‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್ ಗೌರವ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೆಸರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿ ಇದೆ. ವಿವೇಕ್ ಅಗ್ನೊಹೋತ್ರಿ ಕೆಲಸವನ್ನು ಗೌರವಿಸಿ ನ್ಯಾಷನಲ್ ಅವಾರ್ಡ್​ ನೀಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಅಜಿಂಕ್ಯಾ ಡಿವೈ ಪಾಟಿಲ್ ಯೂನಿವರ್ಸಿಟಿಯವರು ವಿವೇಕ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಇದರಿಂದ ಅವರು ಖುಷಿಯಾಗಿದ್ದಾರೆ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಡಾಕ್ಟರೇಟ್ ಗೌರವ
ವಿವೇಕ್ ಅಗ್ನಿಹೋತ್ರಿ
Follow us
ರಾಜೇಶ್ ದುಗ್ಗುಮನೆ
|

Updated on:Feb 02, 2024 | 10:19 AM

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲಿ ಇದೆ. ನೈಜ ಘಟನೆಗಳನ್ನು ಆಧರಿಸಿ ಅವರು ಸಿನಿಮಾ ಮಾಡುತ್ತಾರೆ. 90ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಮಾಡಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್​ಹಿಟ್ ಆಯಿತು. ಕೊವಿಡ್ ಲಸಿಕೆ ಕಂಡು ಹಿಡಿದ ಘಟನೆ ಆಧರಿಸಿ ಸಿದ್ಧಗೊಂಡ ‘ದಿ ವ್ಯಾಕ್ಸಿನ್ ವಾರ್’ ಚಿತ್ರ ವೀಕ್ಷಕರಿಂದ ಮೆಚ್ಚುಗೆ ಪಡೆಯಿತು. ಈಗ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಇದನ್ನು ಸ್ವೀಕರಿಸಿ ವಿವೇಕ್ ಅಗ್ನಿಹೋತ್ರಿ ಅವರು ಜೀವನದ ಬಗ್ಗೆ ಮಾತನಾಡಿದ್ದಾರೆ.

ವಿವೇಕ್ ಅಗ್ನೊಹೋತ್ರಿ ಅವರ ಕೆಲಸವನ್ನು ಗೌರವಿಸಿ ನ್ಯಾಷನಲ್ ಅವಾರ್ಡ್​ ನೀಡಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿರುವ ಅಜಿಂಕ್ಯಾ ಡಿವೈ ಪಾಟಿಲ್ ಯೂನಿವರ್ಸಿಟಿಯವರು ವಿವೇಕ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಅವರು ಖುಷಿಯಿಂದ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ನಾನು ತಿಳಿದ ಐದು ಜೀವನ ಕಲಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಾನು ಏನನ್ನು ಅಭ್ಯಾಸ ಮಾಡುತ್ತೇನೋ ಅದನ್ನೇ ಮಾತನಾಡುತ್ತೇನೆ. ನನ್ನ ಜೀವನದ ತಿಳುವಳಿಕೆಯನ್ನು ರೂಪಿಸಿದ್ದು ಐದು ಸಂಸ್ಥೆಗಳು. ನಾನು ಸಾಧಿಸಿದ ಸಣ್ಣ ಯಶಸ್ಸಿಗೆ ಅವರೇ ಕಾರಣ. ನಾನು ಕಲಿತ ಶಾಲೆ, ನನ್ನ ಕಾಲೇಜು, ನಾನು ಕಲಿತ ಯೂನಿವರ್ಸಿಟಿಗಳು ನನ್ನ ಮೊದಲ ಗುರು. ನಿರ್ವಹಣೆಯಿಂದ ನಾನು ಕಲಿತಿದ್ದು ನನ್ನ ಎರಡನೇ ಗುರು. ಸಿನಿಮಾ ಮೂರನೇ ಗುರು. ಆಧ್ಯಾತ್ಮಿಕತೆ ನನ್ನ ನಾಲ್ಕನೇ ಗುರು. ನನ್ನ ಐದನೇ ಮತ್ತು ಕೊನೆಯ ಕಲಿಕೆಯೆಂದರೆ ಯಾವುದೇ ನಿಯಮಗಳಿಲ್ಲ ಎಂದು ನಾನು ಅರಿತುಕೊಂಡಿದ್ದು’ ಎಂದಿದ್ದಾರೆ ಅವರು.

ಇದನ್ನೂ ಓದಿ: Vivek Agnihotri: ಭಾರೀ ಜನಪ್ರಿಯತೆ ಗಳಿಸಲು ವಿವೇಕ್ ಅಗ್ನಿಹೋತ್ರಿ ಸವೆಸಿದ ವರ್ಷಗಳೆಷ್ಟು?

ವಿವೇಕ್ ಅಗ್ನಿಹೋತ್ರಿ ಅವರು ‘ದಿ ವ್ಯಾಕ್ಸಿನ್ ವಾರ್’ ಬಳಿಕ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇದಕ್ಕೆ ‘ಪರ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಸಾಹಿತಿ ಎಸ್​ಎಲ್​ ಬೈರಪ್ಪ ಬರೆದ ‘ಪರ್ವ’ ಕಾದಂಬರಿ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಸಿನಿಮಾ ಮೂರು ಸಿನಿಮಾ ಪಾರ್ಟ್​​ಗಳಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:29 am, Fri, 2 February 24