AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್​​ಗೋಸ್ಕರ ಪ್ರಮುಖ ನಿರ್ಧಾರ ತೆಗೆದುಕೊಂಡ ಪಾಪರಾಜಿಗಳು

ಸಲ್ಮಾನ್‌ಗೆ ಬಂದಿರುವ ಬೆದರಿಕೆಗಳ ಗಂಭೀರತೆಯನ್ನು ಪರಿಗಣಿಸಿ ಪಾಪರಾಜಿಗಳು ಅವರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಪರಿಸ್ಥಿತಿ ಶಾಂತವಾಗುವವರೆಗೆ ಅಥವಾ ಸಲ್ಮಾನ್ ಮೇಲಿನ ಬಿಕ್ಕಟ್ಟು ಬಗೆಹರಿಯುವವರೆಗೆ ಸಲ್ಮಾನ್ ಅವರ ಯಾವುದೇ ಫೋಟೋನ ತೆಗೆದುಕೊಳ್ಳಬಾರದು ಎಂದು ನಿರ್ಧರಿಸಿದ್ದಾರೆ.

ಸಲ್ಮಾನ್ ಖಾನ್​​ಗೋಸ್ಕರ ಪ್ರಮುಖ ನಿರ್ಧಾರ ತೆಗೆದುಕೊಂಡ ಪಾಪರಾಜಿಗಳು
ಸಲ್ಮಾನ್​ ಖಾನ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 20, 2024 | 6:52 AM

Share

ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ಧಿಕಿ ಹತ್ಯೆಯ ನಂತರ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ನಿರಂತರ ಬೆದರಿಕೆಯಿಂದಾಗಿ ಸಲ್ಮಾನ್ ಖಾನ್​ಗೆ ಮುಂಬೈ ಪೊಲೀಸರು ವೈ ಪ್ಲಸ್ ಭದ್ರತೆಯನ್ನು ನೀಡಿದ್ದಾರೆ. ಈಗ ಪಾಪರಾಜಿಗಳು ಅಲರ್ಟ್ ಮೋಡ್‌ನಲ್ಲಿದ್ದಾರೆ. ಕೆಲವು ವರದಿಗಳ ಪ್ರಕಾರ ಅವರು ಸಲ್ಮಾನ್ ಖಾನ್ ಬಗ್ಗೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿ ಆಗಿದೆ.

ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಸಾಕಷ್ಟು ಹೆಸರು ಮಾಡಿದ್ದಾರೆ. ಪ್ರಮುಖ ಸೂಪರ್‌ಸ್ಟಾರ್‌ಗಳಲ್ಲಿ ಅವರ ಹೆಸರೂ ಪ್ರಮುಖವಾಗಿದೆ. ಪಾಪರಾಜಿಗಳಿಗೆ ನೆಚ್ಚಿನ ವಿಷಯವಾಗಿದೆ. ಸಲ್ಮಾನ್ ಅವರ ಫೋಟೋಗಳು, ಮುಂಬರುವ ಸಿನಿಮಾಗಳು, ಶೂಟಿಂಗ್ ಮಾತ್ರವಲ್ಲದೆ ಸಮುದ್ರತೀರದಲ್ಲಿ ಅವರ ವಾಕ್, ಏರ್​ಪೋರ್ಟ್ ಲುಕ್ ಸೇರಿ ಪಾಪರಾಜಿಗಳು ಅವರ ಚಲನವಲನಗಳ ಮೇಲೆ ಕಣ್ಣಿಡುತ್ತಾರೆ. ಸಲ್ಮಾನ್‌ನ ಪ್ರತಿಯೊಂದು ವಿಚಾರಗಳ ಕುರಿತು ಅವರ ಅಭಿಮಾನಿಗಳಿಗೆ ತಿಳಿಸುತ್ತಾರೆ. ಆದರೆ ಸದ್ಯ ಸಲ್ಮಾನ್ ಭದ್ರತೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರಿಂದ ಹಿಡಿದು ಸಲ್ಮಾನ್​ನ ಅಂಗರಕ್ಷಕರವರೆಗೆ ಎಲ್ಲರೂ ಅವರನ್ನು ಸುರಕ್ಷತೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಸಲ್ಮಾನ್‌ಗೆ ಬಂದಿರುವ ಬೆದರಿಕೆಗಳ ಗಂಭೀರತೆಯನ್ನು ಪರಿಗಣಿಸಿ ಪಾಪರಾಜಿಗಳು ಅವರ ಸುರಕ್ಷತೆಗಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಪರಿಸ್ಥಿತಿ ಶಾಂತವಾಗುವವರೆಗೆ ಅಥವಾ ಸಲ್ಮಾನ್ ಮೇಲಿನ ಬಿಕ್ಕಟ್ಟು ಬಗೆಹರಿಯುವವರೆಗೆ ಸಲ್ಮಾನ್ ಅವರ ಯಾವುದೇ ಫೋಟೋನ ತೆಗೆದುಕೊಳ್ಳಬಾರದು. ಅಲ್ಲದೆ ಅವರ ಯಾವುದೇ ಕ್ಷಣಗಳನ್ನು ಶೂಟ್ ಮಾಡದಿರಲು ನಿರ್ಧರಿಸಿದ್ದಾರೆ. ಅವರ ಬಗ್ಗೆ ಯಾವುದೇ ಮಾಹಿತಿ ಹೊರ ಬರಬಾರದು ಎಂದು ಪಾಪರಾಜಿಗಳು ನಿರ್ಧರಿಸಿದ್ದಾರೆ.

ಸಲ್ಮಾನ್ ಇತ್ತೀಚೆಗೆ ಮುಂಬೈ ಫಿಲ್ಮ್‌ಸಿಟಿಯಲ್ಲಿರುವ ಹಿಂದಿ ಬಿಗ್ ಬಾಸ್ 18ರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶೂಟಿಂಗ್ ಮುಗಿಯುವವರೆಗೂ ಸೆಟ್‌ನಲ್ಲಿದ್ದ ಯಾರಿಗೂ ಹೊರಹೋಗಲು ಅವಕಾಶವಿಲ್ಲ ಮತ್ತು ಅಪರಿಚಿತರನ್ನು ಸೆಟ್‌ಗೆ ಬಿಡಲಿಲ್ಲ. ಸಲ್ಮಾನ್ ಖಾನ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಇದನ್ನು ಗಮನಿಸಿ, ಪಾಪರಾಜಿಗಳು ಸಲ್ಮಾನ್ ಅವರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದರಿಂದ ದೂರವಿದ್ದಾರೆ.

ಪಾಪರಾಜಿಗಳು ಸಲ್ಮಾನ್ ಖಾನ್ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಸುರಕ್ಷತೆ ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸದ್ಯದ ಉದ್ವಿಗ್ನ ವಾತಾವರಣಕ್ಕೆ ಸೇರ್ಪಡೆಯಾಗದಿರಲು ಪಾಪರಾಜಿಗಳು ಸಲ್ಮಾನ್ ಅವರ ನವೀಕರಣಗಳನ್ನು ಪಡೆಯಲು ಮತ್ತು ಅಭಿಮಾನಿಗಳಿಗೆ ತಲುಪಿಸಲು ತಮ್ಮನ್ನು ತಾವು ಸಂಯಮ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭಾರಿ ಮೊತ್ತಕ್ಕೆ ಮನೆ ಮಾರಾಟ ಮಾಡಿದ ಸಲ್ಮಾನ್ ಖಾನ್ ಸಹೋದರಿ 

ಪಾಪರಾಜಿಯ ನಿರ್ಧಾರವೇ ಸಲ್ಮಾನ್ ಪ್ರೀತಿ

ಪಾಪರಾಜಿಗಳು ಈಗ ಸಲ್ಮಾನ್ ಅವರ ಫೋಟೋಗಳಿಗಿಂತ ಅವರ ಸುರಕ್ಷತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ಪಾಪರಾಜಿಗಳ ನಿರ್ಧಾರವು ಅವರ ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ಮತ್ತು ಸಲ್ಮಾನ್ ಸುರಕ್ಷತೆಯ ಬಗ್ಗೆ ಅವರಿಗಿರುವ ಗೌರವವನ್ನು ತೋರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.