ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲ ಹೀರೋಯಿನ್ಗಳಿಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ಇನ್ನೂ ಕೆಲ ಹೀರೋಯಿನ್ಗಳು ಬಾಡಿ ಶೇಮಿಂಗ್ ಎದುರಿಸಿರುತ್ತಾರೆ. ಸಿನಿಮಾ ರಂಗದಲ್ಲಿ ಉನ್ನತ ಹಂತಕ್ಕೆ ಹೋದ ನಂತರದಲ್ಲಿ ಆ ಬಗ್ಗೆ ಅವರು ಮೌನ ಮುರಿದಿದ್ದಾರೆ. ಸದ್ಯ ಚಿತ್ರರಂಗದಲ್ಲಿರುವ ಖ್ಯಾತ ನಟಿಯರಿಗೆ ಇದೇ ಅನುಭವ ಆಗಿದೆ. ದೇಹದ ಕೆಲ ಭಾಗಕ್ಕೆ ಸರ್ಜರಿ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಈ ರೀತಿ ಕಹಿ ಅನುಭವಕ್ಕೆ ಒಳಗಾದ ನಟಿಯರ ಬಗ್ಗೆ ಇಲ್ಲಿದೆ ವಿವರ. ಅಚ್ಚರಿಯ ವಿಚಾರ ಎಂದರೆ ಪ್ರಿಯಾಂಕಾ ಚೋಪ್ರಾ (Priyanka Chopra) , ದೀಪಿಕಾ ಪಡುಕೋಣೆ ಅಂತಹ ಸ್ಟಾರ್ ನಟಿಯರ ಹೆಸರೂ ಇದರಲ್ಲಿದೆ.
ದೀಪಿಕಾ ಪಡುಕೋಣೆ: ನಟಿ ದೀಪಿಕಾ ಪಡುಕೋಣೆ ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರಿಗೆ ಎದೆ ಭಾಗದಲ್ಲಿ ಸರ್ಜರಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿತ್ತು. 18ನೇ ವಯಸ್ಸಿಗೆ ದೀಪಿಕಾ ಪಡುಕೋಣೆಗೆ ಎದೆ ಭಾಗದಲ್ಲಿ ಸರ್ಜರಿ ಮಾಡುವಂತೆ ಸೂಚಿಸಲಾಗಿತ್ತು.
ಯಾಮಿ ಗೌತಮ್: ‘ಚೋರ್ ನಿಕಲ್ ಕೆ ಭಾಗ’ ಸಿನಿಮಾ ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ನಟಿಸಿದ್ದು ಯಾಮಿ ಗೌತಮ್. ಅವರ ಮೂಗು ಸರಿ ಇಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಅಷ್ಟೇ ಅಲ್ಲ ಮೂಗಿನ ಸರ್ಜರಿ ಮಾಡಿಸಿಕೊಳ್ಳಲು ಕೆಲವರು ಸೂಚಿಸಿದ್ದರು. ಆದರೆ, ಇದಕ್ಕೆ ಅವರು ಒಪ್ಪಿಲ್ಲ.
ಜಾಕ್ವೆಲಿನ್ ಫರ್ನಾಂಡಿಸ್: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೂ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ, ಇದಕ್ಕೆ ಅವರು ಒಪ್ಪಿಲ್ಲ. ಸದ್ಯ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಂಕಷ್ಟದಲ್ಲಿದ್ದಾರೆ. ಸುಕೇಶ್ ಚಂದ್ರಶೇಖರ್ ಮಾಡಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅವರ ಹೆಸರೂ ಇದೆ.
ಇದನ್ನೂ ಓದಿ: ‘ನನಗೆ ವೈಯಕ್ತಿಕವಾಗಿ ಇರೋದೇ ಓರ್ವ ಫೋಟೋಗ್ರಾಫರ್’; ಹೆಸರು ರಿವೀಲ್ ಮಾಡಿದ ರಾಧಿಕಾ ಪಂಡಿತ್
ರಾಧಿಕಾ ಆಪ್ಟೆ: ರಾಧಿಕಾ ಆಪ್ಟೆ ಮೂಗಿನ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕೆಲವರು ಅವರಿಗೆ ಹೇಳಿದ್ದರು. ಇದರ ಜೊತೆಗೆ ಎದೆ ಭಾಗ ದೊಡ್ಡದಾಗಿ ಕಾಣುವಂತೆ ಮಾಡಲು ಸರ್ಜರಿ ಮಾಡಿಸಿಕೊಳ್ಳಿ ಎನ್ನುವ ಸಜೇಶನ್ ಕೂಡ ಅವರಿಗೆ ಇಡಲಾಗಿದೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ರೀತಿ ಬ್ಯಾಕ್ಲೆಸ್ ಆಗಿ ನಟಿಸ್ತಾರಾ ಸಮಂತಾ ರುತ್ ಪ್ರಭು?
ಪ್ರಿಯಾಂಕಾ ಚೋಪ್ರಾ: ಪ್ರಿಯಾಂಕಾ ಚೋಪ್ರಾ ಈಗ ಸ್ಟಾರ್ ನಟಿ. ಹಾಲಿವುಡ್ನಲ್ಲಿ ಅವರು ಛಾಪು ಮೂಡಿಸಿದ್ದಾರೆ. ಆದರೆ, ಮೊದಲು ಈ ರೀತಿ ಇರಲಿಲ್ಲ. ಅವರು ಕಪ್ಪಗಿದ್ದಾರೆ ಎಂದು ಅನೇಕರು ಟೀಕೆ ಮಾಡಿದ್ದರು. ಬಳಿಕ ಸ್ತನಕ್ಕೆ ಸರ್ಜರಿ ಮಾಡಿಸಿಕೊಳ್ಳಲು ಅವರಿಗೆ ಸೂಚಿಸಲಾಗಿತ್ತು. ಇದರ ಜೊತೆ ದವಡೆ ಭಾಗಕ್ಕೂ ಸರ್ಜರಿ ಮಾಡಿಸಿಕೊಳ್ಳಿ ಎಂದು ಕೆಲವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ