‘ಮರಿ, ನಿಮಗಿಂತ ಮೊದಲೇ ನಾನು ಧುರಂಧರ್ 2 ನೋಡಿದೀನಿ’; ದೀಪಿಕಾ ಖಡಕ್ ತಿರುಗೇಟು

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಸಾವಿರಾರು ಕೋಟಿ ಗಳಿಸಿ ಭಾರಿ ಯಶಸ್ಸು ಕಂಡರೂ, ಪತ್ನಿ ದೀಪಿಕಾ ಪಡುಕೋಣೆ ಮೌನ ತಾಳಿದ್ದು ಚರ್ಚೆಗೆ ಕಾರಣವಾಗಿತ್ತು. ಅವರ ರಾಜಕೀಯ ನಿಲುವನ್ನು ಸಹ ಇದಕ್ಕೆ ಜೋಡಿಸಲಾಗಿತ್ತು. ಕೊನೆಗೂ ಈ ಬಗ್ಗೆ ಮಾತನಾಡಿರುವ ದೀಪಿಕಾ, ಸಿನಿಮಾ ನೋಡದವರ ಟೀಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಮರಿ, ನಿಮಗಿಂತ ಮೊದಲೇ ನಾನು ಧುರಂಧರ್ 2 ನೋಡಿದೀನಿ’; ದೀಪಿಕಾ ಖಡಕ್ ತಿರುಗೇಟು
ದೀಪಿಕಾ-ರಣವೀರ್

Updated on: Apr 08, 2026 | 11:31 AM

ಬಾಲಿವುಡ್ ಸಿನಿಮಾ ‘ಧುರಂಧರ್ 2’ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ಭಾರತದಲ್ಲೇ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ. ಈ ಚಿತ್ರವನ್ನು ಕ್ರಿಕೆಟರ್​​ಗಳು, ರಾಜಕೀಯ ನಾಯಕರು ಸೇರಿದಂತೆ ಅನೇಕರು ಹಾಡಿ ಹೊಗಳಿದ್ದಾರೆ. ಆದರೆ, ಕಥಾ ನಾಯಕ ರಣವೀರ್ ಸಿಂಗ್ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಮಾತ್ರ ಈ ವಿಷಯದಲ್ಲಿ ಮೌನ ವಹಿಸಿದ್ದರು. ಈ ಬಗ್ಗೆ ಚರ್ಚೆ ಶುರುವಾಗಿತ್ತು. ಇದಕ್ಕೆ ದೀಪಿಕಾ ಉತ್ತರ ನೀಡಿದ್ದಾರೆ.

ಇನ್​​ಸ್ಟಾಗ್ರಾಮ್ ಒಂದರಲ್ಲಿ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನ ಮಾರ್ಚ್ 23ರಂದು ಪೋಸ್ಟ್ ಮಾಡಲಾಗಿದೆ. ಅಂದರೆ, ‘ಧುರಂಧರ್ 2’ ರಿಲೀಸ್ ಆದ ಕೇವಲ ನಾಲ್ಕು ದಿನಕ್ಕೆ ಈ ವಿಡಿಯೋ ಅಪ್​​ಲೋಡ್ ಮಾಡಲಾಗಿದೆ. ಇದರಲ್ಲಿ ದೀಪಿಕಾ ‘ಧುರಂಧರ್ 2’ ಸಿನಿಮಾ ನೋಡಿಲ್ಲ ಎಂದು ಟೀಕಿಸಲಾಗಿತ್ತು.

ಇದಕ್ಕೆ ದೀಪಿಕಾ ಪಡುಕೋಣೆ ಕಮೆಂಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ. ‘ನೀವೆಲ್ಲರೂ ಸಿನಿಮಾ ನೋಡುವುದಕ್ಕೂ ಮೊದಲೇ ನಾನು ‘ಧುರಂಧರ್ 2’ ಚಿತ್ರವನ್ನು ನೋಡಿದ್ದೇನೆ. ನನ್ನನ್ನು ಮೂರ್ಖತನ ತೋರಿಸಲು ಬಂದು, ನಿಮ್ಮ ಮೂರ್ಖತನ ಬಯಲಾಗಿದೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

‘ಧುರಂಧರ್ 2’ ಚಿತ್ರವನ್ನು ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಸಿನಿಮಾ ನೋಡುವವರೆಲ್ಲರೂ ಈಗಾಗಲೇ ಚಿತ್ರವನ್ನು ನೋಡಿಯಾಗಿದೆ. ಆದರೂ ದೀಪಿಕಾ ಮಾತ್ರ ಈ ವಿಷಯದಲ್ಲಿ ಸೈಲೆಂಟ್ ಆಗಿರುವುದು ಏಕೆ ಎಂಬುದು ಅನೇಕರ ಪ್ರಶ್ನೆ ಆಗಿತ್ತು. ಈಗ ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಸಿನಿಮಾ ನೋಡದೇ ಇರಬಹುದು ಎಂಬುದನ್ನು ನಾನಾ ರೀತಿಯಲ್ಲಿ ಬಿಂಬಿಸಲಾಯಿತು. ದೀಪಿಕಾ ಪಡುಕೋಣೆ ಅವರು 2020ರಲ್ಲಿ ಜೆಡಿಯು ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದರು. ಅವರನ್ನು ಎಡಪಂಕ್ತಿಯರ ಸಾಲಿನಲ್ಲಿ ಗುರುತಿಸಲಾಯಿತು. ‘ಧುರಂಧರ್ 2’ ಸಿನಿಮಾಗಳು ಬಲ ಪಂಥೀಯ ತತ್ವಗಳನ್ನು ಹೊಂದಿವೆ. ಈ ಕಾರಣದಿಂದ ದೀಪಿಕಾ ಮೌನ ತಾಳಿರಬಹುದು ಎನ್ನಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us