‘ಪಠಾಣ್’ ಚಿತ್ರದ ಬಳಿಕ ಶಾರುಖ್ಗೆ ಬಂದ ಜಾಹೀರಾತುಗಳೆಷ್ಟು? ಇದರಿಂದ ಆದ ಲಾಭ ಅಷ್ಟಿಷ್ಟಲ್ಲ..
‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಚಿತ್ರಗಳು ಹಿಟ್ ಆದವು. ಈ ಮೂರು ಸಿನಿಮಾಗಳಿಂದ ಒಟ್ಟಾರೆ ಬಿಸ್ನೆಸ್ ಆಗಿದ್ದು ಬರೋಬ್ಬರಿ 2600 ಕೋಟಿ ರೂಪಾಯಿ. ಶಾರುಖ್ ಖಾನ್ ಅವರಿಂದ ಚಿತ್ರರಂಗಕ್ಕೆ ದೊಡ್ಡ ಬೂಮ್ ಸಿಕ್ಕಿದೆ.
ಪ್ರತಿ ಬ್ರ್ಯಾಂಡ್ಗಳು ಪ್ರಚಾರಕ್ಕೆ ಖ್ಯಾತ ನಟರನ್ನು ಆಯ್ಕೆ ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತವೆ. ಒಂದೊಮ್ಮೆ ಸ್ಟಾರ್ಗಳ ಜನಪ್ರಿಯತೆ ಕಡಿಮೆ ಆದರೆ ಅವರ ಮೇಲೆ ಹೆಚ್ಚು ಹೂಡಿಕೆ ಮಾಡುವುದಿಲ್ಲ. ಸಿನಿಮಾ ಬ್ಯಾಕ್ ಟು ಬ್ಯಾಕ್ ಹಿಟ್ ಆಗುತ್ತಿದ್ದರೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳೋಕೆ ಹೆಚ್ಚು ಅವಕಾಶ ಸಿಗುತ್ತದೆ. ಶಾರುಖ್ ಖಾನ್ ಅವರಿಗೂ ಹಾಗೆಯೇ ಆಗಿದೆ. ಸಿನಿಮಾ ಸೋಲುತ್ತಿದ್ದಾಗ ಅವರು ಕಾಣಿಸಿಕೊಳ್ಳುತ್ತಿದ್ದ ಜಾಹೀರಾತು ಸಂಖ್ಯೆಗೂ, ಸಿನಿಮಾ ಗೆಲ್ಲುತ್ತಿರುವಾಗ ಅವರು ಕಾಣಿಸಿಕೊಳ್ಳುತ್ತಿರುವ ಜಾಹೀರಾತು ಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ‘ಪಠಾಣ್’ ಸಿನಿಮಾ (Pathaan Movie) ಹಿಟ್ ಆದ ಬಳಿಕ ಅವರ ಅದೃಷ್ಟ ಬದಲಾಗಿದೆ. ಹಲವು ಬ್ರ್ಯಾಂಡ್ಗಳು ಶಾರುಖ್ ಖಾನ್ ಅವರನ್ನು ಹುಡುಕಿ ಬಂದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಶಾರುಖ್ ಖಾನ್ ಅವರು 2018ರಲ್ಲಿ ನಟಿಸಿದ ‘ಜಿರೋ’ ಸಿನಿಮಾ ಹೀನಾಯವಾಗಿ ಸೋತಿತು. ಇದಕ್ಕೂ ಮೊದಲು ಅವರು ನಟಿಸಿದ ಅನೇಕ ಚಿತ್ರಗಳು ಸಾಲು ಸಾಲು ಫ್ಲಾಪ್ ಆಗಿದ್ದವು. ಈ ಕಾರಣಕ್ಕೆ ಶಾರುಖ್ ಖಾನ್ ಅವರು ಒಂದು ದೊಡ್ಡ ಬ್ರೇಕ್ ಪಡೆದರು. ಆ ಬಳಿಕ ಅವರು ‘ಪಠಾಣ್’ ಚಿತ್ರದಿಂದ ಕಂಬ್ಯಾಕ್ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ‘ಜವಾನ್’ ಹಾಗೂ ‘ಡಂಕಿ’ ಚಿತ್ರಗಳು ಹಿಟ್ ಆದವು. ಈ ಮೂರು ಸಿನಿಮಾಗಳಿಂದ ಒಟ್ಟಾರೆ ಆದ ಬಿಸ್ನೆಸ್ ಬರೋಬ್ಬರಿ 2600 ಕೋಟಿ ರೂಪಾಯಿ. ಶಾರುಖ್ ಖಾನ್ ಅವರಿಂದ ಚಿತ್ರರಂಗಕ್ಕೆ ದೊಡ್ಡ ಬೂಮ್ ಸಿಕ್ಕಿದೆ.
ಶಾರುಖ್ ಖಾನ್ ಖ್ಯಾತಿ ಹೆಚ್ಚುತ್ತಿದ್ದಂತೆ ಹಲವು ಬ್ರ್ಯಾಂಡ್ಗಳು ಅವರ ಬಳಿ ಬಂದಿವೆ. 2023ರ ಜನವರಿಯಿಂದ ಇಲ್ಲಿಯವರೆಗೆ ಶಾರುಖ್ ಖಾನ್ ಅವರು 10ಕ್ಕೂ ಅಧಿಕ ಬ್ರ್ಯಾಂಡ್ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಪೈಕಿ, ಆನ್ಲೈನ್ ಶಾಪಿಂಗ್ ತಾಣ ಮಿಂತ್ರಾ, ಮೊಬೈಲ್ ಸಂಸ್ಥೆ ರಿಯಲ್ಮಿ, ಸನ್ಫೀಸ್ಟ್ ಡಾರ್ಕ್ ಫ್ಯಾಂಟಸಿ ಬಿಸ್ಕತ್ ಮೊದಲಾದವು ಪ್ರಮುಖವಾದವು. ಈ ಪೈಕಿ ಬಹುತೇಕ ಬ್ರ್ಯಾಂಡ್ಗಳು ಶಾರುಖ್ಗೆ ದೊಡ್ಡ ಮೊತ್ತ ನೀಡಿವೆ.
2023ರ ಜನವರಿಯಿಂದ ಜುಲೈವರೆಗೆ ಶಾರುಖ್ ಖಾನ್ ಅವರು ಬರೋಬ್ಬರಿ 21 ಬ್ರ್ಯಾಂಡ್ಗಳ ಪ್ರಚಾರ ಮಾಡಿದ್ದಾರೆ. 2022ರಲ್ಲಿ ಈ ಸಂಖ್ಯೆ 11 ಇತ್ತು ಎನ್ನಲಾಗಿದೆ. ಇನ್ನು ಶಾರುಖ್ ಖಾನ್ ಅವರು ಬ್ರ್ಯಾಂಡ್ ಪ್ರಚಾರಕ್ಕೆ ಪಡೆಯುವ ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ.
ಇದನ್ನೂ ಓದಿ: ಯಾರಿಗೂ ಗೊತ್ತಾಗದಂತೆ ಕ್ಲಿನಿಕ್ ಒಳಗೆ ಹೋದ ಶಾರುಖ್ ಖಾನ್; ಬರುವಾಗ ಆಗಿದ್ದೇನು?
ಶಾರುಖ್ ಖಾನ್ ಅವರು ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಮೂಲಕ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ಈ ವರ್ಷವೂ ಅವರು ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಘೋಷಣೆ ಮಾಡುವ ಪ್ಲ್ಯಾನ್ನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಸದ್ಯ ಇವುಗಳು ಮಾತುಕತೆ ಹಂತದಲ್ಲಿದೆ. ಎಲ್ಲವೂ ಫೈನಲ್ ಆದ ಬಳಿಕ ಶಾರುಖ್ ಖಾನ್ ಅವರು ಈ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ