ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಮಾಸ್ ಸಿನಿಮಾ ನೀಡಿದ್ದಾರೆ. ‘ಪಠಾಣ್’ (Pathan Movie) ಹಾಗೂ ‘ಜವಾನ್’ ಸಿನಿಮಾ ಮೂಲಕ ಅವರು ಗೆದ್ದಿದ್ದಾರೆ. ಈಗ ಅವರ ನಟನೆಯ ‘ಡಂಕಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಟೀಸರ್ ಶಾರುಖ್ ಖಾನ್ ಜನ್ಮದಿನದ ಪ್ರಯುಕ್ತ ಇಂದು (ನವೆಂಬರ್ 2) ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಶಾರುಖ್ ಅವರನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅವರು ಮಾಸ್ ಅವತಾರ ಬಿಟ್ಟು ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ರಾಜ್‌ಕುಮಾರ್ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಭಾವನೆಗಳಿಗೆ, ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಎಂತಹುದೇ ಮಾಸ್ ಹೀರೋ ಆದರೂ ಅವರಿಗೆ ಬೇರೆಯದೇ ಗೆಟಪ್ ನೀಡುತ್ತಾರೆ. ‘ಡಂಕಿ’ ಚಿತ್ರದಲ್ಲೂ ಅದು ಮುಂದುವರಿದಿದೆ. ಶಾರುಖ್ ಖಾನ್ ಅವರು ಕ್ಲಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಲಂಡನ್ಗೆ ಹೊರಡೋ ಕನಸು ಕಾಣುತ್ತಾರೆ ಶಾರುಖ್ ಖಾನ್ ಹಾಗೂ ಅವರ ಗೆಳೆಯರು. ಈ ಕನಸನ್ನು ನನಸು ಮಾಡಿಕೊಳ್ಳಲು ಅವರು ಪಡುವ ಕಷ್ಟಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ನೈಜ ಘಟನೆ ಆಧರಿಸಿ ಸಿನಿಮಾ ಸಿದ್ಧಗೊಂಡಿದೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.
ಡಿಸೆಂಬರ್ 22ರಂದು ‘ಡಂಕಿ’ ಸಿನಿಮಾ ರಿಲೀಸ್ ಆಗಲಿದೆ. ಆದರೆ, ಟೀಸರ್ನಲ್ಲಿ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ‘ಡಂಕಿ’ ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದ್ದು ಖಚಿತ ಎನ್ನುವ ಅಭಿಪ್ರಾಯ ಎಲ್ಲ ಕಡೆಗಳಲ್ಲೂ ವ್ಯಕ್ತವಾಗಿದೆ. ಈ ಟೀಸರ್ನ ಮತ್ತೊಂದು ಭಾಗ ಶೀಘ್ರವೇ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. ಅದರಲ್ಲಿ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ಸಿಗೋ ಸಾಧ್ಯತೆ ಇದೆ.
SRK – RAJKUMAR HIRANI: ‘DUNKI’ TEASER IS HERE… The video unit is EXCEPTIONAL… #DunkiDrop1 – a glimpse into the world of #Dunki – arrives on #SRK’s birthday today… In cinemas on #Christmas2023.#SRK #RajkumarHirani #JioStudios #GauriKhan #DunkiTeaser pic.twitter.com/g8ZqqzCYqS
— taran adarsh (@taran_adarsh) November 2, 2023
ಇದನ್ನೂ ಓದಿ: ಶಾರುಖ್ ಖಾನ್ ಜನ್ಮದಿನ: 6,300 ಕೋಟಿ ರೂಪಾಯಿ ಒಡೆಯನಿಗೆ ಹಣ ಹೇಗೆಲ್ಲ ಬರುತ್ತೆ ಗೊತ್ತಾ?
ಶಾರುಖ್ ಖಾನ್ ಜೊತೆ ಈ ಚಿತ್ರದಲ್ಲಿ ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Thu, 2 November 23