‘ಪಠಾಣ್’ ಬಳಿಕ ‘ಫೈಟರ್’ಗೂ ಸಿಬಿಎಫ್​ಸಿ ಅವಕೃಪೆ, ಎಲ್ಲದಕ್ಕೂ ಕಾರಣ ದೀಪಿಕಾ ಬಿಕಿನಿ

|

Updated on: Jan 24, 2024 | 3:23 PM

CBFC: ‘ಪಠಾಣ್’ ಸಿನಿಮಾದಲ್ಲಿನ ದೀಪಿಕಾರ ಬಿಕಿನಿ ಹಾಡಿಗೆ 10 ಕಟ್​ಗಳನ್ನು ಸಿಬಿಎಫ್​ಸಿ ಸೂಚಿಸಿತ್ತು, ಇದೀಗ ಅದೇ ದೀಪಿಕಾ, ಬಿಕಿನಿ ಧರಿಸಿ ಫೈಟರ್​ನಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದು, ಸಿಬಿಎಫ್​ಸಿ ಎರಡು ಕಟ್ಸ್ ಸೂಚಿಸಿದೆ.

‘ಪಠಾಣ್’ ಬಳಿಕ ‘ಫೈಟರ್’ಗೂ ಸಿಬಿಎಫ್​ಸಿ ಅವಕೃಪೆ, ಎಲ್ಲದಕ್ಕೂ ಕಾರಣ ದೀಪಿಕಾ ಬಿಕಿನಿ
Follow us on

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathaan) ಸಿನಿಮಾ ಬಿಡುಗಡೆ ವೇಳೆ ಸಿಬಿಎಫ್​ಸಿಯು ದೀಪಿಕಾ ಪಡುಕೋಣೆಯ ‘ಬೇಷರಮ್ ರಂಗ್’ ಒಂದೇ ಹಾಡಿಗೆ 10 ಕಟ್​ಗಳನ್ನು ಸೂಚಿಸಿತ್ತು. ಆ ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟು ಮಾದಕವಾಗಿ ಡ್ಯಾನ್ಸ್ ಮಾಡಿದ್ದರು. ದೀಪಿಕಾ ಧರಿಸಿದ್ದ ಬಿಕಿನಿಯ ಬಣ್ಣದ ಬಗ್ಗೆಯೂ ವಿವಾದವಾಯ್ತು. ಇದೀಗ ದೀಪಿಕಾ ‘ಫೈಟರ್’ ಸಿನಿಮಾದಲ್ಲಿಯೂ ಬಿಕಿನಿ ಧರಿಸಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು, ಸಿಬಿಎಫ್​ಸಿ ಮತ್ತೆ ಆಕ್ಷೇಪಣೆ ಎತ್ತಿದೆ. ವಿಶೇಷವೆಂದರೆ ಎರಡೂ ಸಿನಿಮಾಗಳ ನಿರ್ದೇಶಕ ಒಬ್ಬರೇ.

ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಫೈಟರ್’ ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟು ಹಾಡೊಂದರಲ್ಲಿ ಬಹು ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಅದೇ ಹಾಡಿನಲ್ಲಿ ಹೃತಿಕ್ ರೋಷನ್ ಸಹ ಶರ್ಟ್ ಬಿಚ್ಚಿ ತಮ್ಮ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಿದ್ದಾರೆ. ಈ ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸಿಬಿಎಫ್​ಸಿ ಎರಡು ಕಟ್​ಗಳನ್ನು ಸೂಚಿಸಿ ಯು/ಎ ಪ್ರಮಾಣ ಪತ್ರ ನೀಡಿದೆ.

ಸಿದ್ಧಾರ್ಥ್ ಆನಂದ್ ‘ಫೈಟರ್’ ಸಿನಿಮಾ ನಿರ್ದೇಶನ ಮಾಡಿದ್ದು, ಅವರ ಈ ಹಿಂದಿನ ಸಿನಿಮಾ ‘ಪಠಾಣ್’ನಲ್ಲಿಯೂ ಸಹ ದೀಪಿಕಾ ಪಡುಕೋಣೆಗೆ ಬಿಕಿನಿ ಹಾಕಿಸಿ ಮಾದಕ ನೃತ್ಯ ಮಾಡಿಸಿದ್ದರು. ಅದರಿಂದ ಸಾಕಷ್ಟು ವಿರೋಧವನ್ನೂ ಸಹ ಎದುರಿಸಿದ್ದರು. ಹಾಗಿದ್ದರೂ ಸಹ ಈ ಸಿನಿಮಾದಲ್ಲಿಯೂ ಮತ್ತೆ ಅದನ್ನೇ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಎರಡು ಕಟ್​ಗಳನ್ನು ಸಹ ಪಡೆದುಕೊಂಡಿದ್ದಾರೆ. ದೇಶಭಕ್ತಿಯನ್ನು ಸಾರುವ ಸಿನಿಮಾ ಆದರೂ ಸಹ ಆ ಹಾಡಿನಿಂದಾಗಿ ಯು ಬದಲಿಗೆ ಯು/ಎ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:‘ಆರ್​ಸಿಬಿ ಹೊರಹಾಕಿದ ದುಬಾರಿ ವೇಗಿಯನ್ನು ಸಿಎಸ್​ಕೆ ಖರೀದಿಸಬೇಕು’; ಇರ್ಫಾನ್ ಪಠಾಣ್

ಈ ಬಗ್ಗೆ ಮಾತನಾಡಿರುವ ಸಿದ್ಧಾರ್ಥ್ ಆನಂದ್, ‘ಸಿಬಿಎಫ್​ಸಿಯ ಕಟ್​ಗಳ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾದ ಫ್ಲೋಗೆ ಅವು ಅಡ್ಡಿ ಆಗುತ್ತಿಲ್ಲ. ನನ್ನ ಸಿನಿಮಾದ ಕತೆಯಲ್ಲಿ ಎಲ್ಲವೂ ಸಹಜವಾಗಿ ಆಗುವಂಥಹದ್ದು. ಬಲವಂತವಾಗಿ ತುರುಕಿದ್ದಲ್ಲ. ಈ ದೃಶ್ಯ, ಹಾಡು ನನ್ನ ಸಿನಿಮಾಕ್ಕೆ ಅವಶ್ಯಕತೆ ಇದೆ ಎಂದಾಗ ಅದನ್ನು ಬಿಡದೆ ಮಾಡಿದ್ದೇನೆ. ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್​ಸಿಗೆ ಕೆಲವು ಗೈಡ್​ಲೈನ್​ಗಳಿವೆ ಅದನ್ನು ಅವರು ಪಾಲಿಸಲೇಬೇಕು, ಅದರ ಅರಿವು ನಮಗೂ ಇದೆ’ ಎಂದಿದ್ದಾರೆ.

‘ಈಗ ಸಿಬಿಎಫ್​ಸಿ ಸೂಚಿಸಿರುವ ಕಟ್ಸ್​ಗಳ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ ಆ ದೃಶ್ಯಗಳು ಸಿನಿಮಾದ ಎಂಡ್​ ಕ್ರೆಡಿಟ್ಸ್​ನಲ್ಲಿವೆ. ಕತೆಯೆಲ್ಲ ಮುಗಿದ ಬಳಿಕ ಬರುವ ದೃಶ್ಯಗಳ ಕೆಲವು ಭಾಗಗಳನ್ನು ಕತ್ತರಿಸಲು ಹೇಳಲಾಗಿದೆ. ಅದು ಸಿನಿಮಾದ ಕತೆಯ ವೋಘಕ್ಕೆ ಅಡ್ಡಿಪಡಿಸುವುದಿಲ್ಲ. ಈಗ ಕತ್ತರಿಸಲು ಸೂಚಿಸಿರುವ ಮುಖ್ಯವಾದ ಸೀನ್​ಗಳಲ್ಲ’ ಎಂದಿದ್ದಾರೆ ಸಿದ್ಧಾರ್ಥ್. ಫೈಟರ್ ಸಿನಿಮಾ ಜನವರಿ 25ಕ್ಕೆ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ