ಟಬು, ಕರೀನಾ ಕಪೂರ್ ಖಾನ್, ಕೃತಿ ಸನೋನ್ (Kriti Sanon) ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಕ್ರೂ’ (Crew) ಸಿನಿಮಾಗೆ ಉತ್ತಮವಾಗಿ ಕಮಾಯಿ ಆಗುತ್ತಿದೆ. ಮಾರ್ಚ್ 29ರಂದು ಈ ಚಿತ್ರ ಬಿಡುಗಡೆ ಆಯಿತು. ಮೊದಲ ದಿನವೇ ಒಳ್ಳೆಯ ಓಪನಿಂಗ್ ಪಡೆದುಕೊಂಡಿತು. ಪ್ರೇಕ್ಷಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಅದರ ಪರಿಣಾಮವಾಗಿ ‘ಕ್ರೂ’ ಸಿನಿಮಾದ ಕಲೆಕ್ಷನ್ (Crew Movie Collection) ಈಗ 50 ಕೋಟಿ ರೂಪಾಯಿ ಸನಿಹದಲ್ಲಿದೆ. ಐದು ದಿನಕ್ಕೆ ಈ ಸಿನಿಮಾದ ಒಟ್ಟು ಗಳಿಕೆ 41.12 ಕೋಟಿ ರೂಪಾಯಿ ಆಗಿದೆ. ಇದರಿಂದ ಕೃತಿ ಸನೋನ್, ಟಬು ಹಾಗೂ ಕರೀನಾ ಕಪೂರ್ ಖಾನ್ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಮೊದಲ ದಿನ (ಮಾರ್ಚ್ 29) ‘ಕ್ರೂ’ ಸಿನಿಮಾ 10.28 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಎರಡನೇ ದಿನವಾದ ಶನಿವಾರ (ಮಾ.30) ಈ ಚಿತ್ರಕ್ಕೆ 10.87 ಕೋಟಿ ರೂಪಾಯಿ ಆದಾಯ ಹರಿದುಬಂತು. ಮೂರನೇ ದಿನ ಭಾನುವಾರ ಆದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ನೋಡಿದ್ದು, 11.45 ಕೋಟಿ ರೂಪಾಯಿ ಗಳಿಕೆ ಆಯಿತು. ಸಹಜವಾಗಿಯೇ ಸೋಮವಾರ (ಏಪ್ರಿಲ್ 1) ಕಲೆಕ್ಷನ್ ಕುಸಿದಿದ್ದು, 4.52 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಮಂಗಳವಾರ (ಏಪ್ರಿಲ್ 2) ನಾಲ್ಕು ಕೋಟಿ ರೂಪಾಯಿ ಸಂಗ್ರಹ ಆಗಿದೆ.
ಇದನ್ನೂ ಓದಿ: ‘ಕ್ರೂ’ ಸಿನಿಮಾದಿಂದ ಗೆದ್ದು ಬೀಗಿದ ಬಾಲಿವುಡ್ ನಟಿ ಕೃತಿ ಸನೋನ್
ಒಟ್ಟು 5 ದಿನಗಳಲ್ಲಿ ‘ಕ್ರೂ’ ಸಿನಿಮಾ ಭಾರತದ ಮಾರುಕಟ್ಟೆಯಲ್ಲಿ 41.12 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ 77.33 ಕೋಟಿ ರೂಪಾಯಿ ಆಗಲಿದೆ. ವಿದೇಶದ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ವೀಕೆಂಡ್ನಲ್ಲಿ ಕೂಡ ‘ಕ್ರೂ’ ಸಿನಿಮಾದ ಕಲೆಕ್ಷನ್ ಹೆಚ್ಚುವ ನಿರೀಕ್ಷೆ ಇದೆ. ಯಾಕೆಂದರೆ, ಈ ವಾರ (ಏಪ್ರಿಲ್ 5) ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಅದರಿಂದ ‘ಕ್ರೂ’ ಸಿನಿಮಾಗೆ ಅನುಕೂಲ ಆಗಲಿದೆ.
#Crew is eyeing ₹ 47 cr [or thereabouts] in *Week 1*, an EXCELLENT number… The absence of noteworthy film/s this Friday gives it an open ground to post another solid weekend.
The #Eid releases are arriving mid-week [Wednesday] this time, hence the biz of #Crew, Wednesday… pic.twitter.com/bYFrDCx76l
— taran adarsh (@taran_adarsh) April 3, 2024
ಗಗನ ಸಖಿಯರ ಕಥೆಯನ್ನು ‘ಕ್ರೂ’ ಸಿನಿಮಾ ಹೊಂದಿದೆ. ಕರೀನಾ ಕಪೂರ್ ಖಾನ್, ಟಬು ಹಾಗೂ ಕೃತಿ ಸನೋನ್ ಅವರು ಗಗನ ಸಖಿಯರಾಗಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ಕೃಷ್ಣನ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏಕ್ತಾ ಕಪೂರ್, ರಿಯಾ ಕಪೂರ್, ಅನಿಲ್ ಕಪೂರ್, ದಿಗ್ವಿಜಯ್ ಪುರೋಹಿತ್ ಅವರು ನಿರ್ಮಾಣ ಮಾಡಿದ್ದಾರೆ. ದಿಲ್ಜಿತ್ ದೋಸಾಂಜ್, ಕಪಿಲ್ ಶರ್ಮಾ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.