AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗದಿದ್ರೂ ಗಂಡ-ಹೆಂಡ್ತಿ ಥರ ಪವಿತ್ರವಾಗಿತ್ತು ಆ ಸಂಬಂಧ; ಸಿದ್ದಾರ್ಥ್​-ಶೆಹನಾಜ್​ ಬಗ್ಗೆ ಹೊರಬಿತ್ತು ಸುದ್ದಿ

‘ಶೆಹನಾಜ್ ಗಿಲ್​​ ಮತ್ತು ಸಿದ್ದಾರ್ಥ್​ ಶುಕ್ಲಾ ಸಂಬಂಧವು ಗಂಡ-ಹೆಂಡತಿ ಸಂಬಂಧಕ್ಕಿಂತ ಏನೂ ಕಡಿಮೆ ಆಗಿರಲಿಲ್ಲ. ಅದನ್ನು ಬರೀ ಸ್ನೇಹ ಎನ್ನಲು ಸಾಧ್ಯವಿಲ್ಲ’ ಎಂದು ಬಿಗ್​ ಬಾಸ್​ ಮಾಜಿ ಸ್ಪರ್ಧಿ ಪವಿತ್ರ ಪೂನಿಯಾ ಹೇಳಿದ್ದಾರೆ.

ಮದುವೆ ಆಗದಿದ್ರೂ ಗಂಡ-ಹೆಂಡ್ತಿ ಥರ ಪವಿತ್ರವಾಗಿತ್ತು ಆ ಸಂಬಂಧ; ಸಿದ್ದಾರ್ಥ್​-ಶೆಹನಾಜ್​ ಬಗ್ಗೆ ಹೊರಬಿತ್ತು ಸುದ್ದಿ
ಸಿದ್ದಾರ್ಥ್​ ಶುಕ್ಲಾ, ಶೆಹನಾಜ್​ ಗಿಲ್
TV9 Web
| Edited By: |

Updated on: Sep 06, 2021 | 12:18 PM

Share

ನಟ ಸಿದ್ದಾರ್ಥ್​ ಶುಕ್ಲಾ ಅವರು ಅಕಾಲಿಕ ಮರಣ ಹೊಂದಿರುವುದು ಅಭಿಮಾನಿಗಳಿಗೆ ನಂಬಲಾಗುತ್ತಿಲ್ಲ. ಸೆ.2ರಂದು ಅವರು ಹೃದಯಾಘಾತದಿಂದ ಮೃತಪಟ್ಟರು. ಸಿದ್ದಾರ್ಥ್​ ಜೊತೆ ಆಪ್ತವಾಗಿದ್ದ ಅವರ ಪ್ರೇಯಸಿ ಶೆಹನಾಜ್ ಗಿಲ್​ ಈಗ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಅವರು ದುಃಖದಲ್ಲಿದ್ದಾರೆ. ಸಿದ್ದಾರ್ಥ್​ ಮತ್ತು ಶೆಹನಾಜ್​ ಗಿಲ್​ ಊಹಿಸಲಾಗದಷ್ಟು ತುಂಬ ಆಪ್ತವಾಗಿದ್ದರು ಎಂಬ ವಿಚಾರ ಈಗ ಬಹಿರಂಗ ಆಗಿದೆ. ಆ ಬಗ್ಗೆ ಬಿಗ್​ ಬಾಸ್​ ಮಾಜಿ ಸ್ಪರ್ಧಿ ಪವಿತ್ರ ಪೂನಿಯಾ ಅವರು ಬಾಯಿ ಬಿಟ್ಟಿದ್ದಾರೆ. ಸಿದ್ದಾರ್ಥ್​ ನಿಧನದ ಬಗ್ಗೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬಿಗ್​ ಬಾಸ್​ 14ನೇ ಸೀಸನ್​ನಲ್ಲಿ ಪವಿತ್ರ ಪೂನಿಯಾ ಭಾಗವಹಿಸಿದ್ದರು. ಆ ಸೀಸನ್​ನಲ್ಲಿ ಸಿದ್ದಾರ್ಥ್​ ಅವರು ಸೀನಿಯರ್​ ಆಗಿ ಪಾಲ್ಗೊಂಡಿದ್ದರು. ಸಿದ್ದಾರ್ಥ್​ ಮತ್ತು ಶೆಹನಾಜ್​ ನಡುವಿನ ಆಪ್ತತೆ ಹೇಗಿತ್ತು ಎಂಬುದನ್ನು ಪವಿತ್ರ ಅವರು ಹತ್ತಿರದಿಂದ ಕಂಡಿದ್ದಾರೆ. ‘ಇಂದು ಶೆಹನಾಜ್​ ಅವರನ್ನು ನೋಡಿದರೆ ಜೀವ ನಡುಗುತ್ತದೆ. ಸಿದ್ದಾರ್ಥ್​ ಮತ್ತು ಶೆಹನಾಜ್​ ರೀತಿ ಪ್ರೇಮಿಗಳಾಗಿರಬೇಕು ಅಂತ ಅನೇಕರು ಬಯಸುತ್ತಾರೆ. ಅವರ ಸಂಬಂಧ ಅಷ್ಟು ಚೆನ್ನಾಗಿತ್ತು’ ಎಂದು ಪವಿತ್ರ ಹೇಳಿದ್ದಾರೆ.

‘ಶೆಹನಾಜ್​ ಮತ್ತು ಸಿದ್ದಾರ್ಥ್​ ಸಂಬಂಧವು ಗಂಡ-ಹೆಂಡತಿ ಸಂಬಂಧಕ್ಕಿಂತ ಏನೂ ಕಡಿಮೆ ಆಗಿರಲಿಲ್ಲ. ಅದನ್ನು ಬರೀ ಸ್ನೇಹ ಎನ್ನಲು ಸಾಧ್ಯವಿಲ್ಲ. ಗರ್ಲ್​ಫ್ರೆಂಡ್​-ಭಾಯ್​ಫ್ರೆಂಡ್​ ಸಂಬಂಧ ಎನ್ನಲೂ ಆಗುವುದಿಲ್ಲ. ರೋಮಿಯೋ-ಜೂಲಿಯಟ್​ ರೀತಿ ಶೆಹನಾಜ್​-ಸಿದ್ದಾರ್ಥ್​ ಸಂಬಂಧವನ್ನು ಕೂಡ ಜನರು ಕೊನೆಯವರೆಗೆ ನೆನಪಿಟ್ಟುಕೊಳ್ಳುತ್ತಾರೆ’ ಎಂದು ಪವಿತ್ರ ಹೇಳಿದ್ದಾರೆ.

ಸಿದ್ದಾರ್ಥ್​ ನಿಧನದ ಬಳಿಕ ಅವರ ಕುಟುಂಬದವರಿಗೆ ಸಾಂತ್ವನ ಹೇಳಲು ಕೆಲವರು ಸೆಲೆಬ್ರಿಟಿಗಳು ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಒಂದಷ್ಟು ವಿವರಗಳು ಹೊರಬಂದಿವೆ. ಮೂಲಗಳ ಪ್ರಕಾರ, ಬುಧವಾರ (ಸೆ.1) ರಾತ್ರಿ 9.30ಕ್ಕೆ ಸಿದ್ದಾರ್ಥ್​ ಶುಕ್ಲಾ ಅವರು ಮನೆಗೆ ಬಂದಿದ್ದರು. ಆಗ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಾಯಿ ಮತ್ತು ಗೆಳತಿ ಶೆಹನಾಜ್​ ಗಿಲ್​ ಅವರು ನಿಂಬು ಪಾನಿ ಮತ್ತು ಐಸ್​ ಕ್ರೀಮ್ ನೀಡಿದರು. ಬಳಿಕ ವಿಶ್ರಾಂತಿ ಪಡೆದುಕೊಳ್ಳುವಂತೆ ಹೇಳಿದರು ಎಂಬ ಮಾಹಿತಿ ಕೇಳಿಬಂದಿದೆ.

ಎಷ್ಟು ಸಮಯ ಕಳೆದರೂ ಸಿದ್ದಾರ್ಥ್​ಗೆ ನಿದ್ದೆ ಬರಲಿಲ್ಲ. ಹಾಗಾಗಿ ತಮ್ಮ ಜೊತೆಯೇ ಇರುವಂತೆ ಗೆಳತಿ ಶೆಹನಾಜ್​ಗೆ ಅವರು ಕೇಳಿಕೊಂಡರು. ಮಧ್ಯ ರಾತ್ರಿ 1.30ರ ಸುಮಾರಿಗೆ ಶೆಹನಾಜ್​ ಅವರ ಮಡಿಲ ಮೇಲೆ ಸಿದ್ದಾರ್ಥ್​ ನಿದ್ರಿಸಿದರು. ಬಳಿಕ ಅವರನ್ನು ಪಕ್ಕಕ್ಕೆ ಸರಿಸಿ ಶೆಹನಾಜ್​ ಕೂಡ ಮಲಗಲು ತೆರಳಿದರು. ಬೆಳಗ್ಗೆ 7.30ರ ಸುಮಾರಿಗೆ ಶೆಹನಾಜ್​ಗೆ ಎಚ್ಚರವಾಗಿ ನೋಡಿದಾಗ ಸಿದ್ದಾರ್ಥ್​ ರಾತ್ರಿ ನಿದ್ರಿಸುತ್ತಿದ್ದ ಭಂಗಿಯಲ್ಲೇ ಮಲಗಿದ್ದರು. ಯಾವುದೇ ರೀತಿ ಚಲನೆ ಇಲ್ಲದಿರುವುದು ಗಮನಿಸಿದಾಗ ಅವರು ಮೃತರಾಗಿರುವುದು ತಿಳಿಯಿತು ಎನ್ನಲಾಗಿದೆ. ಆದರೆ ಈ ಬಗ್ಗೆ ಶೆಹನಾಜ್​ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

Sidharth Shukla: ಸಿದ್ದಾರ್ಥ್​ ಶುಕ್ಲಾ ಸಾವಿನ ಸಮಯದ ಬಗ್ಗೆ ಮೂಡಿದೆ ಶಂಕೆ; ಹಿಂದೂಸ್ತಾನಿ ಭಾವು ಹೇಳಿದ ಇನ್ನೊಂದು ಕಥೆ

‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ