ಸೋನು ಸೂದ್​ಗಾಗಿ ಸ್ಕ್ರಿಪ್ಟ್​ ಬದಲಾಯಿಸುತ್ತಿದ್ದಾರೆ ನಿರ್ದೇಶಕರು; ಅಚ್ಚರಿಯ ವಿಚಾರ ಬಿಚ್ಚಿಟ್ಟ ಸೋನು ಸೂದ್

ಸೋನು ಸೂದ್​ಗಾಗಿ ಸ್ಕ್ರಿಪ್ಟ್​ ಬದಲಾಯಿಸುತ್ತಿದ್ದಾರೆ ನಿರ್ದೇಶಕರು; ಅಚ್ಚರಿಯ ವಿಚಾರ ಬಿಚ್ಚಿಟ್ಟ ಸೋನು ಸೂದ್
ಸೋನು ಸೂದ್

ಸೋನು ಸೂದ್ ಅವರು ಈಗ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ‘ರೋಡೀಸ್​’ 18ನೇ ಸೀಸನ್ ಆರಂಭಗೊಂಡಿದೆ. ಈ ಶೋನ ನಿರೂಪಣೆ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಹೊಸ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ.

TV9kannada Web Team

| Edited By: Rajesh Duggumane

Apr 23, 2022 | 11:26 AM

ನಟ ಸೋನು ಸೂದ್ (Sonu Sood) ವಿಲನ್ ರೋಲ್​ ಮೂಲಕವೇ ಹೆಚ್ಚು ಗುರುತಿಸಿಕೊಂಡವರು. ಖಡಕ್​ ವಿಲನ್ ಆಗಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಆದರೆ, ಕೊವಿಡ್ ಮೊದಲ ಅಲೆ ಕಾಣಿಸಿಕೊಂಡ ನಂತರದಲ್ಲಿ ಸೋನು ಸೂದ್ ಅವರ ಇಮೇಜ್ ಸಂಪೂರ್ಣ ಬದಲಾಗಿದೆ. ಅವರು ರಿಯಲ್ ಲೈಫ್ ಹೀರೋ ಆಗಿದ್ದಾರೆ. ಸಾವಿರಾರು ಜನರಿಗೆ ಸಹಾಯ ಮಾಡುವ ಮೂಲಕ ಅನೇಕರ ಪಾಲಿಗೆ ದೇವರಾಗಿದ್ದಾರೆ. ದೇವರ ಕೋಣೆಯಲ್ಲಿ ಸೋನು ಸೂದ್ ಅವರ ಭಾವಚಿತ್ರ ಇಟ್ಟು ಪೂಜಿಸುತ್ತಿರುವ ಫೋಟೋಗಳು ಈ ಮೊದಲು ವೈರಲ್ ಆಗಿದ್ದವು. ಈಗ ಸೋನು ಸೂದ್​ಗೆ ಯಾರೊಬ್ಬರೂ ವಿಲನ್ ರೋಲ್​ಅನ್ನು ಆಫರ್ ಮಾಡುತ್ತಿಲ್ಲ. ಈ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

‘ಯಾರೂ ನನಗೆ ನೆಗೆಟಿವ್ ರೋಲ್​​ಗಳನ್ನು ನೀಡುತ್ತಿಲ್ಲ. ಕೊವಿಡ್​​ಗೂ ಮೊದಲು ನಾನು ಕೆಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಅದರ ಕಥೆಯನ್ನು ನಿರ್ದೇಶಕರು ನನಗೋಸ್ಕರ ಬದಲಾಯಿಸಿದ್ದಾರೆ. ನನ್ನನ್ನು ವಿಲನ್ ರೀತಿ ತೋರಿಸದೇ ಇರಲು ಪ್ರಯತ್ನಿಸಿದ್ದಾರೆ. ಇದು ನನಗೆ ಸಂಪೂರ್ಣ ಹೊಸ ಇನ್ನಿಂಗ್ಸ್’ ಎಂದಿದ್ದಾರೆ ಸೋನು ಸೂದ್.

ಸೋನು ಸೂದ್​ಗೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರ-ವಿಚಿತ್ರ ಕೋರಿಕೆಗಳು ಬರುತ್ತವೆ. ಇದಕ್ಕೆ ಅವರು ಬೇಸರ ಮಾಡಿಕೊಂಡಿಲ್ಲ. ‘ನಾನು ಕಳೆದ 2 ವರ್ಷಗಳಿಂದ ಹಲವು ವಿಚಾರಗಳನ್ನು ನೋಡುತ್ತಿದ್ದೇನೆ. ಕೆಲವರು ಎಣ್ಣೆ ಕೊಡಿಸಿ ಎಂದು ಕೇಳುತ್ತಾರೆ. ಇನ್ನೂ ಕೆಲವರು, ತಮ್ಮ ಹೆಂಡತಿಯನ್ನು ಭೇಟಿ ಮಾಡಿ ಎಂದು ನನ್ನ ಬಳಿ ಕೋರುತ್ತಾರೆ. ಇದು ಸೋಶಿಯಲ್ ಮೀಡಿಯಾದ ಪವರ್. ಒಂದು ವ್ಯಕ್ತಿಯ ಜೊತೆ ಯಾರಾದರೂ ಕ್ಲೋಸ್ ಆದರೆ ಮಾತ್ರ ಈ ರೀತಿ ಹೇಳಲು ಸಾಧ್ಯ’ ಎಂದಿದ್ದಾರೆ ಸೋನು ಸೂದ್.

ಸೋನು ಸೂದ್ ಅವರು ಈಗ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ‘ರೋಡೀಸ್​’ 18ನೇ ಸೀಸನ್ ಆರಂಭಗೊಂಡಿದೆ. ಈ ಶೋನ ನಿರೂಪಣೆ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ಹೊಸ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಹೊಸಬರು ಹಾಗೂ ಈ ಹಿಂದಿನ ಸೀಸನ್​ ಕಂಟೆಸ್ಟಂಟ್​ಗಳು ಸೀಸನ್​ 18ರಲ್ಲಿ ಸ್ಪರ್ಧಿಸಿದ್ದಾರೆ. ಈ ಶೋಗೆ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಶೋ ಬಗ್ಗೆಯೂ ಸೋನು ಸೂದ್ ಮಾತನಾಡಿದ್ದಾರೆ. ‘ನಾನು ರೋಡಿಸ್ ಪ್ರಯಾಣವನ್ನು ಮೊದಲಿಂದಲೂ ನೋಡುತ್ತಾ ಬಂದಿದ್ದೇನೆ. ಅದನ್ನು ಹೋಸ್ಟ್ ಮಾಡುವುದು ದೊಡ್ಡ ಜವಾಬ್ದಾರಿ. ಸ್ಪರ್ಧಿಗಳನ್ನು ನಿಭಾಯಿಸಲು ನನ್ನ ಬಳಿ ಸಾಧ್ಯವೇ ಎಂದು ನಾನೇ ಆಗಾಗ ಆಶ್ಚರ್ಯ ಪಡುತ್ತೇನೆ. ಶೋ ತುಂಬಾನೇ ನೈಜವಾಗಿ ಮೂಡಿ ಬರುತ್ತಿದೆ. ಈ ಶೋ ಬಗ್ಗೆ ಖುಷಿ ಇದೆ’ ಎಂದು ಸೋನು ಸೂದ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್​ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಿದ ನಟ ಸೋನು ಸೂದ್

ಬಿಯರ್​ ದಾನ ಮಾಡಿ ಎಂದು ಸೋನು ಸೂದ್​ಗೆ ಮನವಿ ಮಾಡಿದ ಭೂಪ; ರಿಯಲ್​ ಹೀರೋ ಉತ್ತರ ಏನು?

Follow us on

Related Stories

Most Read Stories

Click on your DTH Provider to Add TV9 Kannada