ ‘ಶಂಷೇರಾ’ ಚಿತ್ರ ರಿಲೀಸ್​ ಆಗಿ ಸೋಲು ಅನುಭವಿಸಿತು. ಆ ಬೇಸರವನ್ನು ಮರೆಸುವ ರೀತಿಯಲ್ಲಿ ‘ಬ್ರಹ್ಮಾಸ್ತ್ರ’ ಚಿತ್ರ ಗೆದ್ದು ಬೀಗುತ್ತಿದೆ. ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಬೂಸ್ಟ್​ ಸಿಕ್ಕಂತೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.