ಮದುವೆಗೂ ಮುನ್ನ ಬುರ್ಕಾ ಧರಿಸುತ್ತಿದ್ದ ದೀಪಿಕಾ; ಯಾರಿಗೂ ತಿಳಿದಿರದ ರಹಸ್ಯ ಈಗ ಬಯಲಾಯ್ತು

| Updated By: ಮದನ್​ ಕುಮಾರ್​

Updated on: Nov 19, 2021 | 8:49 AM

Deepika Padukone: ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ 2018ರ ನವೆಂಬರ್​ನಲ್ಲಿ ಮದುವೆ ಆಗುತ್ತಾರೆ ಎಂಬ ಸುದ್ದಿ ಹಲವು ತಿಂಗಳು ಮುನ್ನವೇ ಹಬ್ಬಿತ್ತು. ಮಾಧ್ಯಮಗಳ ಕಣ್ಣು ತಪ್ಪಿಸಿ ಮದುವೆ ತಯಾರಿ ಮಾಡುವುದು ಅವರಿಗೆ ನಿಜಕ್ಕೂ ಕಷ್ಟ ಆಗಿತ್ತು.

ಮದುವೆಗೂ ಮುನ್ನ ಬುರ್ಕಾ ಧರಿಸುತ್ತಿದ್ದ ದೀಪಿಕಾ; ಯಾರಿಗೂ ತಿಳಿದಿರದ ರಹಸ್ಯ ಈಗ ಬಯಲಾಯ್ತು
ದೀಪಿಕಾ ಪಡುಕೋಣೆ
Follow us on

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್​ನಲ್ಲಿ ಸಖತ್​ ಬ್ಯುಸಿ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಕಾರಣಗಳಿಗಾಗಿಯೂ ಅವರು ಆಗಾಗ ಸುದ್ದಿ ಆಗುತ್ತಾರೆ. ರಣವೀರ್​ ಸಿಂಗ್​ (Ranveer Singh) ಜೊತೆ ಅವರು ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿ 3ನೇ ವರ್ಷದ ವೆಡ್ಡಿಂಗ್​ ಆ್ಯನಿವರ್ಸರಿ ಆಚರಿಸಿಕೊಂಡಿತು. 2018ರ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರು ಪರಸ್ಪರ ಯಾವುದೇ ಕಿರಿಕ್​ ಇಲ್ಲದೇ ಜೀವನ ಸಾಗಿಸುತ್ತಿದ್ದಾರೆ. ವಿವಾಹ ವಾರ್ಷಿಕೋತ್ಸವದ ಹೊತ್ತಿನಲ್ಲಿ ರಣವೀರ್​ ಸಿಂಗ್​ ಕೆಲವು ಅಪರೂಪದ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚು ಗಮನ ಸೆಳೆಯುತ್ತಿರುವ ಬೇರೊಂದು ವಿಚಾರ ಇದೆ. ಮದುವೆಗೂ ಮುನ್ನ ದೀಪಿಕಾ ಪಡುಕೋಣೆ ಅವರು ಬುರ್ಕಾ (Burqa) ಧರಿಸಿ ತಿರುಗಾಡಿದ್ದರು ಎಂಬುದು ಈಗ ಬಯಲಾಗಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಮದುವೆ ಆಗುತ್ತಾರೆ ಎಂಬ ಸುದ್ದಿ ಹಲವು ತಿಂಗಳು ಮುನ್ನವೇ ಹಬ್ಬಿತ್ತು. ಮಾಧ್ಯಮಗಳ ಕಣ್ಣು ತಪ್ಪಿಸಿ ಮದುವೆ ತಯಾರಿ ಮಾಡುವುದು ನಿಜಕ್ಕೂ ಕಷ್ಟ ಆಗಿತ್ತು. ಅದರಲ್ಲೂ ಮದುವೆ ದಿನದ ಡ್ರೆಸ್​ ಹೇಗಿರಬೇಕು ಎಂಬುದಕ್ಕೆ ಈ ಜೋಡಿ ಸಖತ್​ ತಲೆ ಕೆಡಿಸಿಕೊಂಡಿತ್ತು. ಸೆಲೆಬ್ರಿಟಿ ಡಿಸೈನರ್​ ಸಬ್ಯಸಾಚಿ ಅವರು ಈ ಜೋಡಿಯ ಮದುವೆ ಕಾಸ್ಟ್ಯೂಮ್​ ವಿನ್ಯಾಸಗೊಳಿಸಿದ್ದರು. ಆ ವೇಳೆ ಬುರ್ಕಾ ಧರಿಸುವುದು ದೀಪಿಕಾ ಪಡುಕೋಣೆ ಅವರಿಗೆ ಅನಿವಾರ್ಯ ಆಗಿತ್ತು.

ದೀಪಿಕಾ ಅವರ ಮದುವೆ ತಯಾರಿಯ ಸುದ್ದಿಯನ್ನು ಸೀಕ್ರೆಟ್​ ಆಗಿಡುವುದು ಸಬ್ಯಸಾಚಿ ಅವರ ಮುಖ್ಯ ಉದ್ದೇಶ ಆಗಿತ್ತು. ಮದುವೆ ಡ್ರೆಸ್​ ಟ್ರಯಲ್​ ನೋಡಲು ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ದೀಪಿಕಾ ತಮ್ಮ ಬಳಿಗೆ ಬರುವುದು ಸಬ್ಯಸಾಚಿಗೆ ಇಷ್ಟ ಇರಲಿಲ್ಲ. ಹಾಗಾಗಿ ಬುರ್ಕಾ ಧರಿಸಿ ಬರುವಂತೆ ಅವರೇ ಸಲಹೆ ನೀಡಿದ್ದರು. ಅದನ್ನು ಯಥಾವತ್ತಾಗಿ ದೀಪಿಕಾ ಪಡುಕೋಣೆ ಪಾಲಿಸಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಬ್ಯಸಾಚಿ ಅವರು ಈ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ.

ಸಿನಿಮಾಗಳ ಆಯ್ಕೆಯಲ್ಲಿ ದೀಪಿಕಾ ಪಡುಕೋಣೆ ಈಗ ಸಖತ್​ ಚ್ಯೂಸಿ ಆಗಿದ್ದಾರೆ. ರಣವೀರ್ ಸಿಂಗ್​ ಜೊತೆ ಅವರು ನಟಿಸಿರುವ ‘83’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕ ಪದೇಪದೇ ಮುಂದೂಡಲ್ಪಡುತ್ತಲೇ ಇದೆ. ಡಿ.24ರಂದು ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಈ ಚಿತ್ರ ತೆರೆಕಾಣಲಿದೆ. 1983ರಲ್ಲಿ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಗೆದ್ದ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ನಟಿಸಿದ್ದಾರೆ.

ಇದನ್ನೂ ಓದಿ:

ದೀಪಿಕಾ ಪಡುಕೋಣೆ, ರಣಬೀರ್​ ಕಪೂರ್​ಗೆ ಸಿಕ್ಕ ಮೊದಲ ಸಂಬಳ ಎಷ್ಟು?​ ಖರೀದಿಸಿದ್ದು ಏನು?

ದೀಪಿಕಾರನ್ನು ಕಾಪಿ ಮಾಡಿ ಸಿಕ್ಕಿ ಬಿದ್ರಾ ರಶ್ಮಿಕಾ ಮಂದಣ್ಣ? ಸೈಮಾದಲ್ಲಿ ಕಣ್ಣು ಕುಕ್ಕಿದ ಗೌನ್​