
‘ಧುರಂಧರ್’ ಚಿತ್ರದ ಮೊದಲ ಭಾಗವು ಡಿಸೆಂಬರ್ 2025ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನಂತರ, ಅದನ್ನು OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಮಾಡಲಾಯಿತು. ಈಗ ಈ ಚಿತ್ರದ ಮುಂದುವರಿದ ಭಾಗವು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗುವುದಿಲ್ಲ. ಬದಲಾಗಿ ಮತ್ತೊಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಚಿತ್ರವು ಜಿಯೋ ಹಾಟ್ಸ್ಟಾರ್ನಲ್ಲಿ ಸ್ಟ್ರೀಮ್ ಆಗಲಿದೆ. ಈ ಮುಂದುವರಿದ ಭಾಗದ ಡಿಜಿಟಲ್ ಹಕ್ಕುಗಳು 150 ಕೋಟಿ ರೂ.ಗಳಿಗೆ ಮಾರಾಟವಾಗಿವೆ. ಇದನ್ನು, ಇದುವರೆಗಿನ ಅತಿದೊಡ್ಡ ಒಪ್ಪಂದವೆಂದು ಪರಿಗಣಿಸಲಾಗುತ್ತಿದೆ.
‘ಧುರಂಧರ್ 2’ ಚಿತ್ರದ ಒಟಿಟಿ ಬಿಡುಗಡೆಗೆ ಇನ್ನೂ ಅಧಿಕೃತ ದಿನಾಂಕವಿಲ್ಲ . ಆದರೆ ಇಂಡಸ್ಟ್ರಿ ಟ್ರೆಂಡ್ಸ್ ಮತ್ತು ಪಿಂಕ್ವಿಲ್ಲಾ, ಇಂಡಿಯಾ ಟುಡೇ ವರದಿಗಳ ಪ್ರಕಾರ, ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ 45 ರಿಂದ 60 ದಿನಗಳಲ್ಲಿ ಒಟಿಟಿನಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆಯಿದೆ. ಇದರರ್ಥ ರಣವೀರ್ ಅವರ ಚಿತ್ರವು ಜೂನ್ ಎರಡನೇ ವಾರದ ವೇಳೆಗೆ ಪ್ರಸಾರ ಕಾಣಬಹುದು.
ಇದನ್ನೂ ಓದಿ: ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ
ಈ ಚಿತ್ರದ ಪೇಯ್ಡ್ ಪ್ರಿವ್ಯೂಗೂ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಹಲವು ನಗರಗಳ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿದ್ದವು. ಪೇಯ್ಡ್ ಪ್ರಿವ್ಯೂ ನಿಂದಲೇ ‘ಧುರಂಧರ್ 2’ ಚಿತ್ರ 43 ಕೋಟಿ ರೂಪಾಯಿಗಳ ಬಂಪರ್ ಕಲೆಕ್ಷನ್ ಗಳಿಸಿದೆ. ಮೊದಲ ದಿನದ ಕಲೆಕ್ಷನ್ 100 ಕೋಟಿ ರೂಪಾಯಿಗಳನ್ನು ದಾಟಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ರಾಕೇಶ್ ಬೇಡಿ, ಸಾರಾ ಅರ್ಜುನ್ ನಟಿಸಿದ್ದಾರೆ.
‘ಧುರಂಧರ್ 2 ಸಿನಿಮಾ ಎಲ್ಲಾ ಕಡೆಗಳಿಂದ ಉತ್ತಮ ವಿಮರ್ಶೆ ಪಡೆದಿದೆ. ಈ ಚಿತ್ರ ಅನೇಕ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವುದು ಚಿತ್ರದ ಹೆಚ್ಚುಗಾರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.