ಪಾಕಿಸ್ತಾನದಲ್ಲಿ ‘ಧುರಂಧರ್ 2’ ಚಿತ್ರಕ್ಕೆ ಹೆಚ್ಚಿದ ಬೇಡಿಕೆ; ಮುಗಿಬಿದ್ದು ನೋಡ್ತಿರೋ ಜನ

ಭಾರತ ಮತ್ತು ಪಾಕಿಸ್ತಾನದ ನಡುವೆ ಚಲನಚಿತ್ರಗಳ ಪ್ರದರ್ಶನಕ್ಕೆ ನಿಷೇಧವಿದೆ. ಆದರೂ ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳನ್ನು ಗುಟ್ಟಾಗಿ ನೋಡಲಾಗುತ್ತದೆ. ಇತ್ತೀಚೆಗೆ 'ಧುರಂಧರ್ 2' ಚಿತ್ರದ ಪೈರಸಿ ಕಾಪಿಯನ್ನು ಪಾಕಿಸ್ತಾನಿ ರಿಪೋರ್ಟರ್ ಒಬ್ಬರು ವೀಕ್ಷಿಸಿ ವೈರಲ್ ವಿಡಿಯೋ ಹಂಚಿಕೊಂಡಿದ್ದಾರೆ. ಇದು ನಿಷೇಧದ ನಡುವೆಯೂ ಭಾರತೀಯ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿರುವ ದೊಡ್ಡ ಅಭಿಮಾನಿ ಬಳಗವನ್ನು ಎತ್ತಿ ತೋರಿಸುತ್ತದೆ.

ಪಾಕಿಸ್ತಾನದಲ್ಲಿ ‘ಧುರಂಧರ್ 2’ ಚಿತ್ರಕ್ಕೆ ಹೆಚ್ಚಿದ ಬೇಡಿಕೆ; ಮುಗಿಬಿದ್ದು ನೋಡ್ತಿರೋ ಜನ
Dhurandhar 2

Updated on: Mar 21, 2026 | 3:05 PM

ಭಾರತದ ಸಿನಿಮಾಗಳು ಪಾಕಿಸ್ತಾನದಲ್ಲಿ, ಪಾಕಿಸ್ತಾನದ ಸಿನಿಮಾಗಳು ಭಾರತದಲ್ಲಿ ರಿಲೀಸ್ ಆಗೋದಿಲ್ಲ. ಇದನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಆದಾಗ್ಯೂ ಭಾರತದ ಕೆಲವು ಸಿನಿಮಾಗಳನ್ನು ಪಾಕಿಸ್ತಾನದಲ್ಲಿ ಕದ್ದು ನೋಡಲಾಗುತ್ತದೆ. ‘ಧುರಂಧರ್’ ಸಿನಿಮಾ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು! ಅಲ್ಲಿನ ಜನರು ಪೈರಸಿ ಕಾಪಿಯನ್ನು ನೋಡಿದ್ದರು. ಈಗ ‘ಧುರಂಧರ್ 2’ ಚಿತ್ರದ ಪೈರಸಿ ಕಾಪಿಯನ್ನು ಪಾಕಿಸ್ತಾನದಲ್ಲಿ ನೋಡಲಾಗುತ್ತಿದೆ.

ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಭಾರತದ ಸಾಕಷ್ಟು ಸಿನಿಮಾಗಳನ್ನು ಅವರು ಪಾಕಿಸ್ತಾನದಲ್ಲಿ ನೋಡುತ್ತಾರೆ. ಪಾಕಿಸ್ತಾನಿ ರಿಪೋರ್ಟರ್ ಈಗ ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅದು ಕೂಡ ಪೈರಸಿ ಕಾಪಿಯನ್ನು. ಟಿವಿಯಲ್ಲಿ ‘ಧುರಂಧರ್ 2’ ಸಿನಿಮಾ ನೋಡಿದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ.

ಖಲೀದ್ ಮೆಹಮೂದ್ ಎಂಬ ವ್ಯಕ್ತಿ ವಿಡಿಯೀ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ‘ಧುರಂಧರ್ 2’ ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಆರಂಭದ ವಿಡಿಯೋನ ಅವರು ಹಂಚಿಕೊಂಡಿದ್ದಾರೆ. ‘ಧುರಂಧರ್ 2 ಚಿತ್ರವನ್ನು ಲಾಹೋರ್​ನಲ್ಲಿ ನೋಡುತ್ತಿದ್ದೇನೆ’ ಎಂದಿದ್ದಾರೆ. ಅವರ ಬಯೋದಲ್ಲಿ ಪಾಕಿಸ್ತಾದ ಸುದ್ದಿ ಪತ್ರಿಕೆಯಲ್ಲಿ ಪತ್ರಕರ್ತ ಎಂದು ಬರೆದುಕೊಂಡಿದ್ದಾರೆ.

ಈ ಸಂದರ್ಭದ ಪೋಸ್ಟ್ ವೈರಲ್ ಆಗಿದೆ. ‘ಟಿವಿ ಸ್ಕ್ರಿನ್ ಅಲ್ಲಿ ಕ್ರ್ಯಾಕ್ ಕಾಣಿಸುತ್ತಿದೆ. ಟಿ20 ವಿಶ್ವಕಪ್ ಫಿನಾಲೆ ನೋಡಿದ್ರಾ’ ಎಂದು ಕೇಳಿದ್ದಾರೆ ಕೆಲವರು. ‘ಸಿನಿಮಾ ಎಷ್ಟು ಅದ್ಭುತವಾಗಿದೆ ಎಂದರೆ ಪಾಕಿಸ್ತಾನದವರೂ ಎಂಜಾಯ್ ಮಾಡುತ್ತಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ‘ಪಾಕಿಸ್ತಾನದಲ್ಲಿ ಭಾರತ ಸ್ಪೈ’ ಎಂದು ಕೆಲವರು ಬರೆದಿದ್ದಾರೆ.

ಇದನ್ನೂ ಓದಿ: ‘ಇಂತಹ ಸಿನಿಮಾ ಮಾಡಲು ಧೈರ್ಯ ಬೇಕು’; ‘ಧುರಂಧರ್ 2’ ಹಾಡಿ ಹೊಗಳಿದ ರಾಜಮೌಳಿ

‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಧುರಂಧರ್  ಚಿತ್ರವನ್ನು ಆದಿತ್ಯಧಾರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us