AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

11 ಕೋಟಿ ವಂಚನೆ, ನಿರ್ದೇಶಕ, ಕೊರಿಯೋಗ್ರಾಫರ್ ರೆಮೊ ಹಾಗೂ ಪತ್ನಿ ವಿರುದ್ಧ ದೂರು

ಭಾರತ ಚಿತ್ರರಂಗದ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಮತ್ತು ಸಿನಿಮಾ ನಿರ್ದೇಶಕ ರೆಮೊ ಡಿ ಸೋಜಾ ಹಾಗೂ ಅವರ ಪತ್ನಿಯ ವಿರುದ್ಧ 11.96 ಕೋಟಿ ವಂಚಿಸಿರುವ ಆರೋಪ ಹೊರಿಸಲಾಗಿದೆ. ಈ ಇಬ್ಬರ ಜೊತೆಗೆ ಇನ್ನೂ ಐವರ ವಿರುದ್ಧ ಡ್ಯಾನ್ಸ್ ಗ್ರೂಫ್​ನ ಮುಖ್ಯಸ್ಥರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.

11 ಕೋಟಿ ವಂಚನೆ, ನಿರ್ದೇಶಕ, ಕೊರಿಯೋಗ್ರಾಫರ್ ರೆಮೊ ಹಾಗೂ ಪತ್ನಿ ವಿರುದ್ಧ ದೂರು
ಮಂಜುನಾಥ ಸಿ.
|

Updated on: Oct 19, 2024 | 6:48 PM

Share

ಭಾರತೀಯ ಚಿತ್ರರಂಗದ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಮತ್ತು ಸಿನಿಮಾ ನಿರ್ದೇಶಕರೂ ಆಗಿರುವ ರೆಮೊ ಡಿಸೋಜಾ ಹಾಗೂ ಅವರ ಪತ್ನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಡ್ಯಾನ್ಸ್ ಟ್ರೂಪ್ ಒಂದನ್ನು 11 ಕೋಟಿ ರೂಪಾಯಿ ಹಣವನ್ನು ರೆಮೊ ಡಿಸೋಜಾ ಅವರ ಪತ್ನಿ ಹಾಗೂ ಇನ್ನಿತರರು ವಂಚನೆ ಮಾಡಿದ್ದಾಗಿ ಆರೋಪ ಮಾಡಲಾಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪೊಲೀಸ್ ಠಾಣೆಯೊಂದರಲ್ಲಿ ರೆಮೊ ಡಿಸೋಜಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. 26 ವರ್ಷದ ಡ್ಯಾನ್ಸರ್ ಒಬ್ಬರು ರೆಮೊ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.

ದಾಖಲಾಗಿರುವ ಎಫ್​ಐಆರ್​ನಂತೆ, ರೆಮೊ ಡಿಸೋಜಾ ಅವರ ಪತ್ನಿ ಲೀಜೆಲ್ಲಾ, ಓಂ ಪ್ರಕಾಶ್ ಶಂಕರ್ ಚೌಹಾಣ್, ರೋಹಿತ್ ಜಾಧವ್, ಫ್ರೇಂ ಪ್ರೊಡಕ್ಷನ್ ಕಂಪೆನಿ, ವಿನೋದ್ ರಾವತ್, ರಮೇಶ್ ಗುಪ್ತಾ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ಸಹ ಯುವಕ ದೂರು ದಾಖಲಿಸಿದ್ದಾನೆ. 2018 ರಿಂದ 2024ರ ವರೆಗೆ ಡ್ಯಾನ್ಸ್ ಗ್ರೂಫ್​ ಒಂದಕ್ಕೆ ಈ ಏಳು ಮಂದಿ ಮೋಸ ಮಾಡಿದ್ದು, ಇಲ್ಲಿಯವರೆಗೆ 11.96 ಕೋಟಿ ರೂಪಾಯಿ ಹಣ ವಂಚನೆ ಮಾಡಲಾಗಿದೆಯಂತೆ. ಆರೋಪಿಗಳ ಮೇಲೆ ಸೆಕ್ಷನ್ 465 (ಫೋರ್ಜರಿ), 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ದಾಖಲಾಗಿರುವ ದೂರಿನಂತೆ, ಈಗ ದೂರು ನೀಡಿರುವ ಯುವಕನದ್ದು ಡ್ಯಾನ್ಸ್ ಗ್ರೂಫ್ ಇದ್ದು, 2018 ರಿಂದ 2024 ರವರೆಗೆ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಇತರೆ ಡ್ಯಾನ್ಸ್ ಕಾಂಪಿಟೇಶನ್​ಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಗೆದ್ದಿದ್ದು, ರೆಮೊ ಡಿಸೋಜಾ ಹಾಗೂ ಇತರರು ಈ ಡ್ಯಾನ್ಸ್ ಗ್ರೂಪ್​ ತಮ್ಮದೆಂದು ಸುಳ್ಳು ಹೇಳಿ ನಕಲಿ ಚಿತ್ರ, ದಾಖಲೆಗಳನ್ನು ಬಳಸಿ ಗೆದ್ದ ಹಣವನ್ನೆಲ್ಲ ಅವರೇ ಇಟ್ಟುಕೊಂಡಿದ್ದಾರಂತೆ. ಡ್ಯಾನ್ಸ್ ಗ್ರೂಪ್​ಗೆ ಸೇರಬೇಕಾದ ಹಣ ಕೇಳಿದಾಗ ಬೆದರಿಕೆ ಸಹ ಹಾಕಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಇದನ್ನೂ ಓದಿ:World Tourism Day 2024: ವಿಶಿಷ್ಟ ಶಿಲಾರಚನೆಯಿಂದಲೇ ಅಚ್ಚರಿ ಮೂಡಿಸುವ ಕರ್ನಾಟಕದ ತಾಣಗಳಿವು

ರೆಮೊ ಡಿಸೋಜಾ, ಚಿತ್ರರಂಗದ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದು ಹಲವಾರು ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಜಡ್ಜ್ ಸಹ ಆಗಿದ್ದಾರೆ. 2009 ರಿಂದಲೂ ಒಂದಲ್ಲ ಒಂದು ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಆಗಿ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ ರೆಮೊ, ‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’, ‘ಝಲಕ್ ದಿಕ್​ಲಾಜ’, ‘ಡ್ಯಾನ್ಸ್ ಕೆ ಸೂಪರ್​ ಸ್ಟಾರ್’, ‘ಡ್ಯಾನ್ಸ್ ಪ್ಲಸ್’, ‘ಡ್ಯಾನ್ಸ್ ಚಾಂಪಿಯನ್ಸ್’, ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’, ‘ಡಿಐಡಿ ಲಿಟಲ್ ಮಾಸ್ಟರ್’, ‘ಡಿಐಡಿ ಸೂಪರ್ ಮಾಮ್’ ಇನ್ನೂ ಹಲವು ಡ್ಯಾನ್ಸ್ ಶೋಗಳಿಗೆ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಸಿನಿಮಾ ನಿರ್ದೇಶಕರೂ ಆಗಿರುವ ರೆಮೊ ಡಿಸೋಜಾ, ‘ಎಬಿಸಿಡಿ’, ‘ಎಬಿಸಿಡಿ 2’, ‘ಟೈಗರ್ 3’, ‘ಸ್ಟ್ರೀಟ್ ಡ್ಯಾನ್ಸರ್ 3ಡಿ’, ‘ಫ್ಲೈಯಿಂಗ್ ಜಟ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಬಿ ಹ್ಯಾಪಿ’ ಹೆಸರಿನ ಸಿನಿಮಾವನ್ನು ಇದೀಗ ನಿರ್ದೇಶಿಸುತ್ತಿದ್ದು ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಕೆಲ ಸಿನಿಮಾಗಳ ನಿರ್ಮಾಣವನ್ನೂ ಸಹ ರೆಮೊ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ