2024ರಲ್ಲೂ ಶಾರುಖ್ ಖಾನ್ ಹ್ಯಾಟ್ರಿಕ್? ಶೀಘ್ರದಲ್ಲೇ 3 ಸಿನಿಮಾ ಅನೌನ್ಸ್
2024ರ ವರ್ಷ ಹೇಗಿರಬೇಕು ಎಂದು ಶಾರುಖ್ ಖಾನ್ ಪ್ಲ್ಯಾನ್ ಮಾಡಿದ್ದಾರೆ. ಯಾವ ಪ್ರಕಾರದ ಸಿನಿಮಾಗಳನ್ನು ಮಾಡಬೇಕು ಎಂಬ ಬಗ್ಗೆಯೂ ಅವರು ಪಕ್ಕಾ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬರುವ ಸಿನಿಮಾಗಳ ಮೂಲಕ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಲಿದ್ದಾರೆ.
ನಟ ಶಾರುಖ್ ಖಾನ್ (Shah Rukh Khan) ಅವರು ಹೊಸ ವರ್ಷದ ಖುಷಿಯನ್ನು ಸವಿಯಲು ವಿದೇಶಕ್ಕೆ ತೆರಳಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿರುವ ಅವರು ಕುಟುಂಬದವರ ಜೊತೆ ಲಂಡನ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾ (Shah Rukh Khan New Movie) ಯಾವುದು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದಷ್ಟು ಬೇಗ ಈ ಬಗ್ಗೆ ಅನೌನ್ಸ್ಮೆಂಟ್ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಒಂದು ಇಂಟರೆಸ್ಟಿಂಗ್ ಗಾಸಿಪ್ ಕೇಳಿಬಂದಿದೆ. ಶೀಘ್ರದಲ್ಲೇ ಶಾರುಖ್ ಖಾನ್ (SRK) ಅವರು ಮೂರು ಸಿನಿಮಾಗಳನ್ನು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.
ಶಾರುಖ್ ಖಾನ್ ಅವರ ಪಾಲಿಗೆ 2023ರ ವರ್ಷ ತುಂಬ ಲಾಭದಾಯಕವಾಗಿತ್ತು. ಅವರು ನಟಿಸಿದ ಮೂರು ಸಿನಿಮಾಗಳು ಹಿಟ್ ಆದವು. ವರ್ಷದ ಆರಂಭದಲ್ಲಿ ಬಂದ ‘ಪಠಾಣ್’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಸಿತು. ನಂತರ ಬಂದ ‘ಜವಾನ್’ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯಿತು. ವರ್ಷದ ಕೊನೆಯಲ್ಲಿ ತೆರೆಕಂಡ ‘ಡಂಕಿ’ ಸಹ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಆ ಮೂಲಕ ಶಾರುಖ್ ಖಾನ್ ಹ್ಯಾಟ್ರಿಕ್ ಗೆಲುವು ಪಡೆದವು.
ಇದನ್ನೂ ಓದಿ: ‘ನಾನು ಕೆಟ್ಟ ವ್ಯಕ್ತಿಯ ಪಾತ್ರ ಮಾಡಿದರೆ…’; ‘ಅನಿಮಲ್’ ಚಿತ್ರಕ್ಕೆ ಕುಟುಕಿದ್ರಾ ಶಾರುಖ್ ಖಾನ್?
2024ರ ವರ್ಷ ಹೇಗಿರಬೇಕು ಎಂದು ಶಾರುಖ್ ಖಾನ್ ಪ್ಲ್ಯಾನ್ ಮಾಡಿದ್ದಾರೆ. ಯಾವ ಪ್ರಕಾರದ ಸಿನಿಮಾಗಳನ್ನು ಮಾಡಬೇಕು ಎಂಬ ಬಗ್ಗೆಯೂ ಅವರು ಪಕ್ಕಾ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬರುವ ಸಿನಿಮಾಗಳ ಮೂಲಕ ಶಾರುಖ್ ಖಾನ್ ಅವರು ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಲಿದ್ದಾರೆ. ವರ್ಷದ ಆರಂಭದಲ್ಲೇ 3 ಸಿನಿಮಾಗಳು ಘೋಷಣೆ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಇದನ್ನೂ ಓದಿ: ‘ಗುಂಟೂರು ಖಾರಂ’ ಸಿನಿಮಾ ನೋಡಲಿರುವ ಶಾರುಖ್ ಖಾನ್; ಮಹೇಶ್ ಬಾಬು ಫ್ಯಾನ್ಸ್ಗೆ ಖುಷಿ
ಒಂದಷ್ಟು ವರ್ಷಗಳ ಕಾಲ ಶಾರುಖ್ ಖಾನ್ ಅವರು ಸಾಲು ಸಾಲು ಸೋಲು ಕಂಡಿದ್ದರು. ಮಾಡಿದ ಯಾವ ಚಿತ್ರವೂ ಅವರ ಕೈ ಹಿಡಿಯುತ್ತಿರಲಿಲ್ಲ. ಆದರೆ ಈಗ ಅವರಿಗೆ ಅದೃಷ್ಟ ಕೈ ಹಿಡಿದಿದೆ. ಮಾಡಿದ ಪ್ರಯತ್ನಕ್ಕೆ ಸೂಕ್ತ ಫಲ ಸಿಗುತ್ತಿದೆ. ಹಾಗಾಗಿ ಶಾರುಖ್ ಖಾನ್ ಅವರು ತುಂಬಾ ಕಾನ್ಫಿಡೆಂಟ್ ಆಗಿದ್ದಾರೆ. ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರ ಮಾಡುವುದಾಗಿಯೂ ಅವರು ಈ ಹಿಂದಿನ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ಆ ಕಾರಣದಿಂದಲೂ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಘಟಾನುಘಟಿ ನಿರ್ದೇಶಕರ ಜೊತೆ ಶಾರುಖ್ ಖಾನ್ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ