‘ದಿ ಬೆಂಗಾಲ್ ಫೈಲ್ಸ್’ ಟೀಸರ್ ಬಿಡುಗಡೆ; ಕಾಶ್ಮೀರ್ ಫೈಲ್ಸ್ ರೀತಿ ಇನ್ನೊಂದು ಕಥೆ

ನೈಜ ಘಟನೆ ಆಧರಿಸಿ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಸಿದ್ಧವಾಗುತ್ತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್ 5ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಈ ಟೀಸರ್ ಮೂಲಕ ಸಿನಿಮಾ ಮೇಲಿನ ಕೌತುಕ ಹೆಚ್ಚಿಸಲಾಗಿದೆ. ಪಲ್ಲವಿ ಜೋಶಿ, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ದಿ ಬೆಂಗಾಲ್ ಫೈಲ್ಸ್’ ಟೀಸರ್ ಬಿಡುಗಡೆ; ಕಾಶ್ಮೀರ್ ಫೈಲ್ಸ್ ರೀತಿ ಇನ್ನೊಂದು ಕಥೆ
The Bengal Files

Updated on: Jun 12, 2025 | 7:17 PM

ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನ ಮಾಡುತ್ತಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮೇಲೆ ತುಂಬ ನಿರೀಕ್ಷೆ ಇದೆ. ಯಾಕೆಂದರೆ, ಈ ಸಿನಿಮಾ ಕೂಡ ‘ದಿ ಕಾಶ್ಮೀರ್ ಫೈಲ್ಸ್’ ರೀತಿ ಸತ್ಯ ಘಟನೆ ಆಧರಿಸಿ ತಯಾರಾಗುತ್ತಿದೆ. ಕೋಮು ಸಂಘರ್ಷದ ಕಥೆಯನ್ನು ಇಟ್ಟುಕೊಂಡು ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇಂದು (ಜೂನ್ 12) ‘ದಿ ಬೆಂಗಾಲ್ ಫೈಲ್ಸ್’ (The Bengal Files) ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಲಾಗಿದೆ. ಸಿನಿಮಾದ ಥೀಮ್ ಏನು ಎಂಬುದು ಈ ಟೀಸರ್ ಮೂಲಕ ಗೊತ್ತಾಗಿದೆ. ಸೆಪ್ಟೆಂಬರ್ 5ರಂದು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆ ಆಗಲಿದೆ.

ಭಾರತದ ಇತಿಹಾಸದಲ್ಲಿ ಅಡಗಿರುವ ಕೆಲವು ಕಹಿ ಘಟನೆಗಳನ್ನೇ ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾ ಮೂಲಕ ತೋರಿಸುತ್ತಿದ್ದಾರೆ. ‘ಕಾಶ್ಮೀರ ನಿಮ್ಮನ್ನು ನೋಯಿಸಿದ್ದರೆ ಬಂಗಾಳ ಕೂಡ ನಿಮ್ಮನ್ನು ನೋಯಿಸಲಿದೆ’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಕ್ಯಾಪ್ಷನ್ ನೀಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟೀಸರ್ ಹಂಚಿಕೊಂಡಿದ್ದಾರೆ.

‘ನಾನೊಬ್ಬ ಕಾಶ್ಮೀರಿ ಪಂಡಿತ. ಹಾಗಾಗಿ ಪೂರ್ತಿ ಭರವಸೆಯೊಂದಿಗೆ ಹೇಳಬಲ್ಲೆ. ಬಂಗಾಳ ಕೂಡ ಇನ್ನೊಂದು ಕಾಶ್ಮೀರದ ರೀತಿ ಆಗುತ್ತಿದೆ. ಸ್ವಾತಂತ್ರ್ಯ ಸಿಕ್ಕು 80 ವರ್ಷ ಕಳೆದ ನಂತರವೂ ನಾವು ಕೋಮು ರಾಜಕೀಯದ ಜೊತೆ ಹೋರಾಡುತ್ತಿದ್ದೇವೆ. ನಾವು ನಿಜಕ್ಕೂ ಸ್ವತಂತ್ರರಾಗಿದ್ದೇವಾ? ಸ್ವತಂತ್ರರಾಗಿದ್ದೇವೆ ಎಂಬುದಾದರೆ ಇಷ್ಟು ಅಸಹಾಯಕರಾಗಿದ್ದೇವೆ ಯಾಕೆ?’ ಎಂಬ ಡೈಲಾಗ್​ನೊಂದಿಗೆ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟೀಸರ್ ಆರಂಭ ಆಗುತ್ತದೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದಲ್ಲಿನ ಎಲ್ಲ ಪ್ರಮುಖ ಪಾತ್ರಗಳನ್ನು ಈ ಟೀಸರ್​ನಲ್ಲಿ ತೋರಿಸಲಾಗಿದೆ. ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಅನುಪಮ್ ಖೇರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಟೀಸರ್ ನೋಡಿದ ಬಳಿಕ ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ರೀತಿ ‘ದಿ ಬೆಂಗಾಲ್ ಫೈಲ್ಸ್’ ಕೂಡ ಸೆನ್ಸೇಷನ್ ಸೃಷ್ಟಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ತಮ್ಮದೇ ಸಿನಿಮಾದ ಹೀರೋಗೆ ಗೇಟ್​ಪಾಸ್ ನೀಡಿದ ವಿವೇಕ್ ಅಗ್ನಿಹೋತ್ರಿ; ಏನಿದು ಕಿರಿಕ್?

ಈ ಮೊದಲು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾಗೆ ‘ದಿ ದೆಹಲಿ ಫೈಲ್ಸ್’ ಎಂದು ಹೆಸರು ಇಡಲಾಗಿತ್ತು. ಆದರೆ ಜನರಿಂದ ಶೀರ್ಷಿಕೆ ಬದಲಾವಣೆಗೆ ಸಲಹೆ ಕೇಳಿಬಂತು. ಆದ್ದರಿಂದ ‘ದಿ ಬೆಂಗಾಲ್ ಫೈಲ್ಸ್’ ಎಂದು ವಿವೇಕ್ ಅಗ್ನಿಹೋತ್ರಿ ಅವರು ಟೈಟಲ್ ಬದಲಾವಣೆ ಮಾಡಿದರು. ಈ ಚಿತ್ರದ ಎರಡನೇ ಪಾರ್ಟ್ ಕೂಡ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.