ದಿಲ್ಜೀತ್ ಮ್ಯಾಜಿಕ್: ಕೇವಲ 14 ಶೋ, 943 ಕೋಟಿ ಆದಾಯ, 114 ಕೋಟಿ ತೆರಿಗೆ

Diljit Dosanjh concert: ಖ್ಯಾತ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರ 'ದಿಲ್-ಲುಮಿನಾಟಿ' ಹೆಸರಿನ ಲೈವ್ ಕಾನ್ಸರ್ಟ್ ಪ್ರವಾಸ (ಟೂರ್) ಮಾಡಿದ್ದರು. ದೇಶದ 13 ನಗರಗಳಲ್ಲಿ 14 ಶೋಗಳನ್ನು ಅವರು ನೀಡಿದ್ದರು. ಕೆಲವು ವಿದೇಶಿ ಶೋಗಳನ್ನು ಸಹ ನೀಡಿದ್ದರು. ಈ 14 ಶೋಗಳಿಗೆ ಬರೋಬ್ಬರಿ 943 ಕೋಟಿ ರೂಪಾಯಿಗಳ ಆದಾಯವನ್ನು ದಿಲ್ಜೀತ್ ಸೃಷ್ಟಿಸಿದ್ದಾರೆ. 114 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ತೆರಿಗೆಯಾಗಿ ಪಾವತಿ ಆಗಿದೆ.

ದಿಲ್ಜೀತ್ ಮ್ಯಾಜಿಕ್: ಕೇವಲ 14 ಶೋ, 943 ಕೋಟಿ ಆದಾಯ, 114 ಕೋಟಿ ತೆರಿಗೆ
Diljit Dossanjh

Updated on: Mar 20, 2026 | 5:50 PM

ಕೆಲ ತಿಂಗಳುಗಳ ಹಿಂದಷ್ಟೆ ನಟ, ಗಾಯಕ ದಿಲ್ಜೀತ್ ದೊಸ್ಸಾಂಜ್ (Diljit Dosanjh) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಲೈವ್ ಕಾನ್ಸರ್ಟ್​​ಗಳಿಗೆ ಅಗತ್ಯ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಮೋದಿ ಸಹ ತಮ್ಮ ಭಾಷಣವೊಂದರಲ್ಲಿ ಎಲ್ಲ ರಾಜ್ಯಗಳೂ ಲೈವ್ ಕಾನ್ಸರ್ಟ್​​ಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿಕೊಡುವಂತೆ ಮನವಿ ಮಾಡಿದ್ದರು. ಇದೀಗ ಅದರ ಒಳಮರ್ಮ ತಿಳಿದು ಬರುತ್ತಿದೆ. ಗಾಯಕ ದಿಲ್ಜೀತ್ ದೊಸ್ಸಾಂಗ್ ಭಾರತದಲ್ಲೇ ಅತಿ ಹೆಚ್ಚು ಟಿಕೆಟ್ ಸೋಲ್ಡ್ ಮಾಡುವ ಲೈವ್ ಕಾರ್ನರ್ಟ್ ಕಲಾವಿದ ಸಹ ಆಗಿದ್ದು, ಅವರು ಕೇವಲ 14 ಶೋಗಳಿಗೆ ಬರೋಬ್ಬರಿ 943 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಈ 14 ಶೋಗಳನ್ನು ಕೆಲವೇ ತಿಂಗಳುಗಳಲ್ಲಿ ಮುಗಿಸಿದ್ದಾರೆ ದಿಲ್ಜೀತ್ ದೊಸ್ಸಾಂಜ್.

ಖ್ಯಾತ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರ ‘ದಿಲ್-ಲುಮಿನಾಟಿ’ ಹೆಸರಿನ ಲೈವ್ ಕಾನ್ಸರ್ಟ್ ಪ್ರವಾಸ (ಟೂರ್) ಮಾಡಿದ್ದರು. ದೇಶದ 13 ನಗರಗಳಲ್ಲಿ 14 ಶೋಗಳನ್ನು ಅವರು ನೀಡಿದ್ದರು. ಕೆಲವು ವಿದೇಶಿ ಶೋಗಳನ್ನು ಸಹ ನೀಡಿದ್ದರು. ಈ 14 ಶೋಗಳಿಗೆ ಬರೋಬ್ಬರಿ 943 ಕೋಟಿ ರೂಪಾಯಿಗಳ ಆದಾಯವನ್ನು ದಿಲ್ಜೀತ್ ಸೃಷ್ಟಿಸಿದ್ದಾರೆ. ಇದರಿಂದ 114 ಕೋಟಿ ರೂಪಾಯಿ ತೆರಿಗೆ ಸರ್ಕಾರಕ್ಕೆ ಪಾವತಿ ಆಗಿದೆ. ಲೈವ್ ಕಾನ್ಸರ್ಟ್ ಕೇವಲ ಮನರಂಜನೆ ಮಾತ್ರವಲ್ಲ, ದೇಶದ ಆರ್ಥಿಕತೆಯ ಮೇಲೆ ಅಭೂತಪೂರ್ವ ಪ್ರಭಾವ ಬೀರಿದೆ ಎಂಬುದನ್ನು ಈ ಅಂಕಿ-ಸಂಖ್ಯೆ ಸಾರುತ್ತಿದೆ.

ದಿಲ್ಜೀತ್ ದೊಸ್ಸಾಂಗ್ ಅವರಿಂದ ಗಳಿಕೆ ಅಗಿರುವ 943 ಕೋಟಿ ರೂಪಾಯಿಗಳಲ್ಲಿ 276 ಕೋಟಿ ರೂಪಾಯಿ ನೇರ ಆದಾಯ ಅಂದರೆ ಟಿಕೆಟ್ ಮಾರಾಟ, ಪ್ರಾಯೋಜಕತ್ವದಿಂದ ಬಂದರೆ. ಉಳಿದ 553 ಕೋಟಿ ಪರೋಕ್ಷ ಆದಾಯವಾಗಿ ಬಂದಿದೆ. ಈ ಸಂಗೀತ ಕಾರ್ಯಕ್ರಮಗಳ ಸರಣಿಯು ಲೈವ್ ಈವೆಂಟ್ ಮತ್ತು ಇತರ ಪೂರಕ ವಲಯಗಳಲ್ಲಿ ಸುಮಾರು 1.18 ಲಕ್ಷ ಉದ್ಯೋಗವನ್ನು ಸೃಷ್ಟಿಸಿದೆ. ಇದರಲ್ಲಿ ಭದ್ರತೆ, ಲಾಜಿಸ್ಟಿಕ್ಸ್, ಉತ್ಪಾದನೆ, ಫ್ಯಾಷನ್ ಮತ್ತು ಹೋಟೆಲ್ ಉದ್ಯಮದ ಕೆಲಸಗಾರರು ಸಹ ಸೇರಿದ್ದಾರೆ.

ಈ ಲೈವ್ ಕಾನ್ಸರ್ಟ್​​ ಗಾಗಿ ಸುಮಾರು 38% ಪ್ರೇಕ್ಷಕರು ಈ ಕಾರ್ಯಕ್ರಮಕ್ಕಾಗಿ ಬೇರೆ ನಗರಗಳಿಂದ ಪ್ರಯಾಣ ಬೆಳೆಸಿದ್ದರು. ಅವರಲ್ಲಿ ಅರ್ಧದಷ್ಟು ಮಂದಿ ತಮ್ಮ ವಾಸ್ತವ್ಯವನ್ನು 5 ದಿನಗಳವರೆಗೆ ವಿಸ್ತರಿಸಿದ್ದು, ಇದು ಸ್ಥಳೀಯ ಹೋಟೆಲ್, ಸಾರಿಗೆ ಮತ್ತು ಆಹಾರೋದ್ಯಮಕ್ಕೆ ದೊಡ್ಡ ಲಾಭ ತಂದುಕೊಟ್ಟಿದೆ. ಈ ಕಾರ್ಯಕ್ರಮದಿಂದ ಸರ್ಕಾರಕ್ಕೆ ಜಿಎಸ್‌ಟಿ (GST) ಮತ್ತು ಇತರ ತೆರಿಗೆಗಳ ರೂಪದಲ್ಲಿ ಸುಮಾರು 114 ಕೋಟಿ ಆದಾಯ ಬಂದಿದೆ ಎಂದು ಆಡಿಟ್ ಸಂಸ್ಥೆಯಾಗಿರುವ ಈಸ್ಟರ್ನ್ ಆಂಡ್ ಯಂಗ್ ವರದಿ ನೀಡಿದೆ.

ಇದನ್ನೂ ಓದಿ:ಅಮಿತಾಬ್ ಬಚ್ಚನ್ ಕಾರಣಕ್ಕೆ ದಿಲ್ಜೀತ್​​ಗೆ ಬಂತು ಖಲಿಸ್ಥಾನಿಗಳ ಬೆದರಿಕೆ

ದೆಹಲಿ, ಜೈಪುರ, ಹೈದರಾಬಾದ್, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ನಡೆದ 14 ಶೋಗಳಿಗೆ ಒಟ್ಟು 3.2 ಲಕ್ಷಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದಾರೆ. ದೆಹಲಿಯ ಒಂದೇ ಶೋನಲ್ಲಿ 55,000 ಅಭಿಮಾನಿಗಳು ಭಾಗವಹಿಸಿ ದಾಖಲೆ ನಿರ್ಮಿಸಿದ್ದರು. ಅದು ಮಾತ್ರವೇ ಅಲ್ಲದೆ ವರದಿಯ ಪ್ರಕಾರ, ಒಟ್ಟು ಪ್ರೇಕ್ಷಕರಲ್ಲಿ 49% ರಷ್ಟು ಜನರು ಮಧ್ಯಮ ಮತ್ತು ಸಣ್ಣ ನಗರಗಳಿಂದ ಬಂದವರಾಗಿದ್ದಾರೆ. ಇದು ಭಾರತದ ಸಣ್ಣ ನಗರಗಳಲ್ಲಿಯೂ ಲೈವ್ ಕಾರ್ಯಕ್ರಮಗಳಿಗೆ ಇರುವ ಭಾರೀ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ.

ಡಿಸೆಂಬರ್ 2024ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಭಾಷಾ ವಿವಾದವೊಂದು ಸೃಷ್ಟಿಯಾಗಿತ್ತು. ಬೆಂಗಳೂರಿನಲ್ಲಿ ಶೋ ನಡೆದಾಗ ಸ್ಥಳೀಯ ಅಭಿಮಾನಿಯೊಬ್ಬರು ಮತ್ತೊಬ್ಬ ಪ್ರೇಕ್ಷಕನಿಗೆ ಕನ್ನಡದಲ್ಲಿ ಮಾತನಾಡಲು ಒತ್ತಾಯಿಸಿದ್ದ ಎಂದು ಹೇಳಿದ್ದು ಸುದ್ದಿ ಆಗಿತ್ತು. ಇದು ಆ ಸಮಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಭಾರತದ ಹೊರತಾಗಿ, ಈ ಪ್ರವಾಸವು ಅಮೆರಿಕ, ಕೆನಡಾ ಮತ್ತು ಯುರೋಪ್‌ನಲ್ಲೂ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ಜಾಗತಿಕವಾಗಿ ಸುಮಾರು 137 ಮಿಲಿಯನ್ ಡಾಲರ್ ನೇರ ಆದಾಯ ಗಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us