‘ಬಿಗ್ ಬಾಸ್ ಹಿಂದಿ ಸೀಸನ್ 18’ ಇತ್ತೀಚೆಗೆ ಪೂರ್ಣಗೊಂಡಿದೆ. ಕರಣ್ ವೀರ್ ಮೆಹ್ರಾ ಅವರು ಶೋನ ಗೆದ್ದಿದ್ದಾರೆ. ಈ ಎಪಿಸೋಡ್ನಲ್ಲಿ ಅಕ್ಷಯ್ ಕುಮಾರ್ ಕೂಡ ಇರಬೇಕಿತ್ತು. ಆದರೆ, ಸಲ್ಮಾನ್ ಖಾನ್ ತಡವಾಗಿ ಬಂದರು ಎಂಬ ಕಾರಣಕ್ಕೆ ಅವರು ಅಲ್ಲಿಂದ ತೆರಳಿದರು. ಸಲ್ಮಾನ್ ಖಾನ್ ಮೇಲೆ ಅಕ್ಷಯ್ಗೆ ಕೋಪ ಬಂದಿದೆ ಎಂದೆಲ್ಲ ಹೇಳಲಾಗಿತ್ತು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.
ಅಕ್ಷಯ್ ಕುಮಾರ್ ಅವರು ಮುಂಬರುವ ‘ಸ್ಕೈ ಫೋರ್ಸ್’ ಚಿತ್ರವನ್ನು ಪ್ರಚಾರ ಮಾಡಬೇಕಿತ್ತು. ಆದರೆ, ಸಲ್ಮಾನ್ ಖಾನ್ ಅವರು ಶೂಟ್ಗೆ ಸಾಕಷ್ಟು ತಡವಾಗಿ ಬಂದರು. ಆದರೆ, ಅಕ್ಷಯ್ಗೆ ಅಷ್ಟೆಲ್ಲ ಕಾಯುವ ತಾಳ್ಮೆ ಇರಲೇ ಇಲ್ಲ. ಹೀಗಾಗಿ, ಅಕ್ಷಯ್ ಅಲ್ಲಿಂದ ತೆರಳೇ ಬಿಟ್ಟರು. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ಅಷ್ಟೊಂದು ತಡವೇನು ಆಗಿರಲಲಿಲ್ಲ. ಅವರಿಗೆ ಕೆಲವು ವೈಯಕ್ತಿಕ ಕೆಲಸಗಳು ಇದ್ದವು. ಹೀಗಾಗಿ, ಸ್ವಲ್ಪ ತಡವಾಗುತ್ತದೆ ಎಂದು ತಿಳಿಸಿದರು. 35-40 ನಿಮಿಷ ತಡವಾಗುತ್ತದೆ ಎಂಬ ಮಾಹಿತಿ ನನನಗೆ ಬಂತು. ಹೀಗಾಗಿ, ನಾನು ತೆರಳಬೇಕಾಯಿತು. ನಾನು ಸಲ್ಮಾನ್ ಜೊತೆ ಈ ಬಗ್ಗೆ ಮಾತನಾಡಿದೆ ಮತ್ತು ಅಲ್ಲಿಂದ ತೆರಳಿದೆ. ನನ್ನ ಸಹ ನಟ ವೀರ್ ಅವರು ಅಲ್ಲಿಯೇ ಇದ್ದರು’ ಎಂದಿದ್ದಾರೆ ಅಕ್ಷಯ್ ಕುಮಾರ್.
ಅಕ್ಷಯ್ ಅವರು ಸಮಯಪಾಲನೆ ಮಾಡುತ್ತಾರೆ. ಈ ಕಾರಣದಿಂದಲೇ ಅವರು ಅಷ್ಟೊಂದು ಖ್ಯಾತಿಯನ್ನು ಹೊಂದಿದ್ದಾರೆ. ಆದರೆ ಸಲ್ಮಾನ್ ಹಾಗಲ್ಲ. ಅವರು ಸಮಯ ಪಾಲನೆ ಮಾಡಿದ್ದು ತುಂಬಾನೇ ಕಡಿಮೆ ಎನ್ನಲಾಗಿದೆ. ಈ ಕಾರಣಕ್ಕೆ ಅಕ್ಷಯ್ ಕಾಯಲಾಗದೆ ತೆರಳಿಯೇ ಬಿಟ್ಟಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು?
ಈ ಮೊದಲು ಸಿನಿಮಾ ನಿರ್ಮಾಪಕ ಅನೀಸ್ ಬಾಜ್ಮೀ ಅವರು ಸಂದರ್ಶನವೊಂದರಲ್ಲಿ ಈ ಬಗ್ಗೆ ಹೇಳಿದ್ದರು. ‘ಅಕ್ಷಯ್ ಬಹಳ ಸಮಯ ಪ್ರಜ್ಞೆಯ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವುದು ನಿಜಕ್ಕೂ ಚಾಲೆಂಜ್. ಬೆಳಿಗ್ಗೆ 7 ಗಂಟೆ ಎಂದರೆ ಅವರು ಆ ಸಮಯಕ್ಕೆ ರೆಡಿ ಇರುತ್ತಾರೆ. ನಮಗೆ ಅಷ್ಟು ಬೇಗ ಎದ್ದು ಅಭ್ಯಾಸ ಇಲ್ಲ. ನಾವು ಸಲ್ಮಾನ್ ಜೊತೆ ತುಂಬಾ ಆರಾಮವಾಗಿರುತ್ತೇವೆ. ಅವರು 1 ಗಂಟೆಗೆ ಬರುತ್ತಾರೆ. ಆ ಬಳಿಕ ಊಟ ಮಾಡುತ್ತಾರೆ. ನಂತರ ಅವರು ದಿನದ ಅಂತ್ಯದವರೆಗೆ ಇರುತ್ತಾರೆ’ ಎಂದಿದ್ದಾರೆ ಅವರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ