ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ದಿಲೀಪ್​ ಕುಮಾರ್​ ಪತ್ನಿ ಸೈರಾ ಬಾನು

| Updated By: ರಾಜೇಶ್ ದುಗ್ಗುಮನೆ

Updated on: Sep 06, 2021 | 2:50 PM

ಸೈರಾ ಹಾಗೂ ದಿಲೀಪ್​ ಒಟ್ಟು 54 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿ ಆಗಿದೆ. ದಿಲೀಪ್​ ಮೃತಪಟ್ಟ ನಂತರದಲ್ಲಿ ಸೈರಾ ಆರೋಗ್ಯದಲ್ಲಿ ಏರುಪೇರಾಗಿತ್ತು.

ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ದಿಲೀಪ್​ ಕುಮಾರ್​ ಪತ್ನಿ ಸೈರಾ ಬಾನು
ದಿಲೀಪ್​ ಕುಮಾರ್​-ಸೈರಾ ಬಾನು
Follow us on

ಕೆಲ ತಿಂಗಳ ಹಿಂದೆ ನಟ ದಿಲೀಪ್​ ಕುಮಾರ್ ಮೃತಪಟ್ಟಿದ್ದರು. ಈ ಬೆನ್ನಲ್ಲೇ ಅವರ​ ಪತ್ನಿ ಸೈರಾ ಬಾನು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ ವಾರ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ಸೈರಾ ಹಾಗೂ ದಿಲೀಪ್​ ಒಟ್ಟು 54 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿ ಆಗಿದೆ. ದಿಲೀಪ್​ ಮೃತಪಟ್ಟ ನಂತರದಲ್ಲಿ ಸೈರಾ ಆರೋಗ್ಯದಲ್ಲಿ ಏರುಪೇರಾಗಿತ್ತು. ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರುವುದು ಅಭಿಮಾನಿಗಳಿಗೆ ರಿಲೀಫ್​ ನೀಡಿದೆ.

ಬಾಲಿವುಡ್​ನಲ್ಲಿ ದಶಕಗಳ ಕಾಲ ಸ್ಟಾರ್​ ಆಗಿ ಮೆರೆದ ದಿಲೀಪ್​ ಕುಮಾರ್ ಅವರು ಜು.7ರಂದು ನಿಧನರಾದರು. ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರ ಮೂಲ ಹೆಸರು ದಿಲೀಪ್​ ಕುಮಾರ್​ ಅಲ್ಲವೇ ಅಲ್ಲ. ಈಗ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿ 1922ರಲ್ಲಿ ಜನಿಸಿದ ಅವರಿಗೆ ಕುಟುಂಬದವರು ಇಟ್ಟ ಹೆಸರು ಮೊಹಮ್ಮದ್​ ಯೂಸೂಫ್​ ಖಾನ್​. ಆದರೆ ಚಿತ್ರರಂಗಕ್ಕೆ ಬರುವಾಗ ಅವರು ದಿಲೀಪ್​ ಕುಮಾರ್​ ಎಂದು ಹೆಸರು ಬದಲಾಯಿಸಿಕೊಂಡರು. 1944ರಲ್ಲಿ ತೆರೆಕಂಡ ‘ಜ್ವಾರ್​ ಭಾಟ’ ದಿಲೀಪ್​ ನಟನೆಯ ಮೊದಲ ಸಿನಿಮಾ. ಆ ಚಿತ್ರದ ನಿರ್ಮಾಪಕಿ ದೇವಿಕಾ ರಾಣಿ ಅವರೇ ಯೂಸೂಫ್​ ಖಾನ್​ಗೆ ಹೆಸರು ಬದಲಾಯಿಸಿಕೊಳ್ಳುವ ಸಲಹೆ ನೀಡಿದ್ದರು.

ಮೊದಲ ಸಿನಿಮಾ ‘ಜ್ವಾರ್​ ಭಾಟಾ’ದಿಂದ ದಿಲೀಪ್​ ಕುಮಾರ್​ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದಿಲೀಪ್​ ಅಭಿನಯ ಇಷ್ಟವಾಯಿತು. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಶಕದಲ್ಲಿ ದಿಲೀಪ್​ ಕುಮಾರ್​ ಸ್ಟಾರ್​ ಆದರು. ಎರಡನೇ ದಶಕದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚಿದರು. ದೇವದಾಸ್​, ನಯಾ ದೌರ್​, ಮಧುಮತಿ, ಕೊಹಿನೂರ್​, ಮುಘಲ್​-ಏ-ಆಜಮ್​ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ದಿಲೀಪ್​ ಕುಮಾರ್​ ನಟಿಸಿದರು. 1998ರಲ್ಲಿ ತೆರೆಕಂಡ ‘ಖಿಲಾ’ ದಿಲೀಪ್​ ನಟನೆಯ ಕೊನೇ ಸಿನಿಮಾ.

ಇದನ್ನೂ ಓದಿ: Saira Banu: ನಟ ದಿಲೀಪ್ ಕುಮಾರ್ ಪತ್ನಿ ಸೈರಾ ಬಾನು ಆರೋಗ್ಯದಲ್ಲಿ ಚೇತರಿಕೆ; ಐಸಿಯುನಿಂದ ಡಿಸ್ಚಾರ್ಜ್

ನಟ ದಿಲೀಪ್​ ಕುಮಾರ್​ ಪತ್ನಿ ಸೈರಾ ಬಾನು ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ