‘ಧುರಂಧರ್’ ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಮೊದಲು ಹೋಗಿದ್ದು ದಕ್ಷಿಣದ ಈ ಸ್ಟಾರ್ ನಟನಿಗೆ

ಧುರಂಧರ್ ಮತ್ತು ಧುರಂಧರ್ 2 ಸಿನಿಮಾಗಳು ಎಲ್ಲಾ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಗೆದ್ದಿವೆ. ಅದರಲ್ಲೂ ಅಕ್ಷಯ್ ಖನ್ನಾ ಅವರ ರೆಹಮಾನ್ ಡಕಾಯಿತ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಈ ಪಾತ್ರವನ್ನು ಮೊದಲು ಮೂವರು ಖ್ಯಾತ ನಟರು ರಿಜೆಕ್ಟ್ ಮಾಡಿದ್ದ ಸಂಗತಿ ಈಗ ಬಹಿರಂಗವಾಗಿದೆ. ಕಾಸ್ಟಿಂಗ್ ಡೈರೆಕ್ಟರ್ ಮುಕೇಶ್ ಛಬ್ರಾ ಈ ವಿಷಯವನ್ನು ತಿಳಿಸಿದ್ದರು.

‘ಧುರಂಧರ್’ ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಮೊದಲು ಹೋಗಿದ್ದು ದಕ್ಷಿಣದ ಈ ಸ್ಟಾರ್ ನಟನಿಗೆ
ಅಕ್ಷಯ್ ಖನ್ನಾ

Updated on: Apr 04, 2026 | 9:08 AM

‘ಧುರಂದರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು (Dhurandhar 2 Movie) ಗಮನ ಸೆಳೆದಿವೆ. ಈ ಸಿನಿಮಾದ ಎಲ್ಲಾ ಪಾತ್ರಗಳು ಮೆಚ್ಚುಗೆ ಪಡೆದಿವೆ. ಸಾಮಾನ್ಯವಾಗಿ ಬಿಗ್ ಬಜೆಟ್ ಸಿನಿಮಾಗಳಲ್ಲಿ ಹೀರೋ, ಹೀರೋಯಿನ್, ವಿಲನ್ ಪಾತ್ರ ಮಾತ್ರ ಹೈಲೈಟ್ ಆಗುತ್ತದೆ. ಆದರೆ, ‘ಧುರಂಧರ್’ ಸಿನಿಮಾಗಳಲ್ಲಿ ಆ ರೀತಿ ಆಗಿಲ್ಲ. ಎಲ್ಲಾ ಪಾತ್ರಕ್ಕೂ ಸರಿಯಾದ ತೂಕ ಇದೆ. ಈ ಸಿನಿಮಾದಲ್ಲಿ ಬಂದಿದ್ದ ರೆಹಮಾನ್ ಡಕಾಯಿತ್ ಪಾತ್ರ ಜನ ಮೆಚ್ಚುಗೆ ಪಡೆದಿದೆ. ಈ ಪಾತ್ರವನ್ನು ಮೊದಲು ಮೂವರಿಗೆ ನೀಡಲಾಗಿತ್ತಂತೆ. ಆ ಮೂವರು ರಿಜೆಕ್ಟ್ ಮಾಡಿದ್ದರು ಎಂಬ ವಿಷಯ ರಿವೀಲ್ ಆಗಿದೆ.

‘ಧುರಂಧರ್’ ಸಿನಿಮಾದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಮುಕೇಶ್ ಛಬ್ರಾ ಕೆಲಸ ಮಾಡಿದ್ದಾರೆ. ಅವರು ಎಲ್ಲಾ ಪಾತ್ರಗಳಿಗೂ ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ರೆಹಮಾನ್ ಡಕಾಯಿತ್ ಪಾತ್ರದಲ್ಲಿ ಅಕ್ಷಯ್ ಮಿಂಚಿದ್ದಾರೆ ನಿಜ. ಆದರೆ, ಈ ಮೊದಲು ಮೂವರಿಗೆ ಈ ಆಫರ್ ಹೋಗಿತ್ತು.
‘ಮೂವರಿಗೆ ರೆಹಮಾನ್ ಡಕಾಯಿತ್ ಆಫರ್ ನೀಡಲಾಗಿತ್ತು. ಇದರಲ್ಲಿ ಇಬ್ಬರು ಬಾಲಿವುಡ್​​ನವರು. ಒಬ್ಬರು ದಕ್ಷಿಣದವರು. ಆದರೆ, ಅವರೆಲ್ಲರೂ ರಿಜೆಕ್ಟ್ ಮಾಡಿದ ಬಳಿಕ ಅಕ್ಷಯ್ ಖನ್ನಾ ಬಳಿ ಹೋಯಿತು. ಸದ್ಯ ಅವರು ಯಾರು ಎಂಬ ವಿಷಯವನ್ನು ರಿವೀಲ್ ಮಾಡಿಲ್ಲ. ಕೆಲವು ವರದಿಗಳ ಪ್ರಕಾರ ಅಕ್ಕಿನೇನಿ ನಾಗಾರ್ಜುನ ಇರಬಹುದು ಎಂದು ಕೆಲವರು ಊಹಿಸಿದ್ದಾರೆ.

ಇನ್ನು, ಪಾತ್ರವನ್ನು ರಿಜೆಕ್ಟ್ ಮಾಡಲು ಈ ಮೂವರು ಕಲಾವಿದರು ನೀಡಿದ ಕಾರಣವನ್ನು ಮುಕೇಶ್ ರಿವೀಲ್ ಮಾಡಿದ್ದಾರೆ. ‘ಇದರಲ್ಲಿ ಹೆಚ್ಚು ಪಾತ್ರಗಳು ಇವೆ. ಅಲ್ಲದೆ, ಇದು ರಣವೀರ್ ಸಿಂಗ್ ಸಿನಿಮಾ’ ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

ರಣವೀರ್ ಸಿಂಗ್ ಅವರು ‘ಧುರಂಧರ್’ ಸಿನಿಮಾ ಅದ್ಭುತ ವಿಮರ್ಶೆ ಪಡೆದರು. ಈ ಸಿನಿಮಾ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದೆ. ಈಗ ರಿಲೀಸ್ ಆಗಿರುವ ‘ಧುರಂಧರ್ 2’ ಕೂಡ ಅಬ್ಬರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us