AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೆಲದ ಮೇಲೆ ಬಿದ್ದ ವಾಂತಿಯನ್ನೂ ಸ್ವಚ್ಛಗೊಳಿಸಿದ್ದೇನೆ’; ಕಷ್ಟದ ದಿನಗಳನ್ನು ನೆನೆದ ರವೀನಾ ಟಂಡನ್

1991ರಲ್ಲಿ ತೆರೆಗೆ ಬಂದ ‘ಪತ್ತರ್​ ಕೆ ಫೂಲ್​’ ಚಿತ್ರ ರವೀನಾ ಅವರ ಮೊದಲ ಸಿನಿಮಾ. 30 ವರ್ಷಗಳ ಕಾಲ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಆರಂಭದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದರು.

‘ನೆಲದ ಮೇಲೆ ಬಿದ್ದ ವಾಂತಿಯನ್ನೂ ಸ್ವಚ್ಛಗೊಳಿಸಿದ್ದೇನೆ’; ಕಷ್ಟದ ದಿನಗಳನ್ನು ನೆನೆದ ರವೀನಾ ಟಂಡನ್
ರವೀನಾ ಟಂಡನ್
TV9 Web
| Edited By: |

Updated on: Apr 23, 2022 | 6:29 AM

Share

‘ಕೆಜಿಎಫ್ 2’ ಸಿನಿಮಾದಲ್ಲಿ (KGF Chapter 2) ರಮಿಕಾ ಸೇನ್ ಆಗಿ ಮಿಂಚಿದ್ದಾರೆ ರವೀನಾ ಟಂಡನ್ (Raveena Tandon). ಹಲವು ವರ್ಷಗಳ ಬಳಿಕ ಅವರು ಕನ್ನಡ ಫಿಲ್ಮ್​​ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಿದ್ದಾರೆ. ರವೀನಾ ಚಿತ್ರರಂಗಕ್ಕೆ ಬಂದು 30 ವರ್ಷಗಳು ಕಳೆದಿವೆ. ನಿರ್ದೇಶಕ ರವಿ ಟಂಡನ್ ಅವರ ಮಗಳು ರವೀನಾ. ಆದಾಗ್ಯೂ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಅವರು. ಸಿನಿಮಾ ಹಿನ್ನೆಲೆಯಿಂದ ಬಂದರೂ ಅವರಿಗೆ ಹೂವಿನ ಹಾದಿ ಸಿಗಲಿಲ್ಲ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಆರಂಭದ ದಿನಗಳು ಎಷ್ಟು ಕಷ್ಟವಾಗಿದ್ದವು ಎನ್ನುವುದನ್ನು ರವೀನಾ ವಿವರಿಸಿದ್ದಾರೆ.

1991ರಲ್ಲಿ ತೆರೆಗೆ ಬಂದ ‘ಪತ್ತರ್​ ಕೆ ಫೂಲ್​’ ಚಿತ್ರ ರವೀನಾ ಅವರ ಮೊದಲ ಸಿನಿಮಾ. 30 ವರ್ಷಗಳ ಕಾಲ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಆರಂಭದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದರು. ಸ್ಟುಡಿಯೋ ನೆಲವನ್ನು ಅವರು ಸ್ವಚ್ಛ ಮಾಡುತ್ತಿದ್ದರು. ಅವರು ಪಟ್ಟ ಕಷ್ಟಗಳು ಹಲವು. ಈ ಬಗ್ಗೆ ರವೀನಾ ಈಗ ಮಾಹಿತಿ ಹಂಚಿಕೊಂಡಿದ್ದಾರೆ. ಮಿಡ್​-ಡೇಗೆ ನೀಡಿದ ಸಂದರ್ಶನದಲ್ಲಿ ರವೀನಾ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

‘ನಾನು ಸ್ಟುಡಿಯೋ ಫ್ಲೋರ್‌ಗಳನ್ನು ಶುಚಿಗೊಳಿಸುವುದರಿಂದ ಹಿಡಿದು, ಅಲ್ಲಿ ವಾಂತಿಯನ್ನು ಒರೆಸುವವರೆಗೆ ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪ್ರಹ್ಲಾದ್ ಕಕ್ಕರ್​ಗೆ ಸಹಾಯಕಳಾಗಿ ಇದ್ದೆ. ನಾನು ಒಂದಿಲ್ಲೊಂದು ವಿಚಾರದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದೆ. ನಾನು ನಟಿ ಆಗುತ್ತೇನೆ ಎಂದು ಯೋಚಿಸುತ್ತಲೇ ಬೆಳೆದವಳು ಅಲ್ಲ’ ಎಂದಿದ್ದಾರೆ ರವೀನಾ.

ರವೀನಾ ಟಂಡನ್​ ಅವರು 1999ರಲ್ಲಿ ತೆರೆಗೆ ಬಂದ ಕನ್ನಡದ ‘ಉಪೇಂದ್ರ’ ಸಿನಿಮಾದಲ್ಲಿ ನಟಿಸಿದ್ದರು. ಇದಾದ ನಂತರ ಅವರು ಸ್ಯಾಂಡಲ್​​ವುಡ್​ಗೆ ಮರಳಿರಲಿಲ್ಲ. ‘ಕೆಜಿಎಫ್: ಚಾಪ್ಟರ್​ 2’ ಚಿತ್ರದಿಂದ ಅವರು ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಧಾನಿ ರಮಿಕಾ ಸೇನ್ ಆಗಿ ಕಾಣಿಸಿಕೊಂಡಿದ್ದಾರೆ. ಇಂಟರ್​ವಲ್​ ನಂತರದಲ್ಲಿ ಬರುವ ಈ ಪಾತ್ರ ಇಡೀ ಚಿತ್ರದಲ್ಲಿ ತುಂಬಾನೇ ಮಹತ್ವ ಪಡೆದುಕೊಂಡಿದೆ. ಅವರ ಪಾತ್ರಕ್ಕೆ ಎಲ್ಲರೂ ಉಘೇ ಎನ್ನುತ್ತಿದ್ದಾರೆ.

‘ಕೆಜಿಎಫ್​ 2’ ಸಿನಿಮಾ ಹಿಂದಿಗೂ ಡಬ್​ ಆಗಿ ತೆರೆಕಂಡಿದ್ದು, ಉತ್ತರ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾಸ್​ ಪ್ರೇಕ್ಷಕರು ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ರವೀನಾ ಟಂಡನ್​ ಅವರ ಪಾತ್ರ ತೆರೆ ಮೇಲೆ ಬಂದಾಗ ಅವರ ಫ್ಯಾನ್ಸ್​ ಹುಚ್ಚೆದ್ದು ಕುಣಿದಿದ್ದಾರೆ. ಅಷ್ಟೇ ಅಲ್ಲ, ಕೆಲವರು ಥಿಯೇಟರ್​ ಪರದೆಗೆ ದುಡ್ಡು ಎಸೆದಿದ್ದಾರೆ. ಅಭಿಮಾನಿಗಳು ನಾಣ್ಯಗಳನ್ನು ಎಸೆಯುತ್ತಿರುವ ವಿಡಿಯೋವನ್ನು ರವೀನಾ ಟಂಡನ್​ ಶೇರ್​ ಮಾಡಿಕೊಂಡಿದ್ದಾರೆ.

‘ತುಂಬ ಸಮಯದ ಬಳಿಕ ಜನರು ನಾಣ್ಯ ಎಸೆಯುವುದನ್ನು ನೋಡುತ್ತಿದ್ದೇನೆ’ ಎಂದು ಅವರು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ. ರವೀನಾ ಟಂಡನ್​ ಹಂಚಿಕೊಂಡಿರುವ ವಿಡಿಯೋದಲ್ಲಿ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಮೇಕಿಂಗ್​ ತುಣುಕುಗಳು ಕೂಡ ಇವೆ.

ಇದನ್ನೂ ಓದಿ: ಆರ್​ಆರ್​ಆರ್​ ಸಿನಿಮಾ ಮಾಡಿರದ ದಾಖಲೆ ಮಾಡಿದ ‘ಕೆಜಿಎಫ್ 2’ ಸಿನಿಮಾ; ಏನದು?

ಇನ್ನೊಂದು ಪ್ಯಾನ್​​ ಇಂಡಿಯಾ ಚಿತ್ರದಲ್ಲಿ ‘ಕೆಜಿಎಫ್​ 2’ ನಟಿ ಅರ್ಚನಾ; ‘ಮ್ಯೂಟ್​’ ಟ್ರೇಲರ್​ ​ಮೆಚ್ಚಿದ ರವೀನಾ ಟಂಡನ್​

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ