ದಕ್ಷಿಣ ಭಾರತ ಮಾತ್ರವಲ್ಲ ಕೊರಿಯಾ ಸಿನಿಮಾಗಳನ್ನೂ ರಿಮೇಕ್ ಮಾಡಿದೆ ಬಾಲಿವುಡ್​; ಇಲ್ಲಿದೆ ಹೆಸರು

| Updated By: ರಾಜೇಶ್ ದುಗ್ಗುಮನೆ

Updated on: Feb 07, 2024 | 12:52 PM

ರೀಮೇಕ್‌ ಸಿನಿಮಾ ಮಾತು ಬಂದಾಗಲೆಲ್ಲಾ ಬಾಲಿವುಡ್‌ ಮಂದಿಗೆ ದಕ್ಷಿಣ ಭಾರತದ ಸಿನಿಮಾಗಳ ನೆನಪಾಗುತ್ತದೆ. ಚಿತ್ರಗಳನ್ನು ರಿಮೇಕ್ ಮಾಡಿ ಬಾಲಿವುಡ್ ಕೋಟಿಗಟ್ಟಲೆ ಗಳಿಸಿದೆ. ಇದರ ಜೊತೆಗೆ ಕೊರಿಯನ್ ಚಿತ್ರಗಳನ್ನೂ ರಿಮೇಕ್ ಮಾಡಿ ಕೆಲವು ಸಿನಿಮಾಗಳು ಗೆಲುವು ಕಂಡಿವೆ. ಆ ಬಗ್ಗೆ ಇಲ್ಲಿದೆ ವಿವರ.

ದಕ್ಷಿಣ ಭಾರತ ಮಾತ್ರವಲ್ಲ ಕೊರಿಯಾ ಸಿನಿಮಾಗಳನ್ನೂ ರಿಮೇಕ್ ಮಾಡಿದೆ ಬಾಲಿವುಡ್​; ಇಲ್ಲಿದೆ ಹೆಸರು
ದಕ್ಷಿಣ ಭಾರತ ಮಾತ್ರವಲ್ಲ ಕೊರಿಯಾ ಸಿನಿಮಾಗಳನ್ನೂ ರಿಮೇಕ್ ಮಾಡಿದೆ ಬಾಲಿವುಡ್
Follow us on

ಬಾಲಿವುಡ್ (Bollywood)​ ಚಿತ್ರರಂಗ ಮತ್ತೆ ಚೇತರಿಸಿಕೊಂಡಿದೆ. ಇತ್ತೀಚೆಗೆ ದಕ್ಷಿಣ ಭಾರತದಿಂದ ಹಲವು ಸಿನಿಮಾಗಳನ್ನು ರಿಮೇಕ್ ಮಾಡಿ ಗೆಲುವು ಕಾಣದೇ ಇರುವ ಅನೇಕ ಹೀರೋಗಳಿದ್ದಾರೆ. ಮೊದಲಿನಿಂದಲೂ ರಿಮೇಕ್ ಮಾಡುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ. ಮೊದಲೆಲ್ಲ ಒಟಿಟಿ ವ್ಯಾಪ್ತಿ ಇಷ್ಟು ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಹೀಗಾಗಿ ರಿಮೇಕ್​ ಮಾಡಿದರೂ ಸಿನಿಮಾ ಗೆಲ್ಲುತ್ತಿತ್ತು. ಆದರೆ, ಕಾಲ ಬದಲಾಗಿದೆ. ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ ಕೊರಿಯಾ ಭಾಷೆಯ ಸಿನಿಮಾಗಳನ್ನೂ ಬಾಲಿವುಡ್​ನವರು ರಿಮೇಕ್ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಬಾಲಿವುಡ್‌ನಲ್ಲಿ ರೀಮೇಕ್‌ಗಳ ಮಾತು ಬಂದಾಗಲೆಲ್ಲಾ ದಕ್ಷಿಣ ಭಾರತದ ಸಿನಿಮಾಗಳ ನೆನಪಾಗುತ್ತದೆ. ಚಿತ್ರಗಳನ್ನು ಕಾಪಿ ಮಾಡಿ ಬಾಲಿವುಡ್ ಕೋಟಿಗಟ್ಟಲೆ ಗಳಿಸಿದೆ. ಇದರ ಜೊತೆಗೆ ಕೊರಿಯನ್ ಚಿತ್ರಗಳನ್ನೂ ರಿಮೇಕ್ ಮಾಡಿ ಕೆಲವು ಸಿನಿಮಾಗಳು ಗೆಲುವು ಕಂಡಿವೆ. ಇನ್ನೂ ಕೆಲವು ಸೋತಿವೆ. ಆ ಬಗ್ಗೆ ಇಲ್ಲಿದೆ ವಿವರ.

ಏಕ್ ವಿಲನ್

‘ಏಕ್​ ವಿಲನ್’ 2014ರಲ್ಲಿ ರಿಲೀಸ್ ಆದ ಹಿಂದಿ ಸಿನಿಮಾ. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಶ್ರದ್ಧಾ ಕಪೂರ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದರು. ‘ಏಕ್ ವಿಲನ್’ ಅಂದಿನ ಕಾಲದಲ್ಲಿ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿತ್ತು. ಸಿದ್ದಾರ್ಥ್-ಶ್ರದ್ಧಾ ಕಾಂಬಿಷೇನ್ ಜನರಿಗೆ ಇಷ್ಟ ಆಯಿತು. ಹಾಸ್ಯ ಪಾತ್ರಗಳನ್ನೇ ಮಾಡುತ್ತಿದ್ದ ರಿತೇಶ್ ದೇಶಮುಖ್ ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದರು. ಇದು ಕೊರಿಯನ್ ಭಾಷೆಯ ‘ಐ ಸಾ ದಿ ಡೆವಿಲ್’ ಚಿತ್ರದ ರಿಮೇಕ್. ಈ ಸಿನಿಮಾ ಬಂದಿದ್ದು 2010ರಲ್ಲಿ. ಈ ಕಥೆಯನ್ನು ಭಾರತದ ಪ್ರೇಕ್ಷಕರಿಗೆ ಬೇಕಾದಂತೆ ಬದಲಾಯಿಸಿಕೊಂಡು ಸಿನಿಮಾ ಮಾಡಲಾಗಿದೆ.

ಬರ್ಫಿ

ಪ್ರಿಯಾಂಕಾ ಚೋಪ್ರಾ ಹಾಗೂ ರಣಬೀರ್ ಕಪೂರ್ ನಟನೆಯ ‘ಬರ್ಫಿ’ ರಿಲೀಸ್ ಆಗಿದ್ದು 2012ರಲ್ಲಿ. ಅಂದಿನ ಕಾಲದಲ್ಲೇ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಚಿತ್ರ ಎಲ್ಲರ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಪ್ರಿಯಾಂಕಾ ಹಾಗೂ ರಣಬೀರ್ ನಟನೆ ಗಮನ ಸೆಳೆದಿತ್ತು. ಪ್ರತಿಯೊಬ್ಬ ಕಲಾವಿದರ ಅಭಿನಯವೂ ಮೆಚ್ಚುಗೆಗೆ ಪಾತ್ರವಾಯಿತು. ಈ ಚಿತ್ರವು 2002ರ ಕೊರಿಯನ್ ಸಿನಿಮಾ ‘ಲವರ್ಸ್ ಕನ್ಸರ್ಟೊ’ ಚಿತ್ರದಿಂದ ಪ್ರೇರಿತವಾಗಿದೆ. ‘ಬರ್ಫಿ’ ರಿಮೇಕ್ ಸಿನಿಮಾ ಆಗಿದ್ದರೂ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯಿತು.

‘ಧಮಾಕಾ’

ಕಾರ್ತಿಕ್ ಆರ್ಯನ್ ನಟನೆಯ ‘ಧಮಾಕಾ’ ಸಿನಿಮಾ 2021ರಲ್ಲಿ ರಿಲೀಸ್ ಆಯಿತು. ಕಾರ್ತಿಕ್ ಆರ್ಯನ್ ಅವರ ವೃತ್ತಿ ಜೀವನದಲ್ಲಿ ಅತ್ಯಂತ ವಿಭಿನ್ನ ಶೈಲಿಯನ್ನು ಸಿನಿಮಾ ಇದು. ಹಾಸ್ಯ ಹಾಗೂ ರೊಮ್ಯಾನ್ಸ್ ಬಿಟ್ಟು ಕಾರ್ತಿಕ್ ಆರ್ಯನ್ ಗಂಭೀರ ಪಾತ್ರವನ್ನು ಮಾಡಿದ್ದರು. 2013ರಲ್ಲಿ ಬಂದ ಕೊರಿಯಾದ ಆ್ಯಕ್ಷನ್ ಥ್ರಿಲ್ಲರ್‌ ಸಿನಿಮಾ ‘ದಿ ಟೆರರ್ ಲೈವ್’ ಚಿತ್ರದ ರಿಮೇಕ್. ರಾಮ್ ಮಾಧವಾನಿ ‘ಧಮಾಕಾ’ ಚಿತ್ರವನ್ನು ರಿಮೇಕ್ ಮಾಡಿದ್ದರು.

ಭಾರತ್

2019ರಲ್ಲಿ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಭಾರತ್’ ಚಿತ್ರವನ್ನು ಜನರು ಮೆಚ್ಚಿಕೊಳ್ಳಲಿಲ್ಲ. ಇದರಲ್ಲಿ ಸಲ್ಮಾನ್ ಹಲವು ಶೇಡ್​ನಲ್ಲಿ ಬಂದಿದ್ದರು. ಪಾಕಿಸ್ತಾನ ಮತ್ತು ಭಾರತದ ನಡುವಿನ ಕಥೆ ಸಿನಿಮಾದಲ್ಲಿ ಇತ್ತು. ಈ ಕಥೆಯು 2014ರಲ್ಲಿ ಬಿಡುಗಡೆಯಾದ ಕೊರಿಯಾದ ಚಿತ್ರ ‘ಓಡೆ ಟು ಮೈ ಫಾದರ್’ ನಿಂದ ಸ್ಫೂರ್ತಿ ಪಡೆದಿದೆ. ಈ ಚಿತ್ರದಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದ ಬಗ್ಗೆ ತೋರಿಸಲಾಗಿತ್ತು. ‘ಭಾರತ್’ ಸಿನಿಮಾದಲ್ಲಿ ಭಾರತ ಮತ್ತು ಪಾಕಿಸ್ತಾನ ಎಂದು ತೋರಿಸಲಾಗಿದೆ.

ಇದನ್ನೂ ಓದಿ: ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಈ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ

ರಾಕ್ ಆನ್

ಇದು 2008ರಲ್ಲಿ ತೆರೆಕಂಡ ‘ರಾಕ್ ಆನ್’ ಸಿನಿಮಾ ಜನರಿಗೆ ಇಷ್ಟ ಆಯಿತು. ಆ ಸಮಯದಲ್ಲಿ ಈ ಚಿತ್ರದ ಸಂಗೀತವು ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಅಭಿಷೇಕ್ ಕಪೂರ್ ಮಾಡಿದ ಶೈಲಿ ಎಲ್ಲರ ಗಮನ ಸೆಳೆದಿತ್ತು. ಮ್ಯೂಸಿಕ್ ಬ್ಯಾಂಡ್ ಪರಿಕಲ್ಪನೆಯಲ್ಲಿ ಸಿನಿಮಾ ಮೂಡಿ ಬಂದಿತ್ತು. ಇದು ‘ದಿ ಹ್ಯಾಪಿ ಲೈಫ್’ ಅನ್ನು ಹೋಲುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ