ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ತಿರುಮಲ ದೇವಸ್ಥಾನಕ್ಕೆ (Venkateswara Swami temple) ಭೇಟಿ ನೀಡಿದ್ದಾರೆ. ಡಿಸೆಂಬರ್ 14ರಂದು ಅವರು ತಿರುಪತಿಗೆ ಆಗಮಿಸಿದ್ದರು. ಶುಕ್ರವಾರ (ಡಿಸೆಂಬರ್ 15) ಮುಂಜಾನೆ ಸಹೋದರಿ ಅನಿಶಾ ಪಡುಕೋಣೆ ಜೊತೆ ಸೇರಿ ಅವರು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದ ಅವರ ವಿಡಿಯೋ ವೈರಲ್ ಆಗಿದೆ. 2023ರ ವರ್ಷ ದೀಪಿಕಾ ಪಡುಕೋಣೆ ಅವರ ಪಾಲಿಗೆ ಆಶಾದಾಯಕ ಆಗಿತ್ತು. ವರ್ಷಾಂತ್ಯದಲ್ಲಿ ಅವರು ದೇವರ ದರ್ಶನಕ್ಕೆ ಬಂದಿದ್ದಾರೆ.
ದೇವಾಲಯ ತಲುಪಲು ದೀಪಿಕಾ ಪಡುಕೋಣೆ ಅವರು ಎರಡೂವರೆ ಗಂಟೆಗಳ ಕಾಲ ಜನರ ಜೊತೆ ನಡೆದುಬಂದಿದ್ದಾರೆ. ಅವರ ಜೊತೆ ಸಹೋದರಿ ಅನಿಶಾ ಪಡುಕೋಣೆ ಕೂಡ ಇದ್ದರು. ವಿಐಪಿ ಪಾಸ್ ಮೂಲಕ ಅವರು ದೇವರ ದರ್ಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಈಗ ‘ಫೈಟರ್’ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ. ಅದಕ್ಕೂ ಮುನ್ನ ಅವರು ದೇವರ ಮೊರೆ ಹೋಗಿದ್ದಾರೆ.
#WATCH | Andhra Pradesh: Actor Deepika Padukone offered prayers at Tirupati Balaji Temple today. pic.twitter.com/dhdd0JHUjV
— ANI (@ANI) December 15, 2023
ದಿನದಿಂದ ದಿನಕ್ಕೆ ದೀಪಿಕಾ ಪಡುಕೋಣೆ ಅವರ ಖ್ಯಾತಿ ಹೆಚ್ಚುತ್ತಿದೆ. ಹಲವು ವರ್ಷಗಳಿಂದ ಅವರು ಬಾಲಿವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಪಠಾಣ್’ ಮತ್ತು ‘ಜವಾನ್’ ಸಿನಿಮಾದಿಂದ ಅವರು ಈ ವರ್ಷ ಭರ್ಜರಿ ಗೆಲುವು ಕಂಡಿದ್ದಾರೆ. ಹೃತಿಕ್ ರೋಷನ್ ಜೊತೆ ‘ಫೈಟರ್’ ಸಿನಿಮಾದಲ್ಲಿ ನಟಿಸಿದ್ದು, 2024ರ ಜನವರಿ 25ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.
ಇದನ್ನೂ ಓದಿ: ‘ಫೈಟರ್’ ಮಾತ್ರವಲ್ಲ ಈ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ..
‘ಫೈಟರ್’ ಸಿನಿಮಾಗೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಯುದ್ಧ ವಿಮಾನಗಳ ಸಾಹಸ ದೃಶ್ಯಗಳು ಈ ಸಿನಿಮಾದಲ್ಲಿ ಹೈಲೈಟ್ ಆಗಲಿವೆ. ಇತ್ತೀಚೆಗೆ ಇದರ ಟೀಸರ್ ಬಿಡುಗಡೆ ಆಯಿತು. ಇದರಲ್ಲಿ ಆ್ಯಕ್ಷನ್ ಅಬ್ಬರ ಕಾಣಿಸಿದೆ. ಜೊತೆಗೆ, ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಕೆಲವು ಬೋಲ್ಡ್ ದೃಶ್ಯಗಳು ಕೂಡ ಸಿನಿಪ್ರಿಯರ ಕಣ್ಣು ಕುಕ್ಕಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.