ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಆರು ದೇಶಗಳಲ್ಲಿ ಬ್ಯಾನ್

ರಣವೀರ್ ಸಿಂಗ್ ಅವರ 'ಧುರಂಧರ್' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದರೂ, ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಭಾರತ-ಪಾಕ್ ಬೇಹುಗಾರಿಕೆ ಆಧಾರಿತ ಈ ಚಿತ್ರಕ್ಕೆ ಪಾಕಿಸ್ತಾನ ವಿರೋಧಿ ಅಂಶಗಳ ಕಾರಣ 6 ದೇಶಗಳು ನಿಷೇಧ ಹೇರಿವೆ. ಈ ಸವಾಲಿನ ನಡುವೆಯೂ ಚಿತ್ರ ಜಾಗತಿಕವಾಗಿ 300 ಕೋಟಿ ರೂ. ಗಳಿಸಿ ಯಶಸ್ಸು ಕಂಡಿದೆ.

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಆರು ದೇಶಗಳಲ್ಲಿ ಬ್ಯಾನ್
ಧುರಂಧರ್
Updated By: ರಾಜೇಶ್ ದುಗ್ಗುಮನೆ

Updated on: Dec 12, 2025 | 8:05 AM

ರಣವೀರ್ ಸಿಂಗ್ ಅವರ ಧುರಂಧರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಚಿತ್ರದ ಕಥೆ ಭಾರತ-ಪಾಕಿಸ್ತಾನ ಬೇಹುಗಾರಿಕೆ ಮೇಲೆ ಆಧರಿಸಿದೆ. ಈ ಚಿತ್ರ ಚೆನ್ನಾಗಿ ಗಳಿಕೆ ಮಾಡುತ್ತಿದ್ದರೂ ಒಂದು ಶಾಕಿಂಗ್ ಸುದ್ದಿ ಹೊರ ಬಂದಿದೆ. ಈ ಸಿನಿಮಾಗೆ ಬ್ಯಾನ್ ಬಿಸಿ ತಟ್ಟಿದೆ. ಒಂದಲ್ಲ, ಎರಡಲ್ಲ ಆರು ದೇಶಗಳು ಚಿತ್ರಕ್ಕೆ ಬ್ಯಾನ್ ಹೇರಿವೆ.

ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಮಾಧವನ್ ಅವರು ‘ಧುರಂಧರ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿದೆ. ಚಿತ್ರದ ಹಾಡುಗಳು ಮತ್ತು ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಧುರಂಧರ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಕ್ಕಾಗಿಯೇ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದೆ.

ಧುರಂಧರ್ ಚಿತ್ರ ಸುದ್ದಿಯಲ್ಲಿರುವಾಗಲೇ, ಕೆಲವು ಕೆಟ್ಟ ಸುದ್ದಿಗಳೂ ಇವೆ. ಈ ಚಿತ್ರವನ್ನು 6 ದೇಶಗಳಲ್ಲಿ ನಿಷೇಧಿಸಲಾಗಿದೆ. ಇದರರ್ಥ ಈ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗುವುದಿಲ್ಲ. ಪ್ರೇಕ್ಷಕರು ಅಲ್ಲಿನ ಚಿತ್ರಮಂದಿರಗಳಿಗೆ ಹೋಗಿ ಈ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬ್ಯಾನ್ ಹೇರಿದ ದೇಶಗಳು. ಪಾಕಿಸ್ತಾನ ವಿರೋಧಿ ಅಂಶ ಇರುವುದರಿಂದ ಸಿನಿಮಾಗೆ ಬ್ಯಾನ್ ಬಿದ್ದಿದೆ. ಈ ಮೊದಲು ‘ಸ್ಕೈ ಫೋರ್ಸ್’, ‘ಫೈಟರ್’, ‘ಆರ್ಟಿಕಲ್ 370’, ‘ಟೈಗರ್ 3’ ಚಿತ್ರಗಳು ಈ ದೇಶದಲ್ಲಿ ಬ್ಯಾನ್ ಆಗಿದ್ದವು. ಧುರಂಧರ್ ತಂಡವು ತಮ್ಮ ಕೈಲಾದಷ್ಟು ಪ್ರಯತ್ನಿಸಿತು. ಆದರೆ ಅದು ಸಾಧ್ಯವಾಗಿಲ್ಲ. ಸೆನ್ಸಾರ್ ಮಂಡಳಿ ಇದಕ್ಕೆ ಒಪ್ಪಿಗೆ ಕೊಟ್ಟಿಲ್ಲ.

ಡಿಸೆಂಬರ್ 5 ರಂದು ಚಿತ್ರ ಬಿಡುಗಡೆಯಾಯಿತು. ಅಂದಿನಿಂದ, ಈ ಚಿತ್ರವು ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿ, ಭಾರತದಲ್ಲಿ 200 ಕೋಟಿ ರೂಪಾಯಿ ಗಳಿಸಿದೆ. ಈ ವೀಕೆಂಡ್​ನಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡಬಹುದು.

ಇದನ್ನೂ ಓದಿ: ರಾ ಏಜೆಂಟ್​ ಆಗಲಿರುವ ರಣವೀರ್​ ಸಿಂಗ್​ಗೆ ಸಂಜಯ್​ ದತ್​ ವಿಲನ್; ಇದು ‘ಕೆಜಿಎಫ್​ 2’ ಎಫೆಕ್ಟ್​

ರಣವೀರ್​ ಸಿಂಗ್ ಅವರು ಹಲವು ವರ್ಷಗಳ ಬಳಿಕ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದೆ. ವಿವಾದಗಳ ಹೊರತಾಗಿಯೂ ಸಿನಿಮಾ ಗೆಲುವು ಕಂಡಿದೆ. ಈಗ ಬ್ಯಾನ್ ಕೂಡ ಸಿನಿಮಾ ಕಲೆಕ್ಷನ್ ಮೇಲೆ ಹೆಚ್ಚು ಪ್ರಭಾವ ಬೀರದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.