ದೀಪಿಕಾ-ರಣವೀರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದವರಿಗೆಲ್ಲ ಬಿತ್ತು ಬಲವಾದ ಏಟು

Deepika Padukone Pregnancy: ದೀಪಿಕಾ-ರಣವೀರ್ ಸಂಸಾರ ಸರಿ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಈ ಎಲ್ಲಾ ಊಹಾಪೋಹಗಳಿಗೆ ಉತ್ತರ ನೀಡುವಂತೆ ದಂಪತಿಗಳು ತಮ್ಮ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಘೋಷಿಸಿದ್ದಾರೆ. ಸೆಲೆಬ್ರಿಟಿಗಳ ಜೀವನವನ್ನು ಕೇವಲ ಬಾಹ್ಯ ಸಂಗತಿಗಳಿಂದ ನಿರ್ಧರಿಸಬಾರದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ದೀಪಿಕಾ-ರಣವೀರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದವರಿಗೆಲ್ಲ ಬಿತ್ತು ಬಲವಾದ ಏಟು
ರಣವೀರ್​-ದೀಪಿಕಾ

Updated on: Apr 20, 2026 | 7:00 AM

‘ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಂಸಾರ ಸರಿ ಇಲ್ಲ’-ಹೀಗೊಂದು ವಿಷಯ ಇತ್ತೀಚೆಗೆ ಬಲವಾಗಿ ಚರ್ಚೆ ಆಗಿತ್ತು. ಇದಕ್ಕೆ ಕಾರಣವೂ ಇದೆ. ರಣವೀರ್ ಸಿಂಗ್ ಅವರು ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲಿದರೂ ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಖುಷಿ ಹೊರಹಾಕಿರಲಿಲ್ಲ. ಇದು ಚರ್ಚೆಗೆ ಕಾರಣ ಆಗಿತ್ತು. ರಣವೀರ್-ದೀಪಿಕಾ ದೂರ ಆಗುತ್ತಾರೆ ಎಂದೆಲ್ಲ ಮಾತನಾಡಿಕೊಂಡಿದ್ದೇ ಬಂತು. ಆದರೆ, ಹಾಗಾಗಲೇ ಇಲ್ಲ. ದೀಪಿಕಾ (Deepika Padukone) ಎರಡನೇ ಬಾರಿಗೆ ತಾಯಿ ಆಗುತ್ತಿರುವುದಾಗಿ ಘೋಷಿಸಿದ್ದಾರೆ. ಇವರ ಸಂಬಂಧ ಸರಿ ಇಲ್ಲ ಎಂದವರಿಗೆಲ್ಲ ಭಾರೀ ಮುಖಭಂಗ ಆಗಿದೆ.

ದೀಪಿಕಾ ಎಡಪಂಕ್ತೀಯ ಸಿದ್ಧಾಂತಗಳನ್ನು ನಂಬುತ್ತಾರೆ. ಅದಕ್ಕೆ ಈ ಮೊದಲು ಅವರು ಜೆಎನ್​ಯು ಯುನಿವರ್ಸಿಟಿಗೆ ತೆರಳಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಬೆಂಬಲ ಕೊಟ್ಟಿದ್ದರು. ರಣವೀರ್ ಸಿಂಗ್ ಅವರು ಇತ್ತೀಚೆಗೆ ಆರ್​​ಎಸ್​ಎಸ್ ಕಚೇರಿಗೆ ತೆರಳಿದ್ದರು. ಈ ಘಟನೆಯಿಂದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಅವರ ಸಿದ್ಧಾಂತ ಬೇರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ. ಆದರೆ, ಇದು ಅವರ ಸಂಸಾರದ ಮೇಲೆ ಯಾವುದೇ ಪರಿಣಾಮ ಬಿರಿಲ್ಲ.

ದೀಪಿಕಾ ಹಾಗೂ ರಣವೀರ್ ಅವರನ್ನು ಇಷ್ಟಪಡದ ಕೆಲವರು ಇತ್ತೀಚೆಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ‘ರಣವೀರ್-ದೀಪಿಕಾ ಸಿದ್ಧಾಂತ, ಆಲೋಚನೆಗಳು ಹೊಂದಿಕೆ ಆಗುತ್ತಿಲ್ಲ. ಇವರು ಬೇರೆ ಆಗುತ್ತಾರೆ’ ಎಂದೆಲ್ಲ ಕೆಲವರು ವದಂತಿ ಹಬ್ಬಿಸಿದ್ದು ಇದೆ. ಆದರೆ, ಇದು ಸುಳ್ಳು ಎಂಬುದು ಈಗ ಸ್ಪಷ್ಟವಾಗಿದೆ. ಈ ರೀತಿಯ ಸುದ್ದಿ ಹಬ್ಬಿಸಿದವರಿಗೆ ದೀಪಿಕಾ ದೊಡ್ಡ ಏಟು ಕೊಟ್ಟಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಎಲ್ಲಾ ವಿಷಯವನ್ನೂ ಹೇಳಿಕೊಳ್ಳುವುದಿಲ್ಲ. ಹಾಗಂದ ಮಾತ್ರಕ್ಕೆ ಅವರ ಜೀವನ ಸರಿ ಇಲ್ಲ ಎಂದು ನಿರ್ಧರಿಸಬಾರದು. ರಣವೀರ್-ದೀಪಿಕಾ ಪ್ರಕರಣ ಇದಕ್ಕೆ ಒಳ್ಳೆಯ ಉದಾಹರಣೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್

ದೀಪಿಕಾ ಹಾಗೂ ರಣವೀರ್ ಅವರು ಭಾನುವಾರ ಪ್ರೆಗ್ನೆನ್ಸಿ ಘೋಷಣೆ ಮಾಡಿದರು. ಮಗಳು ದುವಾ ಬಳಿ ಪ್ರೆಗ್ನೆನ್ಸಿ ಕಿಟ್ ಹಿಡಿಸಿ ಈ ವಿಷಯ ಅಭಿಮಾನಿಗಳಿಗೆ ತಿಳಿಸಿದರು.  ಈಗ ದೀಪಿಕಾ ಎರಡನೇ ಬಾರಿಗೆ ತಾಯಿ ಆಗುತ್ತಿದ್ದು ಎಲ್ಲರೂ ಶುಭ ಕೋರುತ್ತಿದ್ದಾರೆ. ಅವರು ಮೊದಲು ಒಪ್ಪಿಕೊಂಡ ಸಿನಿಮಾ ಕೆಲಸ ಪೂರ್ಣಗೊಳಿಸಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us